Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಲಿ: ಬೊಮ್ಮಾಯಿ
  • Politics
  • State

ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಲಿ: ಬೊಮ್ಮಾಯಿ

Praja Vahini June 23, 2026 1 minute read
WhatsApp Image 2026-06-23 at 20.15.47
Spread the love

ಗದಗ: ಬಿಡದಿ ಟೌನ್ ಶಿಪ್ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಕಷ್ಟು ಜಮೀನುಗಳಿವೆ. ನಾವು ಕೂಡ ಸ್ಯಾಟಲೈಟ್ ಟೌನ್‌ಗಳನ್ನು ಮಾಡಬೇಕು ಅಂತ. ನಾವು ಕೋಲಾರ, ಚಿಕ್ಕಬಳ್ಳಾಪುರ ಏರಿಯಾದಲ್ಲಿ ಸುಮಾರು 2000 ಎಕರೆ ಸರ್ಕಾರಿ ಭೂಮಿ ಇದೆ, ಅಲ್ಲಿ ಮಾಡಬೇಕು ಅಂತ ಯೋಚನೆ  ನಡೀತಿದೆ. ಹಾಗಾಗಿ ಸರ್ಕಾರದ ಭೂಮಿ ಇರುವಂತಹ ಜಾಗದಲ್ಲಿ ಮಾಡಿ, ಅದಕ್ಕೆ ಸಕಲ ಲಾಜಿಸ್ಟಿಕ್ ವ್ಯವಸ್ಥೆಗಳನ್ನ ಮಾಡಬೇಕು, ಉದಾಹರಣೆಗೆ ಸಾಕಷ್ಟು ಕ್ಲಸ್ಟರ್‌ಗಳಿದೆ, ಕಾಲೇಜು, ಯೂನಿವರ್ಸಿಟಿಗಳೂ ಕೂಡ ಇವೆ. ಆ ಕೆಲಸ ಮಾಡಬೇಕು ಹೊರತಾಗಿ, ರೈತರ ಜಮೀನನ್ನು ತೆಗೆದುಕೊಳ್ಳುವುದು ಅಷ್ಟೊಂದು ಸಮಂಜಸ ಅಲ್ಲ ಎಂದು ಹೇಳಿದರು.

​ನಾನು ಮುಖ್ಯಮಂತ್ರಿಗಳಿಗೆ ಸಲಹೆ ಮಾಡುವುದು ಇಷ್ಟೇ, ಪ್ರತಿಷ್ಠೆ ಮಾಡಿಕೊಳ್ಳದೆ  ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ತಮ್ಮದೇ ಆದಂತಹ ಒಂದು ವ್ಯವಸ್ಥೆ ಮಾಡಿಕೊಂಡು  ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಅನ್ನು ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದರು.

ಬರ ಘೊಷಿಸಲಿ

​ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ, ಇದು ಸಂಪೂರ್ಣವಾಗಿ ಬರಗಾಲದ ಪರಿಸ್ಥಿತಿಯನ್ನ ತೋರಿಸುತ್ತಿದೆ. ಮೊದಲು ಬರಗಾಲ ಘೋಷಣೆ ಮಾಡಿದರೆ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನನ್ನ ಮೊದಲನೇ ಆಗ್ರಹ ರಾಜ್ಯ ಸರ್ಕಾರಕ್ಕೆ, ಮೊದಲೇ ಒಂದು ಸರ್ವೆಯನ್ನು ಮಾಡಿ ಅದಕ್ಕೆ ಬರಗಾಲದ ಘೋಷಣೆಯನ್ನು ಮಾಡಬೇಕು. ಮುಂದೆ ಪರಿಹಾರ ಕೊಡುವುದಕ್ಕೆ ಕೇಂದ್ರದ ಅನುದಾನ ಏನೇ ವ್ಯವಸ್ಥೆ ಇದ್ದರೂ, ಮುಂಗಾರು ಮಳೆಗೆ ಈಗ ಬೆಳೆ ನಷ್ಟ ಉಂಟಾದಾಗ ಅದಕ್ಕೂ ಕೂಡ ಪರಿಹಾರ ಕೊಡುವುದಕ್ಕೆ ಬರ ಘೋಷಣೆ ಮಾಡಿದರೆ ತಾನೇ ಇದೆಲ್ಲ ಮಾಡೋಕೆ ಸಾಧ್ಯ ಎಂದರು. ಇದನ್ನೂ ಓದಿ: ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಕಟ್ಟಡ ವ್ಯವಸ್ಥೆಗೆ ಸೂಚನೆ: ಸಿಎಂ ಡಿಕೆಶಿ

​ಮಾಧ್ಯಮದವರು ಕೃಷಿ ಸಚಿವರೇ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ರೈತರ ಗೋಳು ಕೇಳುವವರೇ ಇಲ್ಲ. ಅಧಿಕಾರಿಗಳು, ಕೃಷಿ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಅನ್ನೋದು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ.

ಕೇಂದ್ರದ ಯೋಜನೆ ಕಾಪಿ

​ಉದ್ಯೋಗ ಮತ್ತು ಜಿಐಪಿಆರ್ ಜಿಆರ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಇದೊಂದು ತಮ್ಮದೇ ಕಾರ್ಯಕ್ರಮ ಅಂತ ಬಹಳ ದೊಡ್ಡ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ.  ರಾಷ್ಟ್ರೀಯ ವಲಯದಲ್ಲಿ ರಿಜಿಸ್ಟ್ರೇಶನ್ ಮಾಡುವಂತಹ ಕೆಲಸ, ಅದೇನು ಅದರಿಂದ ಏನು ಸರ್ಕಾರ ಏನು ಎಂಪ್ಲಾಯ್ಮೆಂಟ್ ಕೊಡೋದಕ್ಕೆ ಆಗಲ್ಲ.

​ಆದರೆ, ಇದು ಇಡೀ ರಾಷ್ಟ್ರದಲ್ಲೇ ಮೊದಲು ಅಂತ ಏನು ಕ್ಲೈಮ್ ಮಾಡ್ತಾರೋ, ರಾಷ್ಟ್ರದಲ್ಲಿ ಮೊದಲು ಅಲ್ಲ. ಕೇಂದ್ರ ಸರ್ಕಾರ ಈಗಾಗಲೇ ಅಂತಹ ಪೋರ್ಟಲ್ ಅನ್ನು ಮಾಡಿದೆ. ‘ಜಾಬ್ ಸೀಕರ್ಸ್’ ಮತ್ತು ‘ಜಾಬ್ ಪ್ರೊವೈಡರ್ಸ್’ ಯಾರಿಗೆ ಕೆಲಸ ಬೇಕು ಮತ್ತು ಯಾರು ಕೆಲಸ ಕೊಡ್ತಾರೆ, ಅವರ ಮಧ್ಯೆ ಒಂದಕ್ಕೊಂದು ಎಕ್ಸ್ಚೇಂಜ್ ಮಾಡಿ ಈಗಾಗಲೇ ಆ ಪೋರ್ಟಲ್ ನಿಂದ 45 ಲಕ್ಷ ಜನರಿಗೆ ಕೆಲಸ ಸಿಕ್ಕಿದೆ.

 

 

About the Author

Praja Vahini

Editor

View All Posts

Spread the love

Post navigation

Previous: ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ ನಗರದ ಅಭಿವೃದ್ಧಿ  ಬಗ್ಗೆ ಚರ್ಚೆ ತೇಜಸ್ವಿ ಸೂರ್ಯ
Next: 280 ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.