ಕುಟುಂಬದ ಸದಸ್ಯರಿಗೆ ಸಾಂತ್ವನ/ ಸರ್ಕಾರದಿಂದ ಪರಿಹಾರದ ಭರವಸೆ
ಶಹಾಪುರ: ತಾಲೂಕಿನ ಮಡ್ನಾಳ ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದ ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಹೀನ್ನಲೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಅವರ ಮನೆಗಳಿಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಕುಟುಂಬಸ್ಥರಿಗೆ ನೀಡಿದರು.
ಗ್ರಾಮದ ಸೌಭಾಗ್ಯಮ್ಮ ಶೇಖಪ್ಪ (25), ಹೊನ್ನನಿಂಗಮ್ಮ ರಾಯಪ್ಪ(18), ಸತ್ಯಮ್ಮ ಮಾಳಪ್ಪ ಕೊಂಭಾರ್(35) ಮೃತಪಟ್ಟಿದ್ದಾರೆ, ಈ ಘಟನೆಯಿಂದ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಕುಟುಂಬಸ್ಥರ ಆಂಕ್ರದನ ಮನ ಕಲಕುತ್ತಿದೆ. ಆದಷ್ಟು ಬೇಗ ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಹೆಚ್ಚು ನಿಗಾ ವಹಿಸಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಶಿವುಮಾಹಂತ ಚಂದಾಪುರ, ಶಿವಣಗೌಡ ಮಡ್ನಾಳ, ಬಸವರಾಜಗೌಡ ಮಾಲಿಪಾಟೀಲ್, ಪಂಡಿತ್ ಮಡ್ನಾಳ, ಬಲಭೀಮಪ್ಪ ಕಾಂಗ್ರೆಸ್, ದೌಲತ್ ನಾಯ್ಕೋಡಿ, ದಾದಲಿ, ಮರೆಪ್ಪ ಕ್ವಾರಬಾರ್, ಚಂದಪ್ಪ ಹೊಸಮನಿ, ಶಾಂತಗೌಡ ನಾಗನಟಿಗಿ, ಬಲಭೀಮ ಮಡ್ನಾಳ ರವಿ ರಾಜಾಪುರ, ತಾಯಪ್ಪ ಮಡ್ನಾಳ, ಮಾಂತಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಕುಟುಂಬಸ್ಥರು ಇದ್ದರು. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಬೊಲೆರೋ ವಾಹನ ಡಿಕ್ಕಿ, ಮೂವರು ಮಹಿಳೆಯರ ಸಾವು
ಕುಟುಂಬಸ್ಥರ ನೋವಿಗೆ ಮಿಡಿದ ಶಾಸಕರ ಮನ
ಕೂಲಿ ಕೆಲಸದಿಂದಲೇ ಕುಟುಂಬ ನಡೆಸುತ್ತಿದ್ದ ಮಹಿಳೆಯರ ಸಾವಿನ ಸುದ್ದಿ ತಿಳಿದು ಬಹಳ ನೋವುಂಟು ಮಾಡಿದೆ. ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬೇಡಿ. ಕುಟುಂಬ ನಿರ್ವಹಣೆಗೆ ದುಡಿಯಲು ಹೋದವರು ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಕುಟುಂಬಸ್ಥರು ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಭಗವಂತ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಸಾಂತ್ವನ ಹೇಳಿ ಧೈರ್ಯ ತುಂಬಿದರು.
