Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಿರಾಶೆ ಮೂಡಿಸಿದ ಬರ ಅಧ್ಯಯನ ತಂಡದ ಪರಿಶೀಲನೆ
  • State
  • ಶಹಾಪುರ

ನಿರಾಶೆ ಮೂಡಿಸಿದ ಬರ ಅಧ್ಯಯನ ತಂಡದ ಪರಿಶೀಲನೆ

Praja Vahini October 5, 2026 1 minute read
WhatsApp Image 2026-10-05 at 12.06.01
Spread the love

ಅನ್ನದಾತರ ನೋವಿಗೆ ಮಿಡಿಯದ ಬರ ತಂಡ/ ರೈತರು ಆಕ್ರೋಶ

ಶಹಾಪುರ: ತಾಲೂಕಿನ ಬರ ಪರಿಸ್ಥೀತಿ ವಾಸ್ತವಿಕ ಸ್ಥೀತಿಗತಿಗಳನ್ನು ಪರಿಶೀಲಿಸುವಲ್ಲಿ ಕೇಂದ್ರದ ಐಎಂಸಿಟಿ ತಂಡವು ಕೇವಲ ತೀವ್ರ ಬರವಿರುವ ಪ್ರದೇಶಗಳನ್ನು ಬಿಟ್ಟು ಕಾಟಾಚಾರಕ್ಕೆ ಬೇಟಿ ನೀಡಿ ಹೋಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಬರಪೀಡಿತ ತಾಲೂಕ ಘೋಷಣೆಯಾಗಿ ತಿಂಗಳುಗಳೇ ಕಳೆದರೂ ರೈತರಿಗೆ ಪರಿಹಾರ ಕೈ ಸೇರಿಲ್ಲ, ಸಾಲ ಮಾಡಿ ಬಿತ್ತಿರುವ ರೈತರು ಸಾಲಗಾರರ ಕಾಟದಿಂದ ಬೇಸತ್ತಿದ್ದೇವೆ ಎಂದು ಅನ್ನದಾತರು ಕಣ್ಣಿರು ಹಾಕಿ ತಮ್ಮ ಅಳಲು ತೋಡಿಕೊಂಡರು.

ಕೇAದ್ರ ಐಎಂಸಿಟಿ ತಂಡದ ಮುಖ್ಯಸ್ಥ ಮಾನಸಿಂಗ್ ಅವರ ನೇತೃತ್ವದಲ್ಲಿ ತಂಡವು ಗುಂಡಳ್ಳಿ, ಮದ್ದರಕಿ, ದೋರನಹಳ್ಳಿ ಗ್ರಾಮಗಳಲ್ಲಿ ಹಾನಿಗೊಳಗಾದ ಹತ್ತಿ ಬೆಳೆ ಪ್ರದೇಶಗಳನ್ನು ವೀಕ್ಷಿಸಿದರು. ಹತ್ತಿ ಬೆಳೆ ಪ್ರದೇಶವನ್ನು ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಿದರು. ಭೂಮಿ ಸಿದ್ದಪಡಿಸುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗಿನ ವಿವಿಧ ಹಂತಗಳಲ್ಲಿ ತಗಲುವ ವೆಚ್ಚದ ವಿವರಗಳನ್ನು ರೈತರು ತಿಳಿಸಿದರು. ಪ್ರತಿ ಎಕರೆಗೆ ೩೦ ಸಾವಿರ ರೂ. ವೆರೆಗೆ ವೆಚ್ಚವಾಗಲಿದೆ ಎಂದು ವಿವರಿಸಿದರು. ಬಳಿಕ ಬರ ತಂಡವು ನೀರಾವರಿ ಬೆಳೆಗಳ ಸ್ಥೀತಿ ಹಾಗೂ ಬೆಳೆಗಳಿಗೆ ಲಭ್ಯವಾಗುತ್ತಿರುವ ನೀರಿನ ಪ್ರಮಾಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರಕಾರದಿಂದ ತಮಗೆ ಬೇಕಾದ ನೆರವು ಹಾಗೂ ನಿರೀಕ್ಷೆಗಳ ಕುರಿತು ತಂಡವು ವಿಚಾರಿಸಿದಾಗ ರೈತರು ತಾವು ಭಾರಿ ನಷ್ಟ ಅನುಭವಿಸುತ್ತಿದ್ದು, ಪ್ರತಿ ಎಕರೆಗೆ ೫೦ ಸಾವಿರ ರೂ, ಪರಿಹಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಹೆಚ್ಚುವರಿ ನಿರ್ಧೇಶಕ ಬಲರೆಡ್ಡಿ, ಜಿಲ್ಲಾ ಕೃಷಿ ಇಲಾಖೆ ಜೆಡಿ ರತೇಂದ್ರನಾಥ ಸುಗೂರ, ಡಿಡಿ ಹಂಪಣ್ಣ ವಯ್ಯಲ್, ತಹಸೀಲ್ದಾರ ಸಿದ್ಧರೂಡ ಬನ್ನಿಕೊಪ್ಪ, ಎಡಿ ಸುನೀಲ್‌ಕುಮಾರ ಯರವಾಳ, ಎಡಿಸಿ ರಮೇಶ ಕುನಾಲ್, ತಾ.ಪಂ ಇಓ ಬಸವರಾಜ ಶರಬೈ, ಪೌರಾಯುಕ್ತ ಜೀವನ್, ಪಶುಸಂಸೋಪನ ಇಲಾಖೆ ಅಧಿಕಾರಿ ಅಣ್ಣಾರಾವ್, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಕಾಂತ ಕಟ್ಟಿಮನಿ ಸೇರಿದಂತೆ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ರೈತರಿಗೆ ಜಮೀನು ಮಟ್ಟದಲ್ಲಿ ಕೈಗೊಳ್ಳುವ ಸ್ಥಳ ಪರಿಶೀಲನೆ, ಬೆಳೆ ಸಮೀಕ್ಷೆ ಜಂಟಿ ಬೆಳೆನಷ್ಟ ಸಮೀಕ್ಷೆ ಹಾಗೂ ಪರಿಹಾರ ಡಿಬಿಟಿ ಪ್ರಕ್ರಿಯೆಗಳ ಕುರಿತು ವಿವರಿಸಿದರು.

ಐಎಂಸಿಟಿ ತಂಡದ ಪರಿಶೀಲನೆ ರೈತ ಮುಖಂಡರ ಆಕ್ರೋಶ

ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಕೆಲವೇ ಗ್ರಾಮಗಳ ಜಮೀನುಗಳನ್ನು ಮಾತ್ರ ಪರಿಶೀಲಿಸಿ ತೆರಳಲಾಗಿದೆ. ಒಂದೊAದು ಸ್ಥಳದಲ್ಲಿ ಸುಮ್ಮನೆ ನಾಮಕವಸ್ಥೆಗೆ ಮಾತ್ರ ವಿಕ್ಷಣೆ ನಡೆಸಲಾಗಿದೆ ಎಂದು ಹಿರಿಯ ರೈತ ಮುಖಂಡ ಅಶೋಕರಾವ್ ಮಲ್ಲಾಭಾದಿ ಆರೋಪಿಸಿದ್ದಾರೆ.

ತಾಲೂಕಿನ ಮೂಡಬೂಳ ಗ್ರಾಮ ಸೇರಿ ಸುತ್ತಲೂ ವ್ಯಾಪಕ ಬೆಳೆ ಹಾನಿಯಾಗಿದ್ದರೂ ತಂಡವೂ ಈ ಭಾಗಗಳಿಗೆ ಬೇಟಿ ನೀಡಿಲ್ಲ. ಈ ಭಾಗದಲ್ಲಿಯೂ ಸಾಕಷ್ಟು ಹತ್ತಿ , ಮೆಣಸಿನಕಾಯಿ ಹಾನಿಯಾಗಿವೆ. ಬರ ಅಧ್ಯಯನ ತಂಡ ನೊಂದ ರೈತರ ಜಮೀನುಗಳಿಗೆ ಬೇಟಿ ನೀಡಿ ವಾಸ್ತವ ಸ್ಥೀತಿ ಅರಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ತಂಡದ ಬೇಟಿ ನಿರಾಶೆ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲವೇ ಪ್ರದೇಶಗಳನ್ನು ಪರಿಶೀಲಿಸುವ ಬದಲು ಬರದಿಂದ ಹೆಚ್ಚು ಹಾನಿಗೊಳಗಾದ ಒಳಭಾಗದ ಗ್ರಾಮಗಳಿಗೂ ತಂಡ ಬೇಟಿ ನೀಡಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಬೇಕಿತ್ತು. ಬೆಳೆ ಹಾನಿ ನೀರಿನ ಸಮಸ್ಯೆ ಹಾಗೂ ರೈತರ ಸಂಕಷ್ಟದ ವಾಸ್ತವ ಸ್ಥಿತಿಯನ್ನು ದಾಖಲಿಸಬೇಕು. ವಾಸ್ತವ ತಿಳಿದಿರುವ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರಗಳು ಬರ ಪೀಡಿತ ಪ್ರದೇಶದ ಅರಿವು ಇಲ್ಲದೆ ಇಂತಹ ಅಚಾತುರ್ಯ ಎಸಗಿರುವುದು ಖಂಡನೀಯ.

About the Author

Praja Vahini

Editor

View All Posts

Spread the love

Post navigation

Previous: ಬಾಕಿ ಬಿಲ್ ಪಾವತಿಸಿ, ಇಲ್ಲವೇ ದಯಾಮರಣ ನೀಡಿ
Next: ಬೆಂಗಳೂರು ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಬೃಹತ್ ಯೋಜನೆ: ಸಿಎಂ ಡಿಕೆಶಿ

Views:

53

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.