ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಅವರು ಬೆಂಗಳೂರಿನ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಕ್ಕೆ ಇದೀಗ ಸೋನು ನಿಗಮ್ ಅವರ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗುವುದರ ಜೊತೆಗೆ ಕನ್ನಡ ಚಿತ್ರರಂಗದ ಹಾಡುಗಳನ್ನು ಹಾಡದಂತೆ ಕನ್ನಡ ಫಿಲಂ ಚೇಂಬರ್ ಬ್ಯಾನ್ ಕೂಡ ಮಾಡಿದೆ.
ಇನ್ನು ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದ ಸೋನು ನಿಗಮ್ ಕೊನೆಗೂ ಕರುನಾಡ ಮಂದಿಗೆ ಕ್ಷಮೆ ಯಾಚಿಸಿದ್ದಾರೆ.
ತಮ್ಮ instagram ಖಾತೆಯಲ್ಲಿ ಕ್ಷಮೆ ಯಾಚಿಸಿದ್ದು, ಕ್ಷಮಿಸಿ ಕರ್ನಾಟಕ, ನನ್ನ ಪ್ರತಿಷ್ಠೆಗಿಂತ ನಿಮ್ಮ ಪ್ರೀತಿ ದೊಡ್ಡದು.. ನಿಮ್ಮನ್ನ ಯಾವಾಗಲೂ ಪ್ರೀತಿಸುತ್ತೇನೆ ಅಂತ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ!
ಹೌದು, ಕನ್ನಡ ಹಾಡು ಹಾಡಿ ಅಂದಿದ್ದಕ್ಕೆ ಉಗ್ರರ ದಾಳಿಗೆ ಹೋಲಿಕೆ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಕನ್ನಡ ಸಿನಿಮಾಗಳಲ್ಲಿ ಹಾಡು ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನ ಕೈಗೊಂಡ ಬೆನ್ನಲ್ಲೇ ಕನ್ನಡಿಗರ ಮತ್ತು ಕರ್ನಾಟಕಕ್ಕೆ ಕ್ಷಮೆ ಕೋರಿದ್ದಾರೆ.
