ಬೆಂಗಳೂರು: ಸದಾ ಒಂದಲ್ಲ ಒಂದು ಕಾಂಟ್ರವರ್ಸಿಯಲ್ಲಿ ಸುದ್ದಿ ಆಗುತ್ತಿರುವ ನಟಿ ರಶ್ಮಿಕ ಮಂದಣ್ಣ ಕಳೆದ ಎರಡು ಮೂರು ದಿನಗಳ ಹಿಂದೆ ಕೊಡುವ ಸಮುದಾಯದಿಂದ ಹೀರೋಯಿನ್ ಆಗಿದ್ದು ಮೊದಲು ನಾನೇ ಎಂದು ಹೇಳುವ ಮೂಲಕ ಕೊಡವ ಸಮುದಾಯದ ಜನರ ಆಕ್ರೋಶಕ್ಕೆ ಒಳಗಾಗಿದ್ದರು.
ಅಲ್ಲದೆ ನನಗೆ ಕನ್ನಡ ಬರುವುದಿಲ್ಲ, ನಾನು ಹೈದರಾಬಾದ್ ನವಳು ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕ ಮಂದಣ್ಣ ಅಪರೂಪಕ್ಕೆ ಕನ್ನಡದ ಬಗ್ಗೆ ಒಂದೊಳ್ಳೆ ಮಾತನಾಡಿದ್ದಾರೆ.
ಹೌದು, ನಟಿ ರಶ್ಮಿಕ ಮಂದಣ್ಣ ಅವರು ಕನ್ನಡ ಚಿತ್ರರಂಗದ ಬಗ್ಗೆ ಒಂದೊಳ್ಳೆ ಮಾತನಾಡಿದ್ದಾರೆ. ಬಾಲಿವುಡ್ ಗೆ ಹೊಲಿಸಿಕೊಂಡರೆ ಸ್ಯಾಂಡಲ್ವುಡ್ ನಲ್ಲಿ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೇಳಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿದಿನಕ್ಕೆ ಕೇವಲ 8 ಗಂಟೆಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಬಹುದು ಆದರೆ ಬಾಲಿವುಡ್ ನಲ್ಲಿ ಹಾಗಲ್ಲ ಇಲ್ಲಿ ಸಮಯದ ಅರಿವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9:00 ಯಿಂದ ರಾತ್ರಿ 9:00 ವರೆಗೆ ಆಗಬಹುದು ಅಥವಾ ರಾತ್ರಿ ಇಡಿ ಚಿತ್ರೀಕರಣ ಮಾಡಬಹುದು ಅದರಿಂದ ನಮಗೆ ನಿದ್ದೆ ಇಲ್ಲದೆ ಆರೋಗ್ಯ ಹಾಳಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ನ ಮತ್ತೊಂದು ಎಡವಟ್ಟು..!
ನಾನು ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೇನೆ. ಅದು ಆಫೀಸ್ ಕಚೇರಿ ಅವಧಿ ತರವೇ ಇರುತ್ತದೆ. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಚಿತ್ರೀಕರಣೆ ಮಾಡಿದರೆ ಆಯಿತು. ಶೂಟ್ ಬಳಿಕ ಕುಟುಂಬದ ಜೊತೆ ಸಮಯ ಕಳೆಯಬಹುದು, ನಿದ್ದೆ ಮಾಡಬಹುದು. ಆದರೆ, ಹಿಂದಿಯಲ್ಲಿ ಹಾಗಲ್ಲ. ಅಲ್ಲಿ 12 ಗಂಟೆ ಶಿಫ್ಟ್. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಬೇಕು. ನನಗೆ ಎರಡೂ ಇಷ್ಟ. ಸಿನಿಮಾ ಯಾವುದನ್ನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದಿದ್ದಾರೆ ಅವರು.
ಈ ಕೆಲಸದ ಅವಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಅವರವರಿಗೆ ಬಿಟ್ಟ ವಿಚಾರ. ಪ್ರತಿ ಸಿನಿಮಾ ಆರಂಭಕ್ಕೂ ಮೊದಲು ಕಲಾವಿದರು ಈ ಬಗ್ಗೆ ತಂಡದ ಜೊತೆ ಮಾತನಾಡಬೇಕು. ಎಷ್ಟು ಗಂಟೆ ಶೂಟ್ ಇರುತ್ತದೆ, ಯಾವ ಸಂದರ್ಭದಲ್ಲಿ ಶೂಟ್ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
