ಬೆಂಗಳೂರು: ಇತ್ತೀಚಿಗೆ ಎಲ್ಲರೂ ರೀಲ್ಸ್ ಮಾಡುವುದು ಸರ್ವೇಸಾಮಾನ್ಯವಾಗಿದೆ. ಆದರೆ ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ರವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗಬಂಧನದಲ್ಲಿದ್ದ ರಜಿತ್ ಅವರಿಗೆ ಇದೀಗ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಭಾಗ್ಯ ಒದಗಿ ಬಂದಿದೆ.
ಹೌದು, ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಅವರಿಗೆ ಜಮೀನು ಮಂಜೂರಾಗಿದೆ.
ರಜತ್ಗೆ ಏಪ್ರಿಲ್ 29ರ ವರೆಗೆ ನ್ಯಾಯಾಲಯ ಬಂಧನ ವಿಧಿಸಿತ್ತು. ಇದೀಗ ನಗರದ 24ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿ ರಜತ್ ಕಿಶನ್ಗೆ ರಿಲೀಫ್ ನೀಡಿದೆ. ಇದನ್ನೂ ಓದಿ: ದರ್ಶನ್ ಗೆಟಪ್ಗೆ ಫ್ಯಾನ್ಸ್ ಫೀದಾ!
ಇನ್ನು ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ಗೆ ಮಾತ್ರ ವಾರೆಂಟ್ ಇತ್ತು. ವಿನಯ್ಗೌಡಗೆ ವಾರೆಂಟ್ ಇರಲಿಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ನಿನ್ನೆಯೇ ರಿಲೀಫ್ ಸಿಕ್ಕಿತ್ತು. ರಜತ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ರಜತ್ ಪರ ವಕೀಲರು ಕೋರ್ಟ್ಗೆ ನಿನ್ನೆಯೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ಮಾಡಿ ಆದೇಶ ಇಂದಿಗೆ ಕಾಯ್ದಿರಿಸಿತ್ತು. ಅದರಂತೆ 24ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ.
