Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಅನೇಕ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ: ಸಿಎಂ
  • Politics
  • State
  • ಕಲಬುರಗಿ

ಅನೇಕ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ: ಸಿಎಂ

Praja Vahini April 11, 2026 1 minute read
WhatsApp Image 2026-04-11 at 20.57.37
Spread the love

ಕಲಬುರಗಿ: ಅನೇಕ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದು ಅದಕ್ಕೆ ನಾವು ಬಲಿಯಾಗಬಾರದು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಭೋಜಲಿಂಗೇಶ್ವರ ಕ್ಷೇತ್ರದ ಮಹತ್ವವನ್ನು ಜನರಿಗೆ ತಿಳಿಸಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು (ಶನಿವಾರ ಏ. ೧೧) ಚಿತ್ತಾಪುರ ತಾಲ್ಲೂಕಿನ ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ನೂತನ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿ, ಕಲ್ಯಾಣ ಮಂಟಪವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಜಾತಿ ಧರ್ಮಗಳು, ಭಾಷೆ, ಸಂಸ್ಕೃತಿಗಳಿರುವ ಸಮಾಜದಲ್ಲಿ ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಬೇಕು  ಎಂದರು.

ಭೋಜಲಿಂಗೇಶ್ವರರು ಸಮಾಜಕ್ಕೆ ಸತ್ಯದ ದಾರಿಯನ್ನು ತೋರಿ ಸಮಾನತೆ, ಭಾವೈಕ್ಯತೆಯನ್ನು ಸಾರಿದವರು. ನಾವೆಲ್ಲರೂ ಮನುಷ್ಯರಾಗಿದ್ದು, ಮಾನವರಾಗಿ ಬದುಕಬೇಕಿದೆ.  ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಪರಸ್ಪರ ದ್ವೇಷವನ್ನು ಬಿತ್ತುವವರು ನಮ್ಮ ಮಧ್ಯೆ ಇದ್ದಾರೆ. ಸಮಾಜವನ್ನು ಧರ್ಮ, ಜಾರಿಯ ಹೆಸರಿನಲ್ಲಿ ಒಡೆದು, ಒಬ್ಬರನ್ನು ಮತ್ತೊಬ್ಬರ ವಿರುದ್ಧ ಎತ್ತಿ  ಕಟ್ಟುವ ಕೆಲಸ ಮಾಡುವ ಪಟ್ಟಭದ್ರ ಹಿತಾಸಕ್ತಿಗಳು ಇದ್ದು ಅವರ ಆಮಿಷಕ್ಕೆ ಬಲಿಯಾಗಬಾರದು ಎಂದರು. ಅದನ್ನೇ ಬೊಜಲಿಂಗೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ ಎಂದರು.

ಎಲ್ಲರೂ ಕಾಯಕ ಮಾಡಬೇಕು

“ಮುಂದೆ ಗುರಿ, ಹಿಂದೆ ಗುರು” ಇರಬೇಕು ಎಂದು ಸಾಧು, ಸಂತರು, ಸಮಾಜ ಸುಧಾರಕರು, ಬಸವಣ್ಣನವರು ಹೇಳಿದ್ದು ಎಂದರು. ಸಮಾಜದಲ್ಲಿರುವ ಎಲ್ಲರೂ ಕಾಯಕವನ್ನು ಮಾಡಬೇಕು, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಅಸಮಾನತೆ ಹೋಗಲಾಡಿಸಲು ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ದೊರಕಬೇಕು ಎಂದರು. ಇದನ್ನೂ ಓದಿ: ಪಿಯುಸಿ ಫಲಿತಾಂಶದಲ್ಲಿ ಕೃಪಾನಿಧಿ ಪಿಯು ಕಾಲೇಜ್ ಉತ್ತಮ ಫಲಿತಾಂಶ

ಸಮ ಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು

ಬುದ್ಧ, ಬಸವಣ್ಣ, ಕನಕದಾಸರು ಹೇಳಿದ ವಿಚಾರಗಳು ನಮ್ಮ ಮುಂದಿದ್ದರೂ ನಾವು ದಾರಿತಪ್ಪುತ್ತೇವೆ. ಅದಕ್ಕಾಗಿಯೇ ಜಾತಿ ವ್ಯವಸ್ಥೆ ಈವರೆಗೆ ಹೋಗಿಲ್ಲ.  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೇಲು ಕೀಳು ಎಂಬ  ತಾರತಮ್ಯ ಹೋಗಲಾಡಿಸಲು ಶ್ರಮಿಸಿದರು. ಸಮ ಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರೂ ಇದನ್ನು  ಆಚರಣೆಗೆ ತಂದರೆ ಮಾತ್ರ ಇದು ಸಾಧ್ಯ. ಜಾತಿ ವ್ಯವಸ್ಥೆಗೆ ಚಲನೆ ಬರಬೇಕಾದರೆ ಎಲ್ಲರಿಗೂ ಸಾಮಾಜಿಕ,  ಆರ್ಥಿಕ ಬಲ ಬರಲೇಬೇಕು ಎಂದರು.

 

About the Author

Praja Vahini

Editor

View All Posts

Spread the love

Post navigation

Previous: ಪಿಯುಸಿ ಫಲಿತಾಂಶದಲ್ಲಿ ಕೃಪಾನಿಧಿ ಪಿಯು ಕಾಲೇಜ್ ಉತ್ತಮ ಫಲಿತಾಂಶ
Next: ಕಣ್ಮನ ಸೆಳೆದ ಪತ್ರಕರ್ತರ 40ನೇ ಸಮ್ಮೇಳನ

Views:

47

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.