ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು (ಶನಿವಾರ ಮೇ 09) ಚಿತ್ರದುರ್ಗದಲ್ಲಿ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಸೇರಿದಂತೆ ಕರ್ನಾಟಕದ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಇನ್ನು ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ನಾನು ಯಾವತ್ತೂ ಸಿಎಂ ಕನಸು ಕಂಡವನಲ್ಲ. ಜನ ಪರವಾಗಿ ಕೆಲಸ ಮಾಡಿದ್ದೇನೆ. ನಾನು ಇಷ್ಟೊಂದು ಮುಂದೆ ಬರಲು ಜನರೇ ಕಾರಣ ಎಂದು ಹೇಳಿದ್ದಾರೆ.
ನಾನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆಳೆದಿದ್ದರಿಂದಲೇ ಜನ ನನ್ನನ್ನು ಇಷ್ಟೊಂದು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ ಎಂದು ಭಾವುಕರಾಗಿ ನೋಡಿದರು. ನಿಮ್ಮ ಸೇವೆ ಮಾಡಲು ಇಷ್ಟು ದಿನ ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಎಲ್ಲಾ ಜನರಿಗೂ ಧನ್ಯವಾದ ತಿಳಿಸಿದರು.
ನಿಮ್ಮೆಲ್ಲರ ಮುಂದೆ ನೀವು ಎತ್ತಿ ಬೆಳೆಸಿದ ಮಗನಾಗಿ ಇವತ್ತು ನಿಮ್ಮ ಮುಂದೆ ನಿಂತಿದ್ದೇನೆ. ಈ ಜನಸಾಗರ ನೋಡಿ ಮಾತು ಬರುತ್ತಿಲ್ಲ, ಅಭಿಮಾನದ ಹೊಳೆಯಲ್ಲಿ ತೇಲಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ಚಿರಋಣಿ ಆಗಿದ್ದೇನೆ. ಎಷ್ಟೇ ಕಾರ್ಯಕ್ರಮ ಇದ್ದರು ಅಮಿತ್ ಶಾ ಬಂದಿದ್ದಾರೆ. ದುರ್ಗದಲ್ಲಿ ವೀರ ಮದಕರಿ ರೀತಿ ಅಮಿತ್ ಶಾ ಕಾಣಿಸುತ್ತಿದ್ದಾರೆ. ಮೋದಿ ಅವರಿಗೆ ಹೆಗಲು ಕೊಟ್ಟು ಅಮಿತ್ ಶಾ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಜಯ್ಗೆ ಸರಳ ವಿಜಯ; ಸಿಎಂ ಪಟ್ಟ ಅಲಂಕರಿಸಲು ಸಿದ್ಧ
ಯಡಿಯೂರಪ್ಪ ಚಿನ್ನದ ಚಮಚ ಇಟ್ಟುಕೊಂಡು ಬಂದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಂದವನು. ನೊಂದವರ ಪರವಾಗಿ ಕೆಲಸ ಮಾಡಿದ್ದೇನೆ. ಭಾಗ್ಯಲಕ್ಷ್ಮಿ ಯೋಜನೆ ನನಗೆ ಸಾರ್ಥಕ ಭಾವನೆ ಮೂಡಿಸಿದೆ. ಕೃಷಿ ಬಜೆಟ್ ಮಂಡಿಸಿದ್ದು ನಾನು ಎಂದೂ ಮರೆಯಲಾರೆ. ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಆರ್ಎಸ್ಎಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು ಇದಕ್ಕೆ ಕಾರಣ ಎಂದು ನುಡಿದರು.
