Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯ 9ನೇ ಆವೃತ್ತಿಗೆ ಚಾಲನೆ
  • Bangalore
  • Politics
  • State

ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯ 9ನೇ ಆವೃತ್ತಿಗೆ ಚಾಲನೆ

Praja Vahini May 2, 2026 1 minute read
WhatsApp Image 2026-05-02 at 14.38.48
Spread the love

ಬೆಂಗಳೂರು: ಜೈವಿಕ ತಂತ್ರಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರದಲ್ಲಿ ಕರ್ನಾಟಕದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಪ್ಲಾಟ್‍ಫಾರ್ಮ್ ಕೇಂದ್ರವು ರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯ (ಎನ್‍ಬಿಇಸಿ 2026) ಒಂಬತ್ತನೇ ಆವೃತ್ತಿಗೆ ಇಂದಿನಿಂದ ಚಾಲನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆಯವರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ  ಕೃಷಿ ಮಹಾ ಸವಾಲುಗಳ (ಎಜಿಸಿ) ಕಾರ್ಯಕ್ರಮದ ಮೂರನೇ ಸಮೂಹದ ವಿಜೇತರನ್ನು ಪ್ರಕಟಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ʼರಾಷ್ಟ್ರೀಯ ಜೈವಿಕ ಉದ್ಯಮಶೀಲತಾ ಸ್ಪರ್ಧೆಯಂತಹ ವೇದಿಕೆಗಳು ನಾವೀನ್ಯತೆಯನ್ನು ಹೆಚ್ಚು ಹೆಚ್ಚು ಜನರಿಗೆ ಪರಿಚಯಿಸಲು ನೆರವಾಗುತ್ತವೆ. ಯುವ ಮನಸ್ಸುಗಳು ವೈಜ್ಞಾನಿಕ ವಿಚಾರಗಳನ್ನು ಕಾರ್ಯಸಾಧ್ಯವಾದ, ವಾಸ್ತವ ಜಗತ್ತಿನ ಪರಿಹಾರಗಳಾಗಿ ಮಾರ್ಪಡಿಸಲು ಹೇಗೆ ಅನುವು ಮಾಡಿಕೊಡುತ್ತವೆ ಎಂಬುದನ್ನು ಗಮನಿಸಲು ಸಹಕಾರಿಯಾಗಿವೆ ಎಂದರು.

ಕರ್ನಾಟಕವು ಭಾರತದ ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ. ಸರ್ಕಾರದ ಪ್ರಗತಿಪರ, ಉದ್ಯಮ ಸ್ನೇಹಿನೀತಿಗಳು ಮತ್ತು ಜೈವಿಕ ತಂತ್ರಜ್ಞಾನ ನೀತಿ ಮತ್ತು ಜೈವಿಕ ಆರ್ಥಿಕ ವರದಿಯಂತಹ ಉಪಕ್ರಮಗಳಿಂದ ಬೆಂಬಲಿತವಾಗಿದೆ. ನಾವು ಇಂದು 9ನೇ ಆವೃತ್ತಿಯನ್ನು ಪ್ರಾರಂಭಿಸುತ್ತಿದ್ದಂತೆ ಎನ್‍ಬಿಇಸಿ 2026 ಜೈವಿಕ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಜಾಗತಿಕ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆʼ ಎಂದು ಸಚಿವ ಖರ್ಗೆ ಹೇಳಿದರು. ಇದನ್ನೂ ಓದಿ: ಜನರ ವಿರೋಧಿ ಕೇಂದ್ರ ಸರ್ಕಾರದ ಬಣ್ಣ ಮತ್ತೆ ಬಟಾಬಯಲು: ಈಶ್ವರ್ ಖಂಡ್ರೆ

ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ಇಲಾಖೆಯ ನಿರ್ದೇಶಕ ಮತ್ತು ಕೆಐಟಿಎಸ್ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಮತ್ತು ಸಿ-ಸಿಎಎಂಪಿಯ ಸಿಇಒ ಮತ್ತು ನಿರ್ದೇಶಕ ಡಾ. ತಸ್ಲಿಮರಿಫ್ ಸೈಯದ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

 

 

 

About the Author

Praja Vahini

Editor

View All Posts

Spread the love

Post navigation

Previous: ಅಪ್ಪನಾದ ಡಾಲಿ ಧನಂಜಯ್
Next: ಪ್ರತಿದಿನ ಒಂದು ಬಾಳೆಹಣ್ಣು ಸೇವೆನ ಮಾಡುವುದರಿಂದ ಸಿಗುವ ಲಾಭಗಳೇನು ಗೊತ್ತಾ?

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.