ಬೆಂಗಳೂರು: ತಮ್ಮ ಆಸ್ತಿಗೆ ಇ-ಖಾತಾ ಇಲ್ಲದೆ ಪರಿತಪಿಸುತ್ತಿದ್ದ ಜನರಿಗೆ ಇದೀಗ ಜಿಬಿಎ ಹೊಸ ಪ್ಲಾನ್ ನೀಡಿ ಇ-ಖಾತಾ ಸೇವೆಯನ್ನು ಮನೆ ಬಾಗಿಲಿಗೆ ತರಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಹೌದು, ಇದೆ ಮೇ 16 ರಿಂದ ಬೆಂಗಳೂರಿ ನಗರದಲ್ಲಿ ಬೃಹತ್ ಇ-ಖಾತಾ ಮೇಳವನ್ನು ಆಯೋಜಿಸಲು ಜಿಬಿಎ ಮುಂದಾಗಿದ್ದು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಲ್ಲದೆ ಯಾವುದೇ ಲಂಚ ನೀಡದೆ ನೇರವಾಗಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಇ-ಖಾತಾಗೆ ಅರ್ಜಿಯನ್ನು ಸಲ್ಲಿಸಬಹುದು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಸುಮಾರು 50 ಸ್ಥಳಗಳಲ್ಲಿ ಈ ಮೇಳ ನಡೆಯಲಿದ್ದು, ಸುಮಾರು 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವ್ಯಸನ ಮುಕ್ತ ತಮಿಳುನಾಡಿಗೆ ಮಹತ್ವದ ಹೆಜ್ಜೆ ಇಟ್ಟ: ಸಿಎಂ ವಿಜಯ್
ಇನ್ನು ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ.
ನಗರದ ಜನರಿಗೆ ಇ-ಖಾತಾ ಸೇವೆಯನ್ನು ಮತ್ತಷ್ಟು ಸರಳ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
