Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಣೆಯಾಗಿದ್ದ ಯುವಕನ ಶವ ಪತ್ತೆ, ಕೊಲೆ ಶಂಕೆ
  • Crime
  • State
  • ಶಹಾಪುರ

ಕಾಣೆಯಾಗಿದ್ದ ಯುವಕನ ಶವ ಪತ್ತೆ, ಕೊಲೆ ಶಂಕೆ

Praja Vahini April 21, 2026
WhatsApp Image 2026-04-21 at 17.50.10
Spread the love

ಶಹಾಪುರ: ನಗರದ ಇಂದಿರಾನಗರ ಬಡಾವಣೆಯ ನಿವಾಸಿ ನರಸಿಂಗ್ ಕುಮಾರ ತಂದೆ ದತ್ತುರಾವ್ ಚೋಳಕರ್ (24) ಏ.15 ರಂದು ಕಾಣೆಯಾಗಿದ್ದ ಯುವಕ ಇಂದು (ಮಂಗಳವಾರ ಏ. 21) ಯಾದಗಿರಿಯ ಭೀಮ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಘಟನೆ ವಿವರ

ಮೃತ ನರಸಿಂಗ್ ತಂದೆ ದತ್ತುರಾವ್ ಅವರು ನಗರ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದರನ್ವಯ ನನಗೆ ಮೂರು ಜನ ಗಂಡು ಮಕ್ಕಳು ಇದ್ದು, ನನ್ ಮಗ ನರಸಿಂಗ್ ಕುಮಾರ ಸೇರಿ ಇನ್ನಿಬ್ಬರು ಸಹೋದರರು ಕೂಡಿಕೊಂಡು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನಸಾಗಿಸುತ್ತಿದ್ದು, ಏ. 15 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಟ್ಟೆ ಅಂಗಡಿಯನ್ನು ತೆರೆದಿದ್ದಾನೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಟ್ಟೆ ನೋವು ಎಂದು ಹೇಳಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಗ್ಲೂಕೊಸ್ ಹಚ್ಚಿದ್ದರಿಂದ ಸಂಜೆ 5 ಗಂಟೆಗೆ ಮನೆಗೆ ಕರೆದುಕೊಂಡು ಹೋಗಿದ್ದೇನೆ.

ನಂತರ ನಾನು ನನ್ನ ಮಗನನ್ನು ಮನೆಯಲ್ಲಿ ಬಿಟ್ಟು ಮತ್ತೆ ಬಟ್ಟೆ ಅಂಗಡಿಗೆ ಹೋಗಿದ್ದೇನೆ. ಸಂಜೆ 6 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಫೊನ್ ಸ್ವಿಚ್ ಆಫ್ ಆಗಿದೆ. ಬಳಿಕ ಸಂಭಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನಲೇ ರಾತ್ರಿ ನಗರ ಠಾಣೆಗೆ ಹೋಗಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಮೃತ ನರಸಿಂಗ್‌ನ ತಂದೆ ದತ್ತುರಾವ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  ಇದೀಗ ಯುವಕನ ಶವ ನದಿಯಲ್ಲಿ ಪತ್ತೆಯಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ: ಜಮೀರ್ ಅಹ್ಮದ್

ಕೊಲೆ ಶಂಕೆ

ಏ.15 ರಂದು ಮನೆಯಿಂದ ಹೋದ ನನ್ನ ಮಗನನ್ನು ಹುಡುಕಿಕೊಡಲು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ. ಯಾವುದೊ ಒತ್ತಡದಿಂದ ನನ್ನ ಮಗ ನರಳುತ್ತಿದ್ದು, ಈ ಬಗ್ಗೆ ಪಾರದರ್ಶಕವಾಗಿ ತನಖೆ ಮಾಡಬೇಕು ಎಂದು ದತ್ತುರಾವ್ ಚೋಳಕರ್ ಮೃತ ಯುವಕನ ತಂದೆ ಹೇಳಿದ್ದಾರೆ.

ಏ. 15 ರಂದು ಮೃತ ಯುವಕ ನರಸಿಂಗ್ ಕಾಣೆಯಾಗಿದ್ದಾನೆ ಎಂದು ಅವರ ತಂದೆ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆಯ ಭಾಗವಾಗಿ ಪರಿಶೀಲಿಸಿದಾಗ ಮೃತ ಯುವಕನು ಯಾವುದೊ ಕಾರಣಕ್ಕೆ ಕಿನ್ನತೆಗೆ ಒಳಗಾಗಿದ್ದ ಎಂದು ತಿಳಿದಿದ್ದು, ದೋರನಹಳ್ಳಿ ಗ್ರಾಮದ ಬಳಿ ಬೈಕ್ ಸ್ಕೀಡ್ ಆಗಿದೆ. ಅಲ್ಲಿದ್ದ ಕೇಲ ಗ್ರಾಮಸ್ಥರು ಸಹಕರಿಸಿದ್ದರಿಂದ ಅಲ್ಲಿಂದ ಯಾವುದೊ ಬಾಡಿಗೆ ಕಾರ್‌ನಲ್ಲಿ ಯಾದಗಿರಿಗೆ ಹೋಗಿದ್ದಾನೆ. ನಂತರ ಡ್ರೈವರ್‌ಗೆ ಬ್ರೀಡ್ಜ್ ಬಳಿ ಬಿಡಲು ಹೇಳಿದ್ದಾನೆ ಅಲ್ಲಿಯೇ ಈ ದುರ್ಘಟನೆ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಶಹಾಪುರ ಪಿಐ ಎಸ್.ಎಂ ಪಾಟೀಲ್ ತಿಳಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ನಿಮಗೆ ಹೊಟ್ಟೆ ಬೊಜ್ಜಿನ ಸಮಸ್ಯೆ ಇದಿಯಾ? ಹಾಗಾದ್ರೆ ಹೀಗೆ ಮಾಡಿದ್ರೆ ಕೊಬ್ಬು ಕರಗುವುದು ಖಚಿತ!
Next: ತಮಿಳುನಾಡಿನ ಆಡಳಿತ ಪಕ್ಷದ ಸಚಿವರಿಗೆ ನಟ ವಿಜಯ್ ತಿರುಗೇಟು!

Views:

1503

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.