ಶಹಾಪುರ: ಪಟ್ಟಣದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿಯ ಅಂಗವಾಗಿ ಸಿಪಿಎಸ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಸಮಾಜದ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಲ್ಲಾಳ ರವರು ಮಾತನಾಡಿ, ಭಗವಾನ್ ಶ್ರೀ ಜೀವೇಶ್ವರ ಜಯಂತೋತ್ಸವದ ಅಂಗವಾಗಿ ನಡೆಯುವ ಕ್ರೀಡಾಕೂಟಗಳು ವೃತ್ತಿಜೀವನದ ಒತ್ತಡ ನಿವಾರಿಸುವುದರ ಜತೆಗೆ ಪರಸ್ಪರ ಸ್ನೇಹ ಹಾಗೂ ಸಹಕಾರದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಉದಯ ಟೊಣಪೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಕುಳ ಸಾಳಿ ಸಮಾಜದವರು ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ , ಪ್ರತಿಯೊಬ್ಬರೂ ಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಕ್ರೀಡೆಯ ಮಹತ್ವವನ್ನು ಅರಿತು ಕ್ರೀಡೆಗಳನ್ನು ಅಬಿವೃದ್ಧಿಪಡಿಸುವ ಮನೋಬಾವ ಬೆಳೆಸಿಕೊಂಡು ಇಂದಿನ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕೆಂದು ತಿಳಿಸಿದರು.
ಸ್ವಕುಳಸಾಳಿ ಸಮಾಜದ ಅಧ್ಯಕ್ಷರಾದ ಸತೀಶ್ ಮಿರ್ಜಿ ಅವರು ಮಾತನಾಡಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ ಎಲ್ಲ ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದರು.
ಸಮಾಜದ ಉಪಾಧ್ಯಕ್ಷರಾದ ಸಂತೋಷ ಶಿರವಾಳ ಮಾತನಾಡಿ ,ಯುವಕರು ಉತ್ಸುಕತೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಅಲ್ಲದೇ ಯುವ ಶಕ್ತಿ ಸಂಘಟನಾತ್ಮಕ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು.
ಕ್ರಿಕೆಟ್ ಪಂದ್ಯಾವಳಿಯ ಶಹಾಪುರದ 2 ತಂಡಗಳು. ಗೋಗಿ ಗ್ರಾಮದ ಎರಡು ತಂಡಗಳು ರಂಗನಪೇಟ್ ಎರಡು ತಂಡಗಳು ರುಕ್ಮಪುರ್ ಒಂದು ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು.
ವಿಜೇತರಿಗೆ ಪ್ರಥಮ ಬಹುಮಾನ 10,001 ರೂ.ಗಳನ್ನು ಭೀಮಣ್ಣ ಟೊಣಪೆ ಹಾಗೂ ಎರಡನೇ ಬಹುಮಾನ 5001 ರೂ.ಗಳನ್ನು ಡಾ. ಪ್ರವೀಣ್ ಕಾಂಬ್ಳೆ ನೀಡಿದರು. ಶಹಾಪುರ ತಂಡದ ಕ್ರೀಡಾಪಟುಗಳಿಗೆ ಸಂದೀಪ್ ಪಾಣಿಬಾತೆ ಮತ್ತು ರಾಘವೇಂದ್ರ ದಂಡು ರವರು ಜರ್ಸಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆ ಕುಮಾರಿ ವೈಷ್ಣವಿ ಟೊಣಪೆ ಹಾಗೂ ಸ್ವಾಗತ, ಅಶೋಕ ಚಿಲ್ಲಾಳ ಮತ್ತು ನಿರೂಪಣೆ ಪ್ರವೀಣ ಫಿರಂಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಆಡಳಿತ ಮಂಡಳಿ, ಯುವಕ ಮಂಡಳಿ, ಗೋಗಿ ಹಾಗೂ ರಂಗನಪೇಟ, ರುಕ್ಮಾಪುರ ಸಮಾಜದ ಬಂಧುಗಳು ಹಿರಿಯರು ಇದ್ದರು.
