Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಆರ್ಥಿಕ ಪರಿಸ್ಥಿತಿ ಶ್ವೇತಪತ್ರಕ್ಕೆ ವಿಜಯೇಂದ್ರ ಒತ್ತಾಯ
  • Bangalore
  • Front news
  • State

ಆರ್ಥಿಕ ಪರಿಸ್ಥಿತಿ ಶ್ವೇತಪತ್ರಕ್ಕೆ ವಿಜಯೇಂದ್ರ ಒತ್ತಾಯ

Praja Vahini September 23, 2026 1 minute read
WhatsApp Image 2026-09-23 at 11.28.21 AM
Spread the love

ಬೆಂಗಳೂರು: ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲೇ ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಬೆಳಿಗ್ಗೆ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 4 ಲಕ್ಷಕ್ಕೂ ಹೆಚ್ಚು ಕೋಟಿ ಹೊಸ ಸಾಲವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ 8 ಲಕ್ಷ ಕೋಟಿ ರೂಪಾಯಿಗಳು ಸಾಲ ಆಗಿದೆ. ಸಾಲ ಮಾಡಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ನೋಡೋದಕ್ಕೆ ಸಾಧ್ಯ ಆಗಿಲ್ಲ ಎಂದು ಟೀಕಿಸಿದರು.
ಮೊನ್ನೆ ಮುಖ್ಯಮಂತ್ರಿಗಳು ಕರಾವಳಿಗೆ ಭೇಟಿ ನೀಡಿದ್ದರು. ಇವರ ಯೋಗ್ಯತೆಗೆ ಖಜಾನೆಯಲ್ಲಿ ಒಂದು ರೂಪಾಯಿ ಹಣ ಇಲ್ಲ. ನಿನ್ನೆ ಹಣಕಾಸಿನ ಇಲಾಖೆಯಿಂದ ಪತ್ರ ಬರೆದಿದ್ದಾರೆ; ಸ್ವಾಮಿ ಮುಖ್ಯಮಂತ್ರಿಗಳೇ ಪುಕ್ಕಟೆ ಯಾವುದೇ ಹೊಸ ಘೋಷಣೆಗಳನ್ನು ಮಾಡಬೇಡಿ. ಬರ ಪರಿಹಾರ ಕೊಡುವುದಕ್ಕೂ ಕೂಡ ನಮ್ಮ ಜೊತೆಯಲ್ಲಿ ಹಣ ಇಲ್ಲ ಖಜಾನೆಯಲ್ಲಿ ಅಂತ ಹೇಳಿ ಇವತ್ತು ಆರ್ಥಿಕ ಇಲಾಖೆಯವರು ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.

ಘೋಷಣೆಗೆ ಕೊರತೆ ಇಲ್ಲ..
ಇವತ್ತು 32000 ಕೋಟಿ ಕೊಡುತ್ತೇನೆ, 10,000 ಕೋಟಿ ಕೊಡುತ್ತೇನೆ ಅಂತ ಹೇಳಿ ಹೋದಲ್ಲೆಲ್ಲ ಕೇವಲ ಘೋಷಣೆ ಮಾಡುತ್ತಿದ್ದಾರೆ. ವಾಸ್ತವಿಕ ಸತ್ಯ ಏನೆಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ದಿವಾಳಿ ಆಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಇವತ್ತು ಕುಲಗೆಟ್ಟು ಹೋಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರವೇ ಐಸಿಯುನಲ್ಲಿದೆ

ಒಂದೇ ಮಾತಿನಲ್ಲಿ ಹೇಳಬೇಕು ಅಂತ ಹೇಳಿದರೆ ಈ ಕಾಂಗ್ರೆಸ್ ಸರ್ಕಾರವೇ ಐಸಿಯು ನಲ್ಲಿದೆ ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ ಬಡವರಿಗೆ ಇವತ್ತು ಪರಿಹಾರ ಕೊಡೋದಕ್ಕೆ ರೈತರಿಗೆ ಪರಿಹಾರ ಕೊಡೋದಕ್ಕೆ ಯಾವುದೇ ಹಣ ಇಲ್ಲ. ದಿವಾಳಿ ಆಗಿರತಕ್ಕಂತಹ ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ಇವತ್ತು ದಿನಗಳನ್ನು ಕಳೆಯುತ್ತಿದ್ದಾರೆ ಎಂದು ದೂರಿದರು.

ಪಿಂಚಣಿ- ಮಾಸಾಶನ ಕೊಡುತ್ತಿಲ್ಲ..

ಕರ್ನಾಟಕ ರಾಜ್ಯದಲ್ಲಿ ಇವತ್ತು ವಿಕಲಚೇತನರಿಗೆ ಇವತ್ತು ಪಿಂಚಣಿ ಕೊಡೋದಕ್ಕೆ ಆಗ್ತಾ ಇಲ್ಲ. ವೃದ್ಯಾಪ ವೇತನ ಕೊಡೋದಕ್ಕೆ ಆಗುತ್ತಿಲ್ಲ. ವಿಧವಾ ವೇತನ ಕೊಡೋದಕ್ಕೆ ಸಾಧ್ಯ ಆಗುತ್ತಿಲ್ಲ. ಎಷ್ಟು ಭ್ರಷ್ಟಾಚಾರ ದಲ್ಲಿ ಮುಳುಗಿದ್ದಾರೆ ಅಂತ ಹೇಳಿದರೆ ಇವತ್ತು ಶಿಕ್ಷಣ ಇಲಾಖೆಯಲ್ಲಿ ಎಷ್ಟು ಬರಗೆಟ್ಟಿದ್ದಾರೆ ನೋಡಿ ಕಾಂಗ್ರೆಸ್ ನವರು ಶೂ ಸಾಕ್ಸ್ ಖರೀದಿಯಲ್ಲೂ ಕೂಡ ಭ್ರಷ್ಟಾಚಾರ ಆಗಿರುವಂತದ್ದು ನಾವು ನೋಡುತ್ತಿದ್ದೇವೆ ಎಂದು ಟೀಕಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ

ಶಿಕ್ಷಕರ ನೇಮಕಾತಿಯನ್ನು ಕೂಡ ಮಾಡೋದಕ್ಕೆ ಆಗುತ್ತಿಲ್ಲ. ಹಣಕಾಸಿನ ಸಮಸ್ಯೆಯಿಂದ ಶಿಕ್ಷಕರಿಗೆ ಸಂಬಳವನ್ನು ಕೂಡ ನೀಡುತ್ತಿಲ್ಲ. ಒಟ್ಟಾರೆಯಾಗಿ ಯುವಕರಿಗೂ ಕೂಡ ಉದ್ಯೋಗವನ್ನು ಕೊಡದೆ ಇರತಕ್ಕಂತಹ ಈ ಒಂದು ದಿವಾಳಿ ಆಗಿರುವಂತ ಕಾಂಗ್ರೆಸ್ ಸರ್ಕಾರ ಕೇವಲ ವಿಶೇಷ ಅಧಿವೇಶನವನ್ನು ಕರೆದು ಕೇಂದ್ರ ಸರ್ಕಾರಕ್ಕೆ ಗೂಬೆ ಕೂರಿಸಿ ತಾನು ಕೈತೊಳೆದುಕೊಳ್ಳುವ ಕುತಂತ್ರ-ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

ವಾಸ್ತವಿಕ ಸ್ಥಿತಿಯನ್ನು ತಿಳಿಸಿ…

ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೊಳ್ಳೆ ಹೊಡೆದಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ನಿರೀಕ್ಷೆ ಮಾಡೋದಕ್ಕೆ ಸಾಧ್ಯವಿಲ್ಲ. ಮಾನ್ಯ ಮುಖ್ಯಮಂತ್ರಿಗಳೇ ನೀವು ಇರೋದೇ ಇನ್ನು ಒಂದು ವರ್ಷ ಅಧಿಕಾರದಲ್ಲಿ; ಇದ್ದಷ್ಟು ದಿನ ಪುಕ್ಸಟ್ಟೆ ಭಾಷಣ ಮಾಡೋದನ್ನು ಬಿಟ್ಟು ರಾಜ್ಯದ ವಾಸ್ತವಿಕ ಸ್ಥಿತಿ ಏನಿದೆ ಎಂದು ತಿಳಿಸಿ ಎಂದು ಆಗ್ರಹಿಸಿದರು.
ನೀವು ಬರೀ ಜಾಹೀರಾತನ್ನು ಕೊಡುತ್ತ ಜನರಿಗೆ ಮರಳು ಮಾಡೋದಕ್ಕೆ ಹೊರಟಿದ್ದೀರಿ; ಇದರಿಂದ ನೀವು ಏನು ಕೂಡ ಸಾಧನೆ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ರಾಜ್ಯದ ತಂತ್ರಜ್ಞಾನ ನಾಯಕತ್ವಕ್ಕೆ ಕಿಯೊನಿಕ್ಸ್‌ ಕೊಡುಗೆ ಅಪಾರ
Next: ಯಶವಂತರಾಯಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿ: ಸಿಎಂ ಡಿ ಕೆ ವ್ಯಾಖ್ಯಾನ

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.