ಬೆಂಗಳೂರು: ನಟಿ ರಶ್ಮಿಕ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿ ಆಗುತ್ತಲೇ ಇರುತ್ತಾರೆ.
ಯೆಸ್…ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಒಂದಾದ ಮೇಲೆ ಒಂದು ಕಾಂಟ್ರವರ್ಸಿಗೆ ಕಾರಣವಾಗುತ್ತಾರೆ ಅದಕ್ಕೆ ಮತ್ತೊಂದು ಉದಾಹರಣೆ ಇದೀಗ ಹೊರಬಿದ್ದಿದೆ.
ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಕೊಡವ ಸಮುದಾಯದಿಂದ ಇಲ್ಲಿಯವರೆಗೂ ಯಾರು ಕೂಡ ಚಿತ್ರರಂಗಕ್ಕೆ ಬಂದಿಲ್ಲ. ನಾನೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಬಂದಿದ್ದೇನೆ ಎಂದು ಹೇಳುವ ಮೂಲಕ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಸಂದರ್ಶನ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದೀಗ ರಶ್ಮಿಕ ಮಂದಣ್ಣ ಹೇಳಿರುವ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಕೊಡವ ಸಮುದಾಯದ ನಟಿಯರೆಲ್ಲ ರಶ್ಮಿಕ ಮಂದಣ್ಣ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಚಿನ್ನದ ಚೋರಿಗೆ ಬಿಗ್ ಶಾಕ್..!
ಈಗಾಗಲೇ ಕೊಡವ ಸಮುದಾಯದಿಂದ ಹಿರಿಯ ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಇನ್ನೂ ಹಲವಾರು ಕೊಡವ ಸಮುದಾಯದ ನಟಿಯರು ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಆದರೆ ರಶ್ಮಿಕ ಮಂದಣ್ಣ ನಾನೇ ಕೊಡವ ಸಮುದಾಯದಿಂದ ಮೊದಲ ನಟಿಯೆಂದು ಹೇಳಿಕೊಂಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಚರ್ಚೆಗೆ ಕಾರಣವಾಗಿದೆ.
