ಬೆಂಗಳೂರು: ರಶ್ಮಿಕ ಮಂದಣ್ಣ ಅವರು ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜೀವನವನ್ನು ಆರಂಭಿಸಿದ ಅವರು ಇದೀಗ ದೇಶದಾದ್ಯಂತ ಬಹುಬೇಡಿಕೆಯ ನಟಿಯಾಗಿದ್ದು, ಬಹುತೇಕ ಎಲ್ಲ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಅವರು ಇದೀಗ ಜೂನಿಯರ್ ಎನ್ಟಿಆರ್ ಅವರ ಜೊತೆ ತೆರೆ ಹಂಚಲಿದ್ದಾರೆ ಎಂಬ ಮಾಹಿತಿ ಇದೀಗ ಎಲ್ಲೆಡೆ ಹಬ್ಬುತ್ತಿದೆ.
ಹೌದು, ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜೀವನವನ್ನು ಆರಂಭಿಸಿದ ನಟಿ ರಶ್ಮಿಕ ಮಂದಣ್ಣ ಅವರು ಇದೀಗ ಜೂನಿಯರ್ ಎನ್ಟಿಆರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊಬಿದ್ದಿದೆ.
ಇನ್ನು ಜೂನಿಯರ್ ಎನ್ಟಿಆರ್ ಜೊತೆ ನಟನೆ ಮಾಡುವುದು ರಶ್ಮಿಕಾ ಮಂದಣ್ಣ ಅವರ ಬಹುದೊಡ್ಡ ಆಸೆಯಾಗಿದ್ದು ಆ ಆಸೆ ಇದೀಗ ಈಡೇರಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈ ಮೊದಲೇ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೆಲಸ ಮಾಡಿದ್ದಾರೆ. ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರವನ್ನು ಮೈತ್ರಿ ಅವರೇ ನಿರ್ಮಾಣ ಮಾಡಿದ್ದರು. ಈ ವೇಳೆ ರಶ್ಮಿಕಾ ಹಾಗೂ ಈ ಸಂಸ್ಥೆ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈಗ ಅದನ್ನು ಮೈತ್ರಿ ಮೂವೀ ಮೇಕರ್ಸ್ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಒಟಿಟಿಗೆ ಲಗ್ಗೆ ಇಡಲು ʼವಿದ್ಯಾಪತಿʼ ಎಂಟ್ರಿ
ಇನ್ನು ಮೈತ್ರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಹೀರೋ ಯಾರು ಎಂಬುದು ಸದ್ಯದ ಪ್ರಶ್ನೆ. ಕೆಲವು ವರದಿಗಳ ಪ್ರಕಾರ ಈ ಚಿತ್ರಕ್ಕೆ ಜೂನಿಯರ್ ಎನ್ಟಿಆರ್ ನಾಯಕ ಎಂದು ಹೇಳಲಾಗುತ್ತಿದೆ. ಮೈತ್ರಿಗೆ ನೀಡಿದ್ದ ಒಂದು ಕಾಲ್ಶಿಟ್ ಜೂನಿಯರ್ ಎನ್ಟಿಆರ್ ಬಳಿ ಇದೆ. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಕೆಲಸ ಶುರುವಾಗಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂದು ಹೇಳಲಾಗುತ್ತಿದೆ.
