ಕಾಂಗ್ರೆಸ್ ಸರ್ಕಾರದಿಂದ ಗುತ್ತಿಗೆದಾರರ ಬದುಕು ಸರ್ವನಾಶ/ ಸರ್ಕಾರದ ವಿರುದ್ಧ ಹಿಡಿಶಾಪ
ಶಹಾಪುರ: ಸುಮಾರು ಮೂರು ವರ್ಷಗಳಿಂದ ಬೆವರು ಸುರಿಸಿ ಮಾಡಿದ ಕಾಮಗಾರಿಗೆ ಬಾಕಿ ಬಿಲ್ ಪಾವತಿಯಾಗದೇ ರಾಜ್ಯದ ಗುತ್ತಿಗೆದಾರರು ವಾಸಿಸುವ ಮನೆ, ಜಮೀನು, ವಾಹನ ಮಾರಾಟ ಮಾಡಿ ತಲೆಮರೆಸಿಕೊಂಡು ಹೋಗುವ ಸ್ಥೀತಿಗೆ ತಪುಪಿದ್ದಾರೆ, ಗುತ್ತಿಗೆದಾರರಿಗೆ ಜೀವನವೇ ಬೇಸರವಾಗಿದ್ದು ಸರ್ಕಾರವೆ ನೊಂದಿರುವ ಗುತ್ತಿಗೆದಾರರಿಗೆ ದಯಾಮರಣ ನೀಡಬೇಕು ಎಂದು ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘದ ರಾಜ್ಯಧ್ಯಕ್ಷ ಜೋಗಿ ಜಯಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಗುತ್ತಿಗೆದಾರರು ಅಸಹಾಯಕರಾಗಿದ್ದು, ಮಾಡಿದ ಕೆಲಸಕ್ಕೆ ಹಣ ಸಿಗದೇ ಸರ್ಕಾರದ ಬೇಜವಾಬ್ದಾರಿಯ ನಡೆಯಿಂದ ಗುತ್ತಿಗೆದಾರರು ಜೀವನವೇ ಸರ್ವನಾಶವಾಗಿದೆ. ಇದೀಗ ಸಬ್ ಕಂಟ್ರಾಕ್ಟರ್‌ಗಳು ಊರೆ ಬಿಟ್ಟಿದ್ದಾರೆ. ಇನ್ನೂ ಮೂರು ವರ್ಷಗಳಿಂದ ಬಿಲ್ ಕ್ಲಿಯರ್ ಆಗದೆ ಸಂಕಷ್ಟ ಮುಂದುವರೆದಿದೆ. ಗುತ್ತಿಗೆದಾರರು ಬೆವರು ಸುರಿಸಿ ಮಾಡಿದ ಕೆಲಸದ ಹಣವನ್ನು ತಡೆಹಿಡಿದು, ಆ ದುಡ್ಡಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಡೆಸುವುದು ಬೇಡ.
ಒಂದು ಕಾಮಗಾರಿ ಮಾಡಬೇಕಾದರೆ ಕಮಿಷನ್ ನೀಡದೇ ಭೂಮಿ ಪೂಜೆಯೂ ನಡೆಯಲ್ಲಾ. ಇಲಾಖೆಗಳಲ್ಲಿ ಕಮಿಷನ್ ವಹಿವಾಟು ಎಗ್ಗಿಲ್ಲದೆ ಸಾಗಿದೆ. ಈ ಹಿಂದೆ ಎರಡು ಬಾರಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ಅವರು ಸ್ಫಂದಿಸಿ ಶೇ.೨೫ ರಷ್ಟು ಬಿಲ್ ಪಾವತಿಸಿದ್ದು ಬಿಟ್ಟರೆ ಇನ್ನೂ ಪೂರ್ಣ ಬಿಲ್ ಪಾವತಿಯಾಗಿಲ್ಲಾ. ಇನ್ನೂ ಆದಾದ ನಂತರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ನೀಡಿದ್ದ ಭರವಸೆಗಳು ಈ ವರೆಗೂ ಈಡೇರಿಲ್ಲಾ.
ಗುತ್ತಿಗೆದಾರರನ್ನು ಅವಲಂಬಿಸಿರುವ ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರ ಮಟ್ಟದಲ್ಲಿ ಇರುವ ಅವ್ಯವಸ್ಥೆಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಟೆಂಡರ್ ಕಾಮಗಾರಿಗಳು ಸಿಗುತ್ತಿಲ್ಲ. ವಾರದ ಒಳಗಾಗಿ ಬಾಕಿ ಬಿಲ್ ಪಾವತಿಸಬೇಕು ಇಲ್ಲವೇ ಈಗೇ ಮುಂದುವರೆದರೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಅವರ ಮನೆ ಮುಂದೆಯೇ ಗುತ್ತಿಗೆದಾರರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ನೇರ ಕಾರಣವಾಗಲಿದೆ. ಕೂಡಲೇ ಸರ್ಕಾರ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಮಾಡಬೇಕು. ಇಲ್ಲವಾದರೆ ದಯಾಮರಣ ನೀಡಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
