ಶಹಾಪುರ: ಜನಪರ ನಾಯಕರಾಗಿ ಮತ್ತು ಪ್ರಭಾವಿ ಸಚಿವರರಾಗಿ ಗುರುತಿಸಿಕೊಂಡಿರುವ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಾಮನ್ಯ ವ್ಯಕ್ತಿಯಂತೆ ಜನರೊಡನೆ ಬೇರೆತು ದಿನಕ್ಕೆ ಮೂರು ಗ್ರಾಮೀಣ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿಕೊಂಡು ಕ್ಷಣರ್ಧದಲ್ಲೇ ಪರಿಹಾರ ಒದಗಿಸುವ ಕೆಲಸ ಅವರು ಮಾಡುತ್ತಿದ್ದು ಕ್ಷೇತ್ರದ ಜನತೆಯ ಮನಸ್ಸಲ್ಲಿ ನೆಲೆಸಿದ್ದಾರೆ ಎಂದು ಅವರ ಅಭಿಮಾನಿಯೊಬ್ಬರು ಪ್ರತಿಕೆಗೆ ತಿಳಿಸಿದ್ದಾರೆ.
ತಾಲೂಕಿನ ನಡಿಹಾಳ, ನಡಿಹಾಳ ತಾಂಡಾ, ದಂಡ ಸೊಲಾಪುರ, ಚಾಮನಾಳ ಗ್ರಾಮಗಳಿಗೆ ಬೇಟಿ ನೀಡಿದ್ದ ವೇಳೆ ಅಲ್ಲಿನ ಜನರೊಡನೆ ಆತ್ಮಿಯತೆಯಿಂದ ಸಮಸ್ಯೆಗಳನ್ನು ಆಲಿಸಿದರು.
ಕ್ಷೇತ್ರದ ಜನತೆಯ ಪ್ರಕಾರ ಈಗಾಗಲೇ ಸಚಿವ ಸ್ಥಾನಕ್ಕಾಗಿ ಎಲ್ಲೇಡೆ ಒಳಗೊಳಗೆ ಕಿತ್ತಾಟಗಳು ನಡೆಯುತ್ತಿವೆ. ಇದಾವುದಕ್ಕೆ ತಲೆ ಕೇಡಿಸಿಕೊಳ್ಳದ ಶಾಸಕ ದರ್ಶನಾಪುರ ಅವರು ತೋರಿಕೆಗಾಗಿ ಜನರ ಸಮಸ್ಯೆಯನ್ನು ಆಲಿಸದೇ ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದ್ದಾರೆ. ಸಚಿವ ಸ್ಥಾನ ಸಿಗಲಿ ಬಿಡಲಿ ಸದಾ ಜನರೊಂದಿಗೆ ಕುಳಿತು ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದಾರೆ. ಇದೇ ಅಲ್ಲವಾ ಜನರಿಗೆ ಬೇಕಾಗಿರುವುದು, ಇಂತಹ ಶಾಸಕರನ್ನು ಪಡೆದ ನಾವೇ ಪುಣ್ಯವಂತರು ಎನ್ನುವುದು ಜನರ ಅಭಿಪ್ರಾಯ.
ಶಾಸಕ ದರ್ಶನಾಪುರ ಅವರು ಅಧಿಕಾರ ಮತ್ತು ಹಣ ಶಾಶ್ವತವಲ್ಲ ನಾವು ಮಾಡಿದ ಕೆಲಸಗಳು ಮಾತ್ರ ಕೊನೆಯವರೆಗೂ ಉಳಿಯುತ್ತವೆ ಎನ್ನುವ ನಿಟ್ಟಿನಲ್ಲಿ ಯಾವುದೇ ಆಸೆ, ಆಕಾಂಕ್ಷಗಳನ್ನು ಇಟ್ಟುಕೊಳ್ಳದೇ ಜನಪರವಾದ ಕೆಲಸದಿಂದಲೇ ಅವರ ವ್ಯಕ್ತಿತ್ವವನ್ನು ಹೆಚ್ಚಿಸಿಕೊಂಡಿದ್ದಾರೆ.
ಜನಸಾಮಾನ್ಯರ ದೈನಂದಿನ ಸಮಸ್ಯೆಗಳಿಗೆ ಸ್ಪಂದಿಸುವ , ಅವರ ನೈಜ ಜೀವನದೊಂದಿಗೆ ಬೆರೆತಿರುವ, ಕ್ಷೇತ್ರದ ಜನರ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ದರ್ಶನಾಪರ ರಂತಹ ಶಾಸಕರು ಪ್ರಸ್ತುತ ಯುವ ರಾಜಕಾರಣಿಗಳಿಗೆ ಮಾದರಿ. ಪಾರದರ್ಶಕ ಮತ್ತು ಪ್ರಮಾಣಿಕತೆಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಶ್ರಮಿಸುತ್ತಾರೆ.
ನಿಮ್ಮ ಕೆಲಸ ಮಾಡುತ್ತೇನೆ ಎಂದು ಒಮ್ಮೆ ಮಾತು ಕೊಟ್ಟರೆ ಅದನ್ನು ಎಂದಿಗೂ ಮಾಡದೇ ಬಿಡುವವರಲ್ಲಾ. ಇನ್ನೂ ಹಾಸ್ಯ ಪ್ರಜ್ಞೆ ಎಲ್ಲರಿಗೂ ಸಿದ್ದಿಸುವಂತದಲ್ಲಾ. ಮಾತಿನ ನಡುವಲ್ಲಿ ಅಲಲ್ಲಿ ಹಾಸ್ಯ ಇಣುಕುವಂತೆ ಮಾಡಿ ಯಾರಿಗೂ ಎಲ್ಲೂ ಬೇಸರವಾಗದಂತೆ ಹಿಡಿದಿಟ್ಟು ಕಲೆಯೇ ಅವರನ್ನು ಉತ್ತಮ ವಾಗ್ಮಿಯನ್ನಾಗಿ ಮಾಡಿದೆ. ಇನ್ನೂ ಎದುರಾಳಿಗಳಿಗೆ ಮಾತಿನ ಚಾಟಿಯಲ್ಲೇ ಬಿಸಿಮುಟ್ಟಿಸುವ ಅವರ ವಾಕ್ಷಾತುರ್ಯಕ್ಕೆ ಎಂಥವರೂ ತಲೆಬಾಗುತ್ತಾರೆ. ಸದ್ಯ ಸಚಿವ ಸ್ಥಾನದ ರೇಸ್ನಲ್ಲಿರುವ ಅವರಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ಇಡೀ ಕ್ಷೇತ್ರದ ಜನತೆಯ ಬೇಡಿಕೆಯಾಗಿದೆ.
