ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ನಗರ ಜಿಲ್ಲೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ವಿವಿಧ ಸೈಕ್ಲಿಂಗ್ ಕ್ಲಬ್ ಗಳ ಜಂಟಿ ಸಹಯೋಗದಲ್ಲಿ ಸಂಡೇ ಆನ್ ಸೈಕಲ್ ಪರಿಕಲ್ಪನೆಯೊಂದಿಗೆ ಶ್ರೀ ಕಂಠೀರವ ಕ್ರೀಡಾಂಗಣ ದಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ಕ್ಯಾಂಪಸ್ ವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದ್ದು 250 ಸೈಕ್ಲಿಸ್ಟ್ಸ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶ್ರೀ ಭಾಸ್ಕರ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಶಶಿಕಲಾ ನಮ್ಮ ಸೈಕಲ್ ಕ್ಲಬ್ ನ ವೆಂಕಿ ಅಚಿಂತ್ಯ, ಪ್ರಶಾಂತ್, ಹಾಗೂ ಇತರೆ ಸೈಕ್ಲಿಸ್ಟ್ಸ್ ಪಾಲ್ಗೊಂಡಿದ್ದರು. Fit india ಯೋಜನೆಯಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸೈಕಲ್ ಸವಾರಿಯಿಂದ ಉಂಟಾಗುವ ಸಕಾರಾತ್ಮಕ ಪರಿಣಾಮಗಳಿಂದ ಸಮುದಾಯದ ಆರೋಗ್ಯ ಮತ್ತು ಪರಿಸರ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
