ಸಿನಿಮಾ ರಂಗದ ಸೆಲೆಬ್ರಿಟಿಗಳೆಂದರೆ ಅವರಿಗೆ ಡೇಟಿಂಗ್, ಚಾಟಿಂಗ್ ಎನ್ನುವುದು ಸರ್ವೇಸಾಮಾನ್ಯ ಆಗಿಬಿಟ್ಟಿರುತ್ತದೆ.
ಹೌದು, ಸಿನಿಮಾ ರಂಗದ ತಾರೆಯರು ತಮ್ಮ ನೆಚ್ಚಿನವರ ಜೊತೆ ಡೇಟಿಂಗ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗಿಬಿಟ್ಟಿದೆ.
ಇನ್ನು ಕನ್ನಡ ಚಿತ್ರರಂಗದಿಂದ ತನ್ನ ಬಣ್ಣದ ಬದುಕಿಗೆ ರೆಕ್ಕೆ ಕಟ್ಟಿಕೊಂಡಿರುವ ನಟಿ ಶ್ರೀಲೀಲಾ ಹಾಗೂ ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿವೆ. ಆದರೆ ಈ ಎಲ್ಲ ವದಂತಿಗಳಿಗೆ ಶ್ರೀಲೀಲಾ ಅವರ ತಾಯಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಾಗಿಣಿ ಸಂಸಾರದಲ್ಲಿ ಬಿರುಕು!
ಶ್ರೀಲೀಲಾ ಹಾಗೂ ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ ವದಂತಿಗಳಿಗೆ ಪ್ರತಿಕ್ರಿಯಿಸಿದ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು. ಶ್ರೀಲೀಲಾ ತನ್ನ ಶಿಕ್ಷಣ ಮತ್ತು ಸಿನಿಮಾ ವೃತ್ತಿ ಜೀವನದ ಬಗ್ಗೆ ಮಾತ್ರ ಗಮನ ಹರಿಸಿದ್ದಾಳೆ. ಜೂನ್ನಲ್ಲಿ ನಡೆಯಲಿರುವ ನೀಟ್-ಪಿಜಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಶ್ರೀಲೀಲಾಗೆ ಮದುವೆ ಅಥವಾ ಪ್ರೀತಿ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
