Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ
  • Bangalore
  • Front news
  • State
  • Uncategorized

ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

Praja Vahini August 18, 2026 1 minute read
1a2ffd62-de80-4808-a012-f385351190f4
Spread the love

 

ಬೆಂಗಳೂರು: ಪ್ರಮುಖ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಲಾಂಗ್ವಿಟಿ ಇಂಡಿಯಾ ಇನಿಶಿಯೇಟಿವ್ ಆಯೋಜಿಸಿದ್ದ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026 ಸಮ್ಮೇಳನದಲ್ಲಿ ಪ್ಲಾಟಿನಂ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ವಿಜ್ಞಾನ ಆಧಾರಿತ ಪೌಷ್ಟಿಕಾಂಶ, ಚಯಾಪಚಯ ಆರೋಗ್ಯ, ಹೊಸ ಆವಿಷ್ಕಾರ ಹಾಗೂ ಸಹಯೋಗದ ಮೂಲಕ ಆರೋಗ್ಯಕರ ವೃದ್ಧಾಪ್ಯವನ್ನು ಸಾಧಿಸುವ ತನ್ನ ಬದ್ಧತೆಯನ್ನು ಹರ್ಬಲೈಫ್ ಈ ಮೂಲಕ ಪುನರುಚ್ಚರಿಸಿದೆ.

ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಭಾರತ ಹಾಗೂ ವಿಶ್ವದ ಪ್ರಮುಖ ಸಂಸ್ಥೆಗಳ ಖ್ಯಾತ ವಿಜ್ಞಾನಿಗಳು, ವೈದ್ಯರು, ಸಂಶೋಧಕರು, ನೀತಿ ನಿರೂಪಕರು, ಸಂಶೋಧಕರು ಮತ್ತು ಉದ್ಯಮದ ಮುಂಚೂಣಿ ನಾಯಕರು ಭಾಗವಹಿಸಿದ್ದರು. ಆರೋಗ್ಯ ರಕ್ಷಣೆಯಲ್ಲಿ ಮುನ್ಸೂಚಕ (ಪ್ರಿಡಿಕ್ಟಿವ್), ತಡೆಗಟ್ಟುವ (ಪ್ರಿವೆಂಟಿವ್) ಮತ್ತು ವೈಯಕ್ತೀಕರಿಸಿದ ವಿಧಾನಗಳನ್ನು ಬಳಸುವಲ್ಲಿ ಎಐ, ಡಿಜಿಟಲ್ ಹೆಲ್ತ್ ತಂತ್ರಜ್ಞಾನಗಳು, ಬಯೋಮಾರ್ಕರ್‌ ಗಳು ಮತ್ತು ಪೌಷ್ಟಿಕಾಂಶ ವಿಜ್ಞಾನದ ಪಾತ್ರದ ಕುರಿತು ಚರ್ಚಿಸಲಾಯಿತು. ದೀರ್ಘಾಯುಷ್ಯ ವಿಜ್ಞಾನ ಹಾಗೂ ತಡೆಗಟ್ಟುವ ಆರೋಗ್ಯದ ಕುರಿತಾದ ಸಂವಾದವನ್ನು ನಡೆಸಲು ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆ, ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರಗಳ ನಡುವೆ ಪರಸ್ಪರ ಸಹಯೋಗವನ್ನು ಬೆಳೆಸಲು ಈ ಸಮ್ಮೇಳನವು ಉತ್ತಮ ವೇದಿಕೆಯನ್ನು ಒದಗಿಸಿತು.

ವೈಜ್ಞಾನಿಕ ವಿಶ್ವಾಸಾರ್ಹತೆ, ಪ್ರಾಯೋಗಿಕ ಪ್ರಸ್ತುತತೆ ಮತ್ತು ಆಕರ್ಷಕ ಸ್ವರೂಪದ ಈ ಗೋಷ್ಠಿಯಲ್ಲಿ, ಶಾಶ್ವತ ನಡವಳಿಕೆಯ ಬದಲಾವಣೆಯನ್ನು ಪ್ರೋತ್ಸಾಹಿಸುವಲ್ಲಿ ಸಮುದಾಯದ ಪಾತ್ರದ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡಲಾಯಿತು. ಚಯಾಪಚಯ, ನಿದ್ರೆ, ಒತ್ತಡ ನಿರ್ವಹಣೆ, ದೈಹಿಕ ಚಟುವಟಿಕೆ, ಸಮುದಾಯದ ಪ್ರಭಾವ ಮತ್ತು ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳ ಕುರಿತಾದ ಮಾಹಿತಿಯು ಭಾಗವಹಿಸಿದವರಿಗೆ ಅಪಾರ ಪ್ರಯೋಜನ ನೀಡಿತು.

ಈ ಸಮ್ಮೇಳನದ ಸಹಯೋಗದ ಕುರಿತು ಮಾತನಾಡಿದ ಹರ್ಬಲೈಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಖನ್ನಾ ಅವರು*, “ಜಗತ್ತಿನಾದ್ಯಂತ ಜನರ ಜೀವಿತಾವಧಿ ಹೆಚ್ಚುತ್ತಿರುವಂತೆ, ನಮ್ಮ ಗಮನವು ಕೇವಲ ಜೀವಿತಾವಧಿಯನ್ನು ಹೆಚ್ಚಿಸುವುದರಿಂದ ಆರೋಗ್ಯಕರ ಆಯಸ್ಸನ್ನು ಸುಧಾರಿಸುವತ್ತ ಬದಲಾಗಬೇಕಿದೆ. ಉತ್ತಮ ಪೋಷಕಾಂಶ, ಸಕ್ರಿಯ ಜೀವನಶೈಲಿ, ವೈಜ್ಞಾನಿಕ ಪ್ರಗತಿ ಮತ್ತು ಬಲವಾದ ಸಾಮಾಜಿಕ ಸಂಪರ್ಕಗಳಿಂದ ಬೆಂಬಲಿತವಾದ ಚಯಾಪಚಯ ಆರೋಗ್ಯವು ಆರೋಗ್ಯಕರ ವೃದ್ಧಾಪ್ಯಕ್ಕೆ ಅಡಿಪಾಯವಾಗಿದೆ. ರೈಸ್ ಫಾರ್ ಹೆಲ್ತಿ ಏಜಿಂಗ್ ನಂತಹ ವೇದಿಕೆಗಳು ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯಮ ಕ್ಷೇತ್ರಗಳ ನಡುವೆ ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಕಲ್ಪಿಸುತ್ತವೆ. ಇದು ವೈಜ್ಞಾನಿಕ ಜ್ಞಾನವನ್ನು ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸಿ, ಜನರು ಹೆಚ್ಚು ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸಲು ಶಕ್ತಿ ತುಂಬುತ್ತದೆ” ಎಂದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡೆವಲಪ್‌ ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ದೀಪಕ್ ಕುಮಾರ್ ಸೈನಿ ಮಾತನಾಡಿ , “ಆರೋಗ್ಯಕರ ವೃದ್ಧಾಪ್ಯಕ್ಕೆ ದೀರ್ಘಾಯುಷ್ಯ ಮತ್ತು ಜೀವನದ ಗುಣಮಟ್ಟವನ್ನು ರೂಪಿಸುವ ಜೈವಿಕ, ಕ್ಲಿನಿಕಲ್ ಮತ್ತು ಜೀವನಶೈಲಿಯ ಅಂಶಗಳ ಆಳವಾದ ತಿಳುವಳಿಕೆ ಅಗತ್ಯವಿದೆ. ರೈಸ್ ಫಾರ್ ಹೆಲ್ತಿ ಏಜಿಂಗ್ ಸಮ್ಮೇಳನವು ವೈಜ್ಞಾನಿಕ ಸಂವಾದ ಮತ್ತು ಸಹಯೋಗವನ್ನು ಮುನ್ನಡೆಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೆಡೆ ತಂದಿದೆ. ಸಾಕ್ಷ್ಯಾಧಾರಿತ ಆರೋಗ್ಯ ಮತ್ತು ಕ್ಷೇಮಕ್ಕೆ ಬದ್ಧವಾಗಿರುವ ಹರ್ಬಲೈಫ್‌ ನೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಸಂಶೋಧನೆಯನ್ನು ಸಮುದಾಯಕ್ಕೆ ಪ್ರಯೋಜನವಾಗುವ ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸುವ ನಮ್ಮ ಪ್ರಯತ್ನಗಳಿಗೆ ಈ ಸಹಯೋಗ ಪೂರಕವಾಗಿದೆ” ಎಂದು ತಿಳಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ಸ್ವಕುಳ ಸಾಳಿ ಸಮಾಜದ ವತಿಯಿಂದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
Next: ಮಂಕಾಳ್ ವೈದ್ಯ ಅವರು ಸಜ್ಜನ ವ್ಯಕ್ತಿ: ಸಿಎಂ ಬಣ್ಣನೆ

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.