Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಡಾ.  ನಾಗಲಕ್ಷ್ಮಿ  ಚೌಧರಿ ಅವರು ಶೋಷಿತ ಮಹಿಳೆಯರ ಧ್ವನಿ
  • State
  • ಶಹಾಪುರ

ಡಾ.  ನಾಗಲಕ್ಷ್ಮಿ  ಚೌಧರಿ ಅವರು ಶೋಷಿತ ಮಹಿಳೆಯರ ಧ್ವನಿ

Praja Vahini October 18, 2026
Screenshot_2026-10-18-21-31-09-96_6012fa4d4ddec268fc5c7112cbb265e7
Spread the love

ಚೌಧರಿ ಹುಟ್ಟುಹಬ್ಬಕ್ಕೆ ೩೦ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ

ಶಹಾಪುರ: ಮಹಿಳೆಯರ ನೋವಿಗೆ ಧ್ವನಿಯಾಗಿ ಸ್ಪಂದಿಸುವ ಡಾ. ನಾಗಲಕ್ಷ್ಮಿ  ಚೌಧರಿ ಅವರ ಹುಟುಹಬ್ಬಕ್ಕೆ ಅವರ ಅಭಿಮಾನಿಗಳಿಂದ ರಕ್ತದಾನ ಶಿಬಿರ ಮಾಡುವ ಮೂಖಾಂತರ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಪೂಜ್ಯ ಶರಣು ಬಿ ಗದ್ದುಗೆ ಹೇಳಿದರು.

ನಗರದ ವಿಶ್ವಜ್ಯೋತಿ ಕಾಲೇಜಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ  ಚೌಧರಿ ಅವರ ಹುಟ್ಟುಹಬ್ಬದ ಹಿನ್ನಲೇ ಕೇಕ್ ಕತ್ತರಿಸಿ ನಂತರ ಅವರ ಅಭಿಮಾನಿಗಳಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಇಂದಿಗೂ ಸಮಾಜದಲ್ಲಿ ಅನೇಕ ಮಹಿಳೆಯರು ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ ಹಾಗೂ ವಿವಿಧ ರೀತಿಯ ಅನ್ಯಾಯಗಳನ್ನು ಎದುರಿಸುತ್ತಿದ್ದು, ಅವರೆಲ್ಲರ ಪರವಾಗಿ ನಿಂತು ನ್ಯಾಯ ಒದಗಿಸಿಕೊಡುವ ಕೆಲಸ ಮಹಿಳಾ ಆಯೋಗದ ಅಧ್ಯಕ್ಷರು ಮಾಡುತ್ತಿದ್ದು ಅವರ ಸೇವಾಕಾರ್ಯ ಪ್ರಸ್ತುತ ಯುವಪೀಳಿಗೆಗೆ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೈದ್ಯರಾದ ಡಾ. ಇಂದಿರಾ ಉಪ್ಪಿನ್ ಮಾತನಾಡಿ ಮಹಿಳೆಗೆ ಗೌರವ ಸಿಗುವ ಮನೆ ಸುಂದರವಾಗುತ್ತದೆ. ಮಹಿಳೆಗೆ ಸಮಾನತೆ ಸಿಗುವ ಸಮಾಜ ಪ್ರಗತಿಯಾಗುತ್ತದೆ. ಮಹಿಳೆಗೆ ನ್ಯಾಯ ಸಿಗುವ ರಾಷ್ಟç ಬಲಿಷ್ಠವಾಗುತ್ತದೆ. ಆದ್ದರಿಂದ ಕಾಲ ಬದಲಾಗಿದೆ , ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ  ಚೌಧರಿ ಅವರು ಮಹಿಳೆಯರಿಗೆ ಇರುವ ಹಕ್ಕುಗಳ ಜಾಗೃತಿಗೊಳಿಸಿ ಶೋಷಿತ ಮಹಿಳೆಯರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ವೇಳೆ 30 ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ ನೆರವೇರಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ತಾಲೂಕ ಅಧ್ಯಕ್ಷ ಸಿದ್ದಣ್ಣ ಸಾಹು ಆರಭೋಳ, ಅಲ್ಪಸಂಖ್ಯಾತರ ಮುಖಂಡ ಅಲ್ಲಾ ಪಟೇಲ್ ಮಕ್ತಾಪುರ, ಯಲ್ಲಪ್ಪ ನರಿ, ಅಯ್ಯಣ್ಣ ಇನಾಂದಾರ, ವಕೀಲರಾದ ಬಸಮ್ಮ ಎಂ ರಾಂಪುರೆ, ಜಯಶ್ರೀ ಆರ್, ದಿಗ್ಗಿ, ಸಂಗಣ್ಣ ದೊಡ್ಮನಿ, ಸಿದ್ದಣ್ಣ ಬಿ ಟಣಕೇದಾರ, ತಬಿತಾ ವಾಯ್ ಪ್ರಸಾದ, ಶಿವರಾಜ ಹೂಗಾರ, ಶಾಂತಗೌಡ ನಾಗನಟಿಗಿ, ಶಾಂತಪ್ಪ ಕಟ್ಟಿಮನಿ, ಶಿವುಕುಮಾರ ತಳವಾರ, ಶ್ರೀದೇವಿ ಕಟ್ಟಿಮನಿ, ಮಲ್ಲಣಗೌಡ ಪರಿವಾಣ, ಭೀಮರಾಯಗೌಡ ಪೊ.ಪಾಟೀಲ, ದೇವಿಂದ್ರಪ್ಪ ನಾಶಿ, ದೇವಿಂದ್ರಪ್ಪ ಕನ್ಯಾಕೊಳ್ಳುರ, ಅಪ್ಪಣ್ಣ ದಶವಂತ, ಬಸವರಾಜ ನಾಟೇಕರ, ನಿಜಗುಣ ಕನಕ, ಶರಣಯ್ಯ ಹಿರೇಮಠ, ಪ್ರದೀಪ ಅಣಬಿ, ಸಿದ್ದು ಪಟ್ಟೇದಾರ, ಗುರಣ್ಣ, ಅಂಬ್ರೇಶ ಸಜ್ಜನ್, ಮರ್ದಾನಿ ಸಲಾದಪುರ ಸೇರಿದಂತೆ ಅಭಿಮಾನಿಗಳು ಇದ್ದರು. ಬಸವರಾಜ ಶಿಣ್ಣೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಾಕ್ಸ್;

ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ  ಚೌಧರಿ ಅವರು ದುರ್ಗೆಯ ಅವತಾರವನ್ನು ಹೊಂದಿದ್ದು, ಎಲ್ಲಿ ಭ್ರಷ್ಟ ಅಧಿಕಾರಿಗಳಿದ್ದಾರೋ ಅವರಿಗೆ ಎಚ್ಚರಿಕೆಯ ಗಂಟೆಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಮಹಿಳೆ ಎಂದರೆ ಕೇವಲ ಒಂದು ಕುಟುಂಬದ ಶಕ್ತ್ತಿಯಲ್ಲ. ಇಡೀ ಸಮಾಜದ ಅಭಿವೃದ್ಧಿಯ ಆಧಾರಸ್ತಂಭ. ಒಂದು ಮಹಿಳೆ ಶಿಕ್ಷಣ ಪಡೆದರೆ ಒಂದು ಕುಟುಂಬ ಬೆಳೆಯುತ್ತದೆ ,ಮಹಿಳೆ ಸ್ವಾವಲಂಬಿಯಾದರೆ ಸಮಾಜ ಬೆಳೆಯುತ್ತದೆ. ಮಹಿಳೆಗೆ ಸಮಾನ ಅವಕಾಶ ದೊರೆತರೆ ಇಡೀ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತದೆ. ಆದ್ದರಿಂದ ಮಹಿಳೆಯರ ಶಕ್ತಿಯಾಗಿರುವ ಡಾ. ನಾಗಲಕ್ಷ್ಮಿ  ಚೌಧರಿ ಅವರಿಗೆ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಉನ್ನತ ಸ್ಥಾನಮಾನಗಳು ಸಿಗಲಿ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಖಾಪುರ ಹೇಳಿದರು.

ರಾಜ್ಯದಲ್ಲಿ ನಾಗಲಕ್ಷ್ಮಿ ಅವರು ವಿಶೇಷ ಚಾಪು ಮಾಡಿಸಿದ್ದಾರೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾತಿ ಮೌರ್ಯ ಅವರು ವಹಿಸಿಕೊಂಡು ಮಾತನಾಡಿ ಡಾ.  ನಾಗಲಕ್ಷ್ಮಿ ಚೌಧರಿ ಅವರು ರಾಜ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಚಾಪು ಮೂಡಿಸಿದ್ದು, ಅವರ ಸೇವೆ ಇಡೀ ರಾಜ್ಯದ ಅಭಿವೃದ್ಧಿಗೆ ಅವಶ್ಯಕತೆ ಇದ್ದು, ಮುಂದಿನ ದಿನಮಾನಗಳಲ್ಲಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೇ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.

About the Author

Praja Vahini

Editor

View All Posts

Spread the love

Post navigation

Previous: ಕೆಬಿಜೆಎನ್‌ಎಲ್ ಕಚೇರಿ ಎದುರು, ಗುತ್ತಿಗೆದಾರರ ಕಣ್ಣಿರು!
Next: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ

Views:

153

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.