ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ನಾಲ್ಕನೇ ದಿನವೂ ಮುಂದುವರಿಸಿದ್ದಾರೆ.
ವಲಯ 1ರಲ್ಲಿ ನಡೆದ ಕಾರ್ಯಾಚರಣೆ ಬ್ಯಾಟರಾಯನಪುರ ವಿಭಾಗ ಬ್ಯಾಟರಾಯನಪುರ ವಿಭಾಗದ ವ್ಯಾಪ್ತಿಯ ಬೆಳ್ಳಹಳ್ಳಿ ರಸ್ತೆಯಿಂದ ರೇವಾ ಕಾಲೇಜು ವೃತ್ತದವರೆಗೆ ಸುಮಾರು 5.00 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
ವಿದ್ಯಾರಣ್ಯಪುರ ವಿಭಾಗ ವಿದ್ಯಾರಣ್ಯಪುರ ವಿಭಾಗದ ವ್ಯಾಪ್ತಿಯ ಎನ್ಎಚ್-44 ಕೊಡಿಗೇಹಳ್ಳಿ ಗೇಟ್ನಿಂದ ಕೊಡಿಗೇಹಳ್ಳಿ ರೈಲ್ವೆ ಅಂಡರ್ಪಾಸ್ವರೆಗಿನ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಸುಮಾರು 1.50 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
ಪುಲಿಕೇಶಿನಗರ ವಿಭಾಗ ಪುಲಿಕೇಶಿನಗರ ವಿಭಾಗದ ವ್ಯಾಪ್ತಿಯ ಟ್ಯಾನರಿ ರಸ್ತೆಯಿಂದ ಕ್ಲಾರೆನ್ಸ್ ಶಾಲೆಯವರೆಗಿನ ಪಾಟರಿ ರಸ್ತೆಯಲ್ಲಿ ಸುಮಾರು 0.40 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
ಸರ್ವಜ್ಞನಗರ ವಿಭಾಗದ ವ್ಯಾಪ್ತಿಯ 9ನೇ ಮುಖ್ಯರಸ್ತೆ, ಎಚ್ಆರ್ಬಿಆರ್ 1ನೇ ಬ್ಲಾಕ್ (ಸರ್ವಿಸ್ ರಸ್ತೆಯಿಂದ 2ನೇ ಕ್ರಾಸ್ವರೆಗೆ) ಸುಮಾರು 1.70 ಕಿ.ಮೀ. ಹಾಗೂ 2ನೇ ಕ್ರಾಸ್ (7ನೇ ಮುಖ್ಯರಸ್ತೆಯಿಂದ 100 ಅಡಿ ರಸ್ತೆಯವರೆಗೆ) ಸುಮಾರು 1.20 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲಾಯಿತು.
