ಬೆಂಗಳೂರು: ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಹೆಚ್ ನಟರಾಜ್ ಅವರನ್ನು ಡಿ ಎಸ್ ಎಸ್ ಅಧ್ಯಕ್ಷ ಎನ್ ಮೂರ್ತಿ ಹಾಗೂ ಡಿ ಎಸ್ ಎಸ್ ಇನ್ನಿತರ ಮುಖಂಡರು ಸೇರಿ ಇಂದು ಅಭಿನಂದಿಸಿದರು.
ಇನ್ನು ನೂತನವಾಗಿ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿರುವ ಹೆಚ್ ನಟರಾಜ್ ಅವರು ಮಾತನಾಡಿ, ನಿಗಮವನ್ನ ಇನ್ನಷ್ಟು ಅಭಿವೃದ್ಧಿಪಡಿಸಲು ನಾನು ಮಹತ್ವದ ಕೆಲಸ ಮಾಡುವುದರ ಜೊತೆಗೆ ಚರ್ಮ ಕೈಗಾರಿಕವನ್ನು ನಂಬಿಕೊಂಡು ಬದುಕುತ್ತಿರುವ ಜನರಿಗೆ ನಾನು ಇನ್ನಷ್ಟು ಬದುಕು ಕಟ್ಟಿಕೊಳ್ಳಲು ನೆರವು ಮಾಡುವುದಾಗಿ ಹೇಳಿದರು. ಇದನ್ನೂ ಓದಿ: ಚರ್ಮ ಕುಶಲಕರ್ಮಿಗಳ ಸಮಗ್ರ ಅಭಿವೃದ್ಧಿಗೆ ರಾಜ್ಯಮಟ್ಟದ ಸಂವಾದ ಯಶಸ್ವಿ
