ಹಾವೇರಿ: ರಾಜ್ಯದಲ್ಲಿ ಹೊಸ ಮಾದರಿಯ ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಎಸ್ಸಿ-ಎಸ್ಟಿ ಸಮುದಾಯದ ಗಂಗಾ ಕಲ್ಯಾಣ ಯೋಜನೆಯಡಿ ಯಾವುದೇ ಬೋರ್ವೆಲ್ಗಳನ್ನು ಕೊರೆಯಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಯವರು ಹೇಳಿದರು.
ಈ ಕುರಿತು ನಗರದಲ್ಲಿ ಇಂದು (ಮಂಗಳವಾರ ಮೇ. 12) ಮಾತನಾಡಿದ ಅವರು, ಹಿಂದುಳಿದ ವರ್ಗಗಳ ನಿಗಮಗಳಿಗೆ ಮೀಸಲಿಟ್ಟಿದ್ದ 440 ಕೋಟಿ ರೂ.ಗಳನ್ನು ಹಿಂದುಳಿದ ವರ್ಗಗಳ ಸಮೀಕ್ಷೆಗೆ ಖರ್ಚು ಮಾಡಿದ್ದಾರೆ. ಎಸ್ಸಿಪಿ-ಟಿಎಸ್ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣದಲ್ಲಿ 1400 ಕೋಟಿ ರೂ. ಕಡಿತ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಇಲ್ಲದಂತಾಗಿದೆ. ಇದನ್ನೂ ಓದಿ: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜಿಪಿಎ ಇ-ಖಾತಾ ಸೇವೆ!
ನಾವು ಜನಪರವಾಗಿ ಹೋರಾಟ ನಡೆಸಿ, ರಾಜಕೀಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ರಾಷ್ಟ್ರೀಯ ಪಕ್ಷವಾಗಿ ಅಂತ್ಯೋದಯ ಅಭಿವೃದ್ಧಿ ಮತ್ತು ದೇಶದ ಐಕ್ಯತೆಯ ವಿಚಾರದಲ್ಲಿ ಎಲ್ಲರೂ ಜನರ ಧ್ವನಿಯಾಗುವ ಸೈನಿಕರಾಗಿ ಹೊರಹೊಮ್ಮಬೇಕು ಎಂದರು.
