ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಉಪಚುನಾವಣೆ ದಂಗಲ್ ದಿನದಿಂದ ದಿನಕ್ಕೆ ಒಂದೊಂದು ತಿರುಗು ಪಡೆದುಕೊಳ್ಳುತ್ತಿದ್ದು, ಸಚಿವ ಜಮೀರ್ ಅಹ್ಮದ್ ಅವರು ಕಾಂಗ್ರೆಸ್ ಪಕ್ಷಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇದೀಗ ಈ ಸುದ್ದಿ ಕುರಿತು ಸಚಿವ ಜಮೀರ್ ಅಹ್ಮದ್ ಅವರು ಪ್ರತಿಕ್ರಿಯಿಸಿದ್ದು, ನಾನು ಯಾವ ಜೆಡಿಎಸ್ ಗೆ ಹೋಗುವುದಿಲ್ಲ. ನನಗೆ ಕಾಂಗ್ರೆಸ್ ನಲ್ಲಿ ಏನು ಕಡಿಮೆಯಾಗಿಲ್ಲ ಹಾಗಾಗಿ ನಾನು ಕಾಂಗ್ರೆಸ್ ಪಕ್ಷ ದಿಂದ ಜೆಡಿಎಸ್ ಗೆ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು (ಮಂಗಳವಾರ ಏ. 21) ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ನೀಡಿದೆ ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ಗೆ ಇಡಿ ಶಾಕ್; ಸುಮಾರು 21 ಗಂಟೆಗಳ ಸುದೀರ್ಘ ಶೋಧ
ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ. ನಾನು ಯಾಕೆ ಜೆಡಿಎಸ್ಗೆ ಹೋಗಲಿ. ನಾನು ಜೆಡಿಎಸ್ಗೆ ಹೋಗುತ್ತೇನೆ ಅನ್ನೋದು ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
ನಾನು ಜೆಡಿಎಸ್ ಬಿಟ್ಟು ಬಂದು ಮತ್ತೆ ಯಾಕೆ ಹೋಗಲಿ? ಕಾಂಗ್ರೆಸ್ ಪಕ್ಷ ನನಗೇನು ಕಡಿಮೆ ಮಾಡಿಲ್ಲ. 2017 ರಲ್ಲಿ ನಾನು ಕಾಂಗ್ರೆಸ್ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಕುಮಾರಸ್ವಾಮಿ ಸಿಎಂ ಇದ್ದರು. ನಿರೀಕ್ಷೆ ಕೂಡಾ ಮಾಡಿರಲಿಲ್ಲ, ಯಾರನ್ನು ಕೇಳಿರಲಿಲ್ಲ ಆಗಲೇ ಮಂತ್ರಿ ಮಾಡಿದ್ರು. 5 ಖಾತೆಗಳನ್ನ ಕೊಟ್ಟಿದ್ದರು. ಜೆಡಿಎಸ್ನಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಕ್ಫ್ ಖಾತೆ ಮಾತ್ರ ಕೊಟ್ಟಿದ್ದರು. 5 ಖಾತೆ ಕೊಟ್ಟಿದ್ದರು ಕಾಂಗ್ರೆಸ್ ಅವರು. ಈಗ 2023ರಲ್ಲಿ 4 ಖಾತೆ ಕೊಟ್ಟಿದ್ದಾರೆ. ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ ಜೆಡಿಎಸ್ಗೆ ಹೋಗೋಕೆ ಎಂದು ಹೇಳಿದರು.
