ಪ್ರತಿದಿನ ಮೊಟ್ಟೆ ಸೇವಿಸುವುದು ದೇಹಕ್ಕೆ ಹಲವಾರು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಮೊಟ್ಟೆಯಲ್ಲಿ ಸಮೃದ್ಧ ಪ್ರೋಟೀನ್ ಮತ್ತು ಅಗತ್ಯ ಅಮೈನೋ ಆಮ್ಲಗಳು ಇರುವುದರಿಂದ ಶಕ್ತಿ ಹೆಚ್ಚುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
ವೇಟ್ ಲಾಸ್ ಮಾಡಲು ಬಯಸುವವರು ಪ್ರತಿನಿತ್ಯ ಬೆಳಿಗ್ಗೆ ಎರಡು ಮೊಟ್ಟೆ ತಿನ್ನಬಹುದು. ಇದು ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಜೊತೆಗೆ ಕಣ್ಣಿನ ದೃಷ್ಟಿ, ಮೆದುಳಿನ ಕಾರ್ಯಕ್ಷಮತೆ ಮತ್ತು ಸ್ಮರಣಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ.
ಅಲ್ಲದೆ ಮೊಟ್ಟೆಯಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅದಲ್ಲದೆ ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯಕ್ಕೂ ಇದು ಉತ್ತಮ ಆಹಾರವಾಗಿದೆ. ಆದರೆ ಮಧುಮೇಹ ಅಥವಾ ಹೃದಯ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಮೊಟ್ಟೆ ಸೇವಿಸುವುದು ಉತ್ತಮ. ಇದನ್ನೂ ಓದಿ: ನಿಮಗೆ ಬಿಳಿ ಕೂದಲಿನ ಸಮಸ್ಯೆ ಕಾಡ್ತಾ ಇದ್ದೀಯಾ? ಹಾಗಾದ್ರೆ ಈ ಸಿಂಪಲ್ ಮನೆಮದ್ದು ಬಳಸಿ!
ಇನ್ನು ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಮಕ್ಕಳಿಗೆ ಮೊಟ್ಟೆಯನ್ನು ನೀಡಬೇಕಾದರೆ ಮಿತವಾಗಿ ಮೊಟ್ಟೆ ನೀಡುವುದು ಉತ್ತಮ. ಹೆಚ್ಚಾಗಿ ತಿಂದರೆ ಬೇಸಿಗೆಯಲ್ಲಿ ಉಷ್ಣ, ಹೆಚ್ಚಾಗುತ್ತದೆ ಜೊತೆಗೆ ಹಲವಾರು ತೊಂದರೆಗಳಾಗುತ್ತವೆ ಆದ್ದರಿಂದ ಮಕ್ಕಳ ಆರೋಗ್ಯದ ಮೇಲೆ ಗಮನ ಇಟ್ಟು ಮಿತವಾಗಿ ಮೊಟ್ಟೆ ಕೊಡುವುದು ಒಳ್ಳೆಯದು.
