ಬೆಂಗಳೂರು: ದಾವಣಗೆರೆ ವಾಸಿ, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ಅನುರಾಧ ಜಿ.ಎಸ್ ಅವರು ಸಲ್ಲಿಸಿದ ಪಿಹೆಚ್.ಡಿ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದಡಿಯಲ್ಲಿ ಅಂಗೀಕರಿಸಿದೆ. ಡಾ. ಕೆ.ಆರ್. ಪುಂಡರೀಕ ವಿಠ್ಠಲ ಅವರ ಮಾರ್ಗದರ್ಶನದಲ್ಲಿ “An Analysis of sectorial allocation in Union budget and its impact on stock market performance” ಎಂಬ ವಿಷಯ ಕುರಿತು ಸಂಶೋಧನೆ ನಡೆಸಿದ್ದರು. ಇತ್ತೀಚಿಗೆ ನಡೆದ ಘಟಿಕೋತ್ಸವದಲ್ಲಿ ಅವರಿಗೆ ಪಿಹೆಚ್. ಡಿ ಪದವಿ ಪ್ರದಾನ ಮಾಡಲಾಗಿದೆ.
