ಕಲಬುರಗಿ: ನಟಿ ಕಾವ್ಯಾ ಅವರು ಬಿಗ್ ಬಾಸ್ ಗೆ ಹೋದಮೇಲೆ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಹೌದು, ಕಾವ್ಯಾ ಅವರು ಕನ್ನಡ ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಸಿದ ಬಳಿಕ ಅವರಿಗೆ ಅಭಿಮಾನಿಗಳ ಬಳಗ ಹೆಚ್ಚಾಗಿದ್ದು ಹಲವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಅವರು ಇತ್ತೀಚಿಗಷ್ಟೇ ಕಲ್ಬುರ್ಗಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಅವರಿಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವೇದಿಕೆ ಮೇಲೆ ಮಾತನಾಡುತ್ತಿರುವ ಸಂದರ್ಭದಲ್ಲಿ ಕಾವ್ಯಾ ಅವರ ಕೈಯಲ್ಲಿದ್ದ ಮೈಕ್ನ್ನು ಕಾರ್ಯಕ್ರಮ ಆಯೋಜಿಕರು ಕಿತ್ತುಕೊಂಡು ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯೆಸ್…ಕಾರ್ಯಕ್ರಮದ ವೇಳೆ ಕಾವ್ಯಾ ಅಭಿಮಾನಿಗಳು ಸೆಲ್ಫಿ ಕೇಳಲು ಮುಂದಾದಾಗ, ವೇದಿಕೆ ಮೇಲೆಯೇ ಆಯೋಜಕರು ಕೆಲ ಅಭಿಮಾನಿಗಳನ್ನು ತಳ್ಳಿದ್ದಾರೆ. ಅಲ್ಲದೆ, ಕಾವ್ಯಾ ಅವರ ಕೈಯಿಂದ ಮೈಕ್ ಕಸಿದುಕೊಳ್ಳಲಾಗಿದೆ. ಈ ಘಟನೆ ಬಳಿಕ ಅವರ ಅಭಿಮಾನಿಗಳು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಕಾರ್ಯಕ್ರಮ ಆಯೋಜಕರು ತಳ್ಳಿಹಾಕಿದ್ದಾರೆ. ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗುರು ಬಂಡಿ ಪ್ರತಿಕ್ರಿಯೆ ನೀಡಿ, ಕಾವ್ಯಾ ಅವರಿಗೆ ಯಾವುದೇ ಅವಮಾನ ಆಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ಸೇರಿಕೊಂಡ ಬಿಗ್ ಬಾಸ್ ಖ್ಯಾತಿಯ ಜಾನ್ವಿ
2 ಗಂಟೆಯ ಕಾರ್ಯಕ್ರಮಕ್ಕಾಗಿ ಕಾವ್ಯಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಕೇವಲ 5 ನಿಮಿಷದಲ್ಲೇ ಕಾರ್ಯಕ್ರಮ ಬಿಟ್ಟು ಹೋಗಲು ಮುಂದಾದರು. ಅಭಿಮಾನಿಗಳು ಕೊಟ್ಟ ಫೋಟೋಗಳನ್ನು ಕೂಡ ಅಲ್ಲೇ ಬಿಸಾಡಿ ಹೋಗಿದ್ದಾರೆ. ಅವರಿಗೆ ನೀಡಬೇಕಿದ್ದ ಸಂಪೂರ್ಣ ಹಣವನ್ನು ನಾವು ಕೊಟ್ಟಿದ್ದೇವೆ. ಕಾರ್ಯಕ್ರಮ ಆಯೋಜಕರ ಕಡೆಯಿಂದ ಯಾವ ತಪ್ಪು ಆಗಿಲ್ಲ, ಕಾವ್ಯಾ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಇಷ್ಟೇಲ್ಲಾ ಆಗಿದೆ ಎಂದು ಗುರು ಬಂಡಿ ಸ್ಪಷ್ಟಪಡಿಸಿದ್ದಾರೆ.
