ಬೆಂಗಳೂರು: ರೇಣುಕಾ ಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು (ಮಂಗಳವಾರ ಆ. 12) ದರ್ಶನ್ ಹಾಗೂ ಪವಿತ್ರ ಸೇರಿದಂತೆ 17 ಆರೋಪಿಗಳು ಬೆಂಗಳೂರಿನ 57ನೆಯ ಸೆಷನ್ಸ್ ಕೋಟಿಗೆ ಹಾಜರಾಗಿದ್ದಾರೆ.
ಕೋರ್ಟ್ಗೆ ದರ್ಶನ್, ಪವಿತ್ರಾ ಹಾಗೂ ಇತರರು ಆಗಮಿಸಿದ್ದಾರೆ. ಇಂದಿನ ವಿಚಾರಣೆ ತುಂಬಾನೇ ಮಹತ್ವದ್ದಾಗಲಿದೆ. ಎಲ್ಲಾ ಆರೋಪಿಗಳು ಹಾಜಾರಾದರೆ ಇಂದೇ ಚಾರ್ಜಸ್ ಫ್ರೇಮ್ ಮಾಡುವ ಸಾದ್ಯತೆ ಇತ್ತು. ಆದರೆ, ಎ10 ವಿನಯ್, ಎ15, ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಕೋರ್ಟ್ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9 ಕ್ಕೆ ಮುಂದಿನ ದಿನಾಂಕ ವಿಚಾರಣೆಯನ್ನು ನಿಗದಿ ಪಡಿಸಲಾಗಿದೆ. ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಹಾಜರು ಇರಬೇಕು ಎಂದು ನಿರ್ದೇಶಿಸಿದೆ. ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಕಾಮೆಂಟ್ಸ್, ದರ್ಶನ್ ಫಸ್ಟ್ ರಿಯಾಕ್ಷನ್ ಏನಿದೆ?
