Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಜ್ಯದ ತಂತ್ರಜ್ಞಾನ ನಾಯಕತ್ವಕ್ಕೆ ಕಿಯೊನಿಕ್ಸ್‌ ಕೊಡುಗೆ ಅಪಾರ
  • Bangalore
  • Front news
  • Politics
  • State

ರಾಜ್ಯದ ತಂತ್ರಜ್ಞಾನ ನಾಯಕತ್ವಕ್ಕೆ ಕಿಯೊನಿಕ್ಸ್‌ ಕೊಡುಗೆ ಅಪಾರ

Praja Vahini September 22, 2026 1 minute read
45d95937-6684-423f-a7bd-a3c48130881b
Spread the love

ಬೆಂಗಳೂರು: “ಕರ್ನಾಟಕವು ನವೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುವ ಸುದೀರ್ಘ ಪಯಣದ ಪ್ರಮುಖ ಭಾಗವಾಗಿರುವ ಕಿಯೊನಿಕ್ಸ್‌, ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಅವಕಾಶಗಳು ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೇಳಿದರು.

ಇಂದು ಬೆಂಗಳಗರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (ಕಿಯೊನಿಕ್ಸ್‌) ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್‌ ಸಿಟಿಯ ಆರಂಭಿಕ ಅಡಿಪಾಯದಿಂದ ಹಿಡಿದು ಇಂದು ನಾವು ಕಾಣುತ್ತಿರುವ ತಂತ್ರಜ್ಞಾನದ ಅಗಾಧ ಪರಿವರ್ತನೆ ಹಾಗೂ ಸಾಧನೆಗೆ ಕಿಯೊನಿಕ್ಸ್‌ ಗಮನಾರ್ಹ ಕೊಡುಗೆ ನೀಡಿದೆ. ಕಿಯೊನಿಕ್ಸ್‌ನ ಐದು ದಶಕಗಳ ಯಶಸ್ವಿ ಪಯಣವು ಕರ್ನಾಟಕವು ಜಾಗತಿಕ ತಂತ್ರಜ್ಞಾನ ತಾಣವಾಗಿ ರೂಪುಗೊಂಡಿರುವ ದೊಡ್ಡ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆʼ ಎಂದು ಮುಖ್ಯಮಂತ್ರಿಗಳು ಹೇಳಿದರು.

ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮಾತನಾಡಿ, ‘ರಾಜ್ಯದ ತಂತ್ರಜ್ಞಾನ ಮಹತ್ವಾಕಾಂಕ್ಷೆಗಳ ಜೊತೆಗೆ ಕಿಯೊನಿಕ್ಸ್‌ನ ಪಾತ್ರವೂ ವಿಸ್ತರಿಸಿದೆ. ಕಿಯೊನಿಕ್ಸ್‌ ಐದು ದಶಕಗಳ ಇತಿಹಾಸ ಹೊಂದಿರುವ ಸಂಸ್ಥೆ ಮಾತ್ರವಷ್ಟೇ ಅಲ್ಲದೆ, ರಾಜ್ಯದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಅನುಷ್ಠಾನ ಸಂಸ್ಥೆಯೂ ಆಗಿದೆ. ಮೂಲಸೌಕರ್ಯ ಮತ್ತು ಐಟಿ ಸೇವೆಗಳಿಂದ ಹಿಡಿದು ಕೌಶಲ ಅಭಿವೃದ್ಧಿ, ಡಿಜಿಟಲ್‌ ಆಡಳಿತ ಮತ್ತು ಹೊಸ ತಂತ್ರಜ್ಞಾನ ಉಪಕ್ರಮಗಳವರೆಗೆ, ರಾಜ್ಯದ ತಂತ್ರಜ್ಞಾನ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದೇ ಇಂದು ಕಿಯೊನಿಕ್ಸ್‌ನ ಪ್ರಮುಖ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಕಿಯೊನಿಕ್ಸ್‌ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರೂ ಆಗಿರುವ ಶರತ್‌ ಕುಮಾರ್‌ ಬಚ್ಚೇಗೌಡ ಅವರು ಮಾತನಾಡಿ, ‘ಸುವರ್ಣ ಮಹೋತ್ಸವವು ಹಿಂದಿನ ಸಾಧನೆಗಳನ್ನು ಸಂಭ್ರಮಿಸುವುದರ ಜೊತೆಗೆ ಮುಂದಿನ ಬೆಳವಣಿಗೆಯ ಹಂತಕ್ಕೆ ಬದ್ಧತೆ ವ್ಯಕ್ತಪಡಿಸುವ ಸುಸಂದರ್ಭವಾಗಿದೆ’ ಎಂದು ಹೇಳಿದರು.

“ಕರ್ನಾಟಕದ ಅಗತ್ಯಗಳಿಗೆ ಅನುಗುಣವಾಗಿ ಕಿಯೊನಿಕ್ಸ್‌ ನಿರಂತರವಾಗಿ ಬದಲಾವಣೆಗೊಂಡಿದೆ. ಈಗ ನಮ್ಮ ಗಮನ ತಂತ್ರಜ್ಞಾನ ಮೂಲಸೌಕರ್ಯ ಬಲಪಡಿಸುವುದು, ಬೆಂಗಳೂರಿನಾಚೆಗೂ ಅವಕಾಶಗಳನ್ನು ಸೃಷ್ಟಿಸುವುದು, ಕೌಶಲ ಅಭಿವೃದ್ಧಿ ವಿಸ್ತರಿಸುವುದು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಹೆಚ್ಚಿನ ಜನರಿಗೆ ತಲುಪಿಸುವುದರ ಮೇಲಿದೆ. ಮುಂದಿನ 50 ವರ್ಷಗಳು ತಂತ್ರಜ್ಞಾನದ ಪ್ರಯೋಜನಗಳನ್ನು ಕರ್ನಾಟಕದ ಪ್ರತಿಯೊಂದು ಪ್ರದೇಶ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವುದರ ಬಗ್ಗೆ ಕೇಂದ್ರೀಕರಣಗೊಳ್ಳಲಿದೆ’ ಎಂದರು.

ಕಿಯೊನಿಕ್ಸ್‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ ಕಿಯೊನಿಕ್ಸ್‌ ಸಂಸ್ಥೆಯನ್ನು ಹುಟ್ಟುಹಾಕಿದ ದಿನಗಳನ್ನು ನೆನಪು ಮಾಡಿಕೊಂಡರು.

ಶ್ರೀಮತಿ ಶಾಂತಿ ರಾಮಕೃಷ್ಣ ಬಾಳಿಗಾ, ಮಾಜಿ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌, ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ವಿದ್ಯುನ್ಮಾನ, ಐಟಿ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್‌. ಮಂಜುಳಾ, ʼಇಎಲ್‌ಸಿಐಎʼ ಅಧ್ಯಕ್ಷೆ ನಂದಿನಿ ಬಿ. ಮತ್ತು ಕಿಯೊನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ನಾಳೆ ಪ್ರತಿಭಟನೆ
Next: ಆರ್ಥಿಕ ಪರಿಸ್ಥಿತಿ ಶ್ವೇತಪತ್ರಕ್ಕೆ ವಿಜಯೇಂದ್ರ ಒತ್ತಾಯ

Views:

23

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.