ಶಹಾಪುರ: ಉತ್ತಮ ಆರೋಗ್ಯಕ್ಕಾಗಿ ಪರಿಸರ ಅತ್ಯವಶ್ಯವಿದ್ದು, ಮುಂದಿನ ಪೀಳಿಗೆಗೂ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಸಸಿ ನೆಡುವ ಮೂಲಕ ಮಾತನಾಡಿ ಒಂದೇ ದಿನ ಪರಿಸರ ಪ್ರೇಮ ತೋರದೆ ದಿನನಿತ್ಯವೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಗೆ ಪರಿಸರ ಆಶ್ರಯ ತಾಣವಾಗಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ಮಂಜುನಾಥ, ಮೇಲ್ವಿಚಾರಕಿ ಜ್ಯೋತಿ ಗುಮ್ಶೇಟ್ಟಿ, ಮಂಜು ಬಿರೆದಾರ, ಜಯ್ರಾಮ್, ವಿಜಯಕುಮಾರಿ, ಸಂಗು, ಶಿವಣ್ಣ, ಪ್ರಕಾಶ, ದೇವು ಸೇರಿದಂತೆ ಸಿಬ್ಬಂದಿಗಳು ಇದ್ದರು.
