Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೂರು ವರ್ಷದಿಂದ ಪಾವತಿಯಾಗದ ಜೆಜೆಎಂ ಬಾಕಿ ಬಿಲ್
  • State
  • ಶಹಾಪುರ

ಮೂರು ವರ್ಷದಿಂದ ಪಾವತಿಯಾಗದ ಜೆಜೆಎಂ ಬಾಕಿ ಬಿಲ್

Praja Vahini July 22, 2026 1 minute read
WhatsApp Image 2026-07-22 at 18.15.42
Spread the love

ಜೆಜೆಎಂ ಬಿಲ್ ಬಾಕಿ, ಯಾವಾಗ ಆಗಲಿದೆ ಪಾವತಿ? / ಕಲಬುರಗಿ ಯಾದಗಿರಿ ಜಿಲ್ಲೆ ಗುತ್ತಿಗೆದಾರರ ಪರದಾಟ

ಶಹಾಪುರ: ಜಲ ಜೀವನ್ ಮಿಷನ್(ಜೆಜೆಎಂ) ಅನುದಾನ ಬಿಡುಗಡೆ ಕುರಿತಂತೆ ಕಲಬುರಗಿ ಸೇರಿ ಇನ್ನಿತರ ಜಿಲ್ಲೇಗೆ ಇದುವರೆಗೆ ರಾಜ್ಯ, ಕೇಂದ್ರದಿಂದ ನಿಗದಿತ ಪೂರ್ಣ ಪ್ರಮಾಣದ ಅನುದಾನ ಬಂದಿಲ್ಲ. ಅಬ್ಬರದ ಪ್ರಚಾರಕಷ್ಠೇ ಮಹಾತ್ವಕಾಂಕ್ಷೆ ಯೋಜನೆಯ ಹೆಸರು ಹೇಳುತ್ತಿದ್ದಾರೆ ಹೊರತು ಕಳೆದ 3 ವರ್ಷದಿಂದ ಗುತ್ತಿಗೆದಾರರಿಗೆ ಮಾಡಿದ ಕೆಲಸಕ್ಕೆ ಅರ್ದಂಬರ್ಧ ಬಿಲ್ ಪಾವತಿಯಾಗಿದೆ, ಪಂಚಾಯತ್‌ಗೆ ಹಸ್ತಾಂತರ ಮಾಡಿ 2 ವರ್ಷಗಳೆ ಕಳೆದರು ಇನ್ನೂ ಬಾಕಿ ಬಿಲ್ ಪಾವತಿಯಾಗಿಲ್ಲಾ.

ಗುತ್ತಿಗೆದಾರರಿಗೆ ಕಾಮಗಾರಿಗಾಗಿ ಸರ್ಕಾರದ ಮಟ್ಟದಲ್ಲಿ ತುಂಬಿದ ಶೇ.10 ರಷ್ಟು ಹಣವನ್ನು ವಾಪಸ್ ಗುತ್ತಿಗೆದಾರರಿಗೆ ನೀಡಬೇಕು. ಕಡಿತಗೊಂಡ ಹಣವನ್ನು ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ಮಾಡಬೇಕು.

ಗ್ರಾಮೀಣ ಭಾಗದಲ್ಲಿ ನಿಗದಿತ ಗುಣಮಟ್ಟದ ನಿಯಮಿತ ಮತ್ತು ಧೀರ್ಘಾವಧಿಯ ಆಧಾರದ ಮೇಲೆ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಲ ಜೀವನ್ ಮಿಷನ್-ಹರ್ ಘರ್ ಜಲ್ ಅನ್ನು ಜಾರಿಗೊಳಿಸಿದೆ, ಆದರೆ ಇದು ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎನ್ನುವುದು ತಿಳಿಯುತ್ತಿಲ್ಲಾ. ಕಲಬುರಗಿ ಯಾದಗಿರಿ ಜಿಲ್ಲೇಯಲ್ಲಿ ಕೈಗೊಂಡ ಜೆಜೆಎಂ ಕಾಮಗಾರಿಗಳ ಬಿಲ್ ಪಾವತಿ ಇನ್ನೂ ಆಗಿಲ್ಲಾ. ಅಧಿಕಾರಿಗಳಿಗೆ ಕೇಳಿದರೆ ಸರ್ಕಾರದ ಮೇಲಾಕಿ ಸುಮ್ಮನಾಗುತ್ತಾರೆ. ಹೆಚ್ಚು ಕೇಳಲು ಹೋದರೆ ಕೆಲಸವೇ ಸರಿಯಾಗಿ ಮಾಡಿಲ್ಲಾ ಎಂದು ಹೆದರಿಸುತ್ತಾರೆ.

ನಿಯಾಮವಳಿಗಳ ಪ್ರಕಾರ ಕಾಮಗರಿ ಮುಗಿದು ಪಂಚಾಯತ್ ವ್ಯಾಪ್ತಿಗೆ ನೀಡಿದರೆ ಮುಗಿತು, ಆದರೆ ಕೇಲ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡಿಲ್ಲಾ, ಎಂದು ವರ್ಷವಿಡಿ ಗುತ್ತಿಗೆದಾರರನ್ನು ಸತಾಯುಸುತ್ತಿದ್ದಾರೆ. ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಪ್ರಿಯಾಂಕ ಖರ್ಗೆ ಅವರು ತಮ್ಮ ಅಧಿಕಾರ ಇರುವವರೆಗೂ ಗುತ್ತಿಗೆದಾರರ ಸಮಸ್ಯೆಗೆ ಪೂರ್ಣ ಪರಿಹಾರ ಕೊಡಿಸಲಿಲ್ಲಾ.

ಜೆಜೆಎಂ ಮಾರ್ಗಸೂಚಿ ಪ್ರಕಾರ ಕಾಮಗಾರಿ ಕೈಗೊಂಡು ಆರು ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿದೆ. ಈಗಾಗಲೇ ಅಗತ್ಯ ದಾಖಲೆಗಳೊಂದಿಗೆ ಬಿಲ್ ಪಾವತಿಗೆ ಸಲ್ಲಿಸಿ ಸುಮಾರು ೩ ವರ್ಷಗಳೇ ಕಳೆಯುತ್ತಿವೆ. ಆದರೆ ಹಣ ಮಾತ್ರ ಬಂದಿಲ್ಲಾ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗುತ್ತಿಗೆದಾರರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದೀಗ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಈಶ್ವರ್ ಖಂಡ್ರೆ ಅವರು ಅಧಿಕಾರ ವಹಿಸಿಕೊಂಡಿದ್ದು ಅವರಾದರು ಗುತ್ತಿಗೆದಾರರ ಸಮಸ್ಯೆಗೆ ಮುಕ್ತಿ ಕೊಡಿಸುತ್ತಾರೆ ಎನ್ನುವುದು ಗುತ್ತಿಗೆದಾರರ ನಂಬಿಕೆಯಾಗಿದೆ.

ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ಯೋಜನೆಯನ್ನು ಡಿಸೆಂಬರ್ ೨೦೨೮ರ ವರೆಗೆ ವಿಸ್ತರಿಸಿದೆ. ಜೆಜೆಎಂ 2.೦ ಅಡಿಯಲ್ಲಿ ಬೃಹತ್ ಅನುದಾನವನ್ನು ಘೋಷಿಸಿದೆ, ಆದರೆ ಹಿಂದಿನ ಬಾಕಿ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದಲ್ಲಿ ಕಾಮಗಾರಿಗಳ ವೇಗಕ್ಕೆ ಹಿನ್ನಡೆಯಾಗುತ್ತಿದೆ ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ದರ್ಶನಾಪುರ ರಂತಹ ಶಾಸಕರನ್ನು ಪಡೆದ ನಾವೇ ಪುಣ್ಯವಂತರು

ಗುತ್ತಿಗೆದಾರರ ಸಂಘ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದೆ, ಮೂರು ವರ್ಷ ಕಳೆದ ಇಲಾಖೆಯ ಮಂತ್ರಿಗಳೆ ಬದಲಾದರು ಆದರೆ, ಬಾಕಿ ಮೊತ್ತ ಪಾವತಿ ಆಗುತ್ತಿಲ್ಲ. ಈ ಬಗ್ಗೆ ಪದೇ ಪದೇ ಮನವಿ ಮಾಡುತ್ತಿದೆ. ಸಂಭಂಧಿಸಿದಂತೆ ಪತ್ರವನ್ನು ಬರೆಯಲಾಗಿದೆ. ಆದರೆ ಅನುದಾನ ಬಿಡುಗಡೆ ಆದ ಕೂಡಲೇ ಬಾಕಿ ಪಾವತಿ ನೀಡಲಾಗುವುದು ಎಂಬ ಭರವಸೆ ಸಿಗುತ್ತಿದೆಯಷ್ಟೇ. ಬಾಕಿ ಪಾವತಿಗಾಗಿ ಇಲಾಖೆಗಳ ಕಛೇರಿಗಳಿಗೆ ಅಲೆದಾಡಬೇಕಾದ ಸ್ಥೀತಿ ಇದೆ ಎಂಬ ಆರೋಪ ಗುತ್ತಿಗೆದಾದರದ್ದು. ಸಕಾಲಕ್ಕೆ ಬಿಲ್ ಪಾವತಿಯಾಗದೇ ಕಾಮಗಾರಿಗಾಗಿ ಮಾಡಿದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಈಗಿರುವಾಗ ಜೀವನ ಮೇಲಿನ ಆಸೆಯೇ ಹೋಗಿದ್ದು ಇಲಾಖೆ ಸಚಿವರ ಹೆಸರು ಬರೆದು ಸಾಯುವುದೊಂದೆ ದಾರಿ ಎನ್ನುತ್ತಾರೆ ನೊಂದ ಗುತ್ತಿಗೆದಾರರು.

ಕಲಬುರಗಿ, ಕೋಲಾರ, ರಾಮನಗರ, ದೊಡ್ಡಬಳ್ಳಾಪುರ, ತುಮಕೂರ, ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಮಾಡಿದ ಗುತ್ತಿಗೆದಾರರ ಬದುಕು ಬಾಕಿ ಬಿಲ್ ಪಾವತಿಯಾಗದೇ ಮೂರಾಬಟ್ಟೆಯಾಗಿದೆ. ಇದರ ನಡುವೆ ಸರ್ಕಾರಗಳ ಹಗ್ಗ ಜಗ್ಗಾಟದಿಂದ ಗುತ್ತಿಗೆದಾರರು ನಲುಗಿ ಹೋಗಿದ್ದಾರೆ, ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೆಜೆಎಂ ಬಾಕಿ ಬಿಲ್ ಪಾವತಿಸಬೇಕು ಎಂದು ಸುವರ್ಣಾ ಕರ್ನಾಟಕ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷರು ಸಂಗಣ್ಣ ಸೈದಾಪುರ ಶಹಾಪುರ ಹೇಳಿದರು.

 

.

About the Author

Praja Vahini

Editor

View All Posts

Spread the love

Post navigation

Previous: ದರ್ಶನಾಪುರ ರಂತಹ ಶಾಸಕರನ್ನು ಪಡೆದ ನಾವೇ ಪುಣ್ಯವಂತರು
Next: ಸಮಗ್ರ ಕ್ಲಸ್ಟರುಗಳನ್ನು ಅಭಿವೃದ್ಧಿ ಪಡಿಸಲು ಒತ್ತು: ಎಂ ಬಿ ಪಾಟೀಲ

Views:

333

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.