Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಇಡೀ ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ: ಡಿಕೆಶಿ
  • National
  • Politics
  • ಮುಂಬೈ

ಇಡೀ ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತಿದೆ: ಡಿಕೆಶಿ

Praja Vahini May 14, 2026 1 minute read
WhatsApp Image 2026-05-14 at 17.54.52
Spread the love

ಮುಂಬೈ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಆಗಮಿಸಿದ್ದಾಗ ಬೆಂಗಳೂರನ್ನು ‘ಜಾಗತಿಕ ನಗರ’ ಎಂದು ಬಣ್ಣಿಸಿದರು. ಬೆಂಗಳೂರು ಇಷ್ಟು ಪ್ರಮಾಣದಲ್ಲಿ ಮನ್ನಣೆ ಪಡೆಯುತ್ತಿರುವ ಬಗ್ಗೆ ನಾವು ಹೆಮ್ಮೆ ಪಡಬೇಕು. ಬೆಂಗಳೂರು ಕೇವಲ ನಗರವಲ್ಲ. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಇದು ಬೆಂಗಳೂರಿನ ಶಕ್ತಿ. ಬಾಗ್ಮನೆ ಕೂಡ ದೊಡ್ಡದಾಗಿ ಬೆಳೆದಿದ್ದು, ಸಾಕಷ್ಟು ಅವಕಾಶ ಕಲ್ಪಿಸಿದೆ. 200 ಮಿಲಿಯನ್ ಚದರಡಿಯಷ್ಟು ಎ ಗ್ರೇಡ್ ಕಚೇರಿ ಜಾಗವನ್ನು ಹೊಂದಿದೆ. ಇದು ಭಾರತದಲ್ಲೇ ಅತಿ ದೊಡ್ಡದಾಗಿದ್ದು, ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಇಂದು (ಗುರುವಾರ ಮೇ. 14) ಬಾಗ್ಮನೆ ಕೇಂದ್ರ ಕಚೇರಿ ಬೆಲ್ ರಿಂಗಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 30 ವರ್ಷಗಳ ಬಾಗ್ಮನೆ ಪಯಣದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಈ ಕಾರ್ಯಕ್ರಮ ಬರೀ ಆರ್ಥಿಕ ದೃಷ್ಟಿಕೋನದ ಕಾರ್ಯಕ್ರಮವಲ್ಲ. ಇದು ಗಳಿಸಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಈ ಸಂಸ್ಥೆ ಮೊದಲ ದಿನದಿಂದಲೂ ತನ್ನ ಮೂಲವನ್ನು ಮರೆಯದೇ ಸಾಗಿಬಂದಿದೆ. ಬಾಗ್ಮನೆ ಪ್ರೈಮ್ ಆಫೀಸ್ ಆರ್ ಇಐಟಿ ಮೇಲೆ ಇಟ್ಟಿರುವ ನಂಬಿಕೆ ತುಂಬಾ ದೊಡ್ಡದು. ಈ ಸಂಸ್ಥೆ ಬೆಳವಣಿಗೆ ಹಿಂದೆ ಬಹಳಷ್ಟು ಕಠಿಣ ಪರಿಶ್ರಮವಿದೆ ಎಂದು ತಿಳಿಸಿದರು.

ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಆ ಸಮಯದಲ್ಲಿ ನಾಲ್ಕೈದು ದೇಶಗಳ ನಾಯಕರು ಬೆಂಗಳೂರಿಗೆ ಬಂದು ಹೋಗಿದ್ದರು. ಆಗ ವಾಜಪೇಯಿ ಅವರು, ಇಷ್ಟು ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ತೆರಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಹಿಜಾಬ್ ಬಗ್ಗೆ ಮಾತಾಡೋರು ಮೊದಲು ನೀಟ್ ಹಗರಣಕ್ಕೆ ಉತ್ತರ ಕೊಡಲಿ: ಮಧು ಬಂಗಾರಪ್ಪ

ಕರ್ನಾಟಕವು ಪ್ರತಿ ವರ್ಷ 1 ಲಕ್ಷ ಐಟಿ ವೃತ್ತಿಪರರನ್ನು ಸೃಷ್ಟಿಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ವೃತ್ತಿಪರರಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಐಟಿ ಪಾರ್ಕ್ ಗಳು ಒಂದೇ ಪ್ರದೇಶದಲ್ಲಿದ್ದು, 16 ಕಿ.ಮೀ ಉದ್ದದ ರಸ್ತೆಯಲ್ಲೇ ಶೇ.80 ರಷ್ಟು ಅಂದರೆ, ಸುಮಾರು 16 ಲಕ್ಷ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ವ್ಯವಸ್ಥೆ ದೇಶದ ಬೇರೆ ಯಾವುದೇ ಪ್ರದೇಶದಲ್ಲಿ ಇಲ್ಲ. ಇದು ಬೆಂಗಳೂರಿನ ಶಕ್ತಿ ಎಂದು ಬಣ್ಣಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ಹಿಜಾಬ್ ಬಗ್ಗೆ ಮಾತಾಡೋರು ಮೊದಲು ನೀಟ್ ಹಗರಣಕ್ಕೆ ಉತ್ತರ ಕೊಡಲಿ: ಮಧು ಬಂಗಾರಪ್ಪ
Next: ಬುಕ್ ಆಫ್ ರೆಕಾರ್ಡ್ಸ್ ಬರೆದ 3 ವರ್ಷದ ಪುಟ್ಟ ಬಾಲಕಿ

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.