Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪಿಯುಸಿ ಫಲಿತಾಂಶದಲ್ಲಿ ಕೃಪಾನಿಧಿ ಪಿಯು ಕಾಲೇಜ್ ಉತ್ತಮ ಫಲಿತಾಂಶ
  • Bangalore
  • State

ಪಿಯುಸಿ ಫಲಿತಾಂಶದಲ್ಲಿ ಕೃಪಾನಿಧಿ ಪಿಯು ಕಾಲೇಜ್ ಉತ್ತಮ ಫಲಿತಾಂಶ

Praja Vahini April 11, 2026 1 minute read
WhatsApp Image 2026-04-11 at 18.23.41
Spread the love

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾದೆ.ಪರೀಕ್ಷೆ ಬರೆದಿದ್ದ 7,10,363 ವಿದ್ಯಾರ್ಥಿಗಳ ಪೈಕಿ ಬರೋಬ್ಬರಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ಈ ಬಾರಿ ದಾಖಲೆ ಮಟ್ಟದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 13 ರಷ್ಟು ಹೆಚ್ಚಳವಾಗಿದೆ.

ಅದರಂತೆ  ಕೋರಮಂಗಲದ ಕೃಪಾನಿಧಿ ದ್ವಿತೀಯ ಪಿಯು ಕಾಲೇಜು ಪ್ರತಿ ವರ್ಷದಂತೆ ಈ ವರ್ಷವೂ 99.21% ಫಲಿತಾಂಶ ಬಂದಿದೆ. ಕೃಪಾನಿಧಿ ವಿದ್ಯಾಸಂಸ್ಥೆಯಿಂದ   291 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್‌ ಪಡೆದಿದ್ರೆ, 433 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿಜ್ಞಾನ ವಿಭಾದಲ್ಲಿ ದೀಪಿಕಾ.ಎಂ 99.17 ಪರ್ಸೆಂಟೇಜ್ ಪಡೆಯುವ ಮೂಲಕ ಇಡೀ ಕೃಪಾನಿಧಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ರೆ, 98.5 ಅನುಷ ವಿಎನ್ ದ್ವಿತೀಯ ಸ್ಥಾನ ಹಾಗೂ 98.33 ಪರ್ಸೆಂಟೇಜ್ ಗಳಿಸಿ ಯಶಸ್ವಿನಿ ಎಂ ತೃತೀಯ ಸ್ಥಾನ ಗಳಿಸಿದ್ದಾರೆ.

ಇನ್ನು ಕಾಮರ್ಸ್‌ ವಿಭಾಗದಲ್ಲಿ ತಲಾ 99 % ಪರ್ಸೆಂಟೇಜ್ ಗಳಿಸಿ ಸಂಜನಾ ಹಾಗೂ ಸೈಯದ್‌ ಬತೂಲ್‌ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ 98.50 ಪರ್ಸೆಂಟೇಜ್‌ ಗಳಿಸಿ  ರಕ್ಷಿತಾ ಆರ್, ತನಿಷ್ಕಾ ವಿ ಹಾಗೂ ಅನುಷಾ ವಿ.ಎನ್.‌ ಇದ್ದಾರೆ… ಒಟ್ಟಾರೆ ಕಾಲೇಜಿನಲ್ಲಿ

ಇನ್ನು ಫಲಿತಾಂಶ ಪ್ರಕಟವಾಗ್ತಿದ್ದಂತೆ ಉತ್ತಮ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಕೃಪಾನಿಧಿ ವಿದ್ಯಾ ಸಂಸ್ಥೆಯ ಚೇರ್ಮನ್ ಆಗಿರುವ ನಾಗಪಾಲ್ ಅವರು ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ವೇಳೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಿಹಿತಿನಿಸಿ ಅಭಿನಂದನೆ ಸಲ್ಲಿಸಿದ್ರು.

ಬಳಿಕ ಮಾತನಾಡಿದ ಕೃಪ ನಿಧಿ ಸಾಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊಪೆಸರ್ ಸುರೇಶ್ ನಾಗಪಾಲ್, ಅಧ್ಯಾಪಕರ ವೃಂದದಿಂದ ಹಾಗೂ ಬೋಧನಾ ಸಿಬ್ಬಂದಿ ಕಠಿಣ ಪರಿಶ್ರಮ ಹಾಗೂ ಒಗ್ಗಟ್ಟಿನಿಂದ ವಿದ್ಯಾ ಬೋಧನೆ ಮಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆದು ಇಂದು ಕೃಪಾನಿಧಿ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಮನವರಿಕೆಯಿಂದ ವಿಶೇಷ ತರಗತಿಗಳನ್ನು ನಿರ್ವಹಿಸಿ ಹೆಚ್ಚಿನ ರೀತಿ ಪರೀಕ್ಷಾ ಪದ್ಧತಿಗಳನ್ನು ಅಳವಡಿಸುವ ಮೂಲಕ ಮಾಡ್ರನ್ ಗುರುಕುಲ ಪದ್ಧತಿಯನ್ನು ಪ್ರಾಯೋಗಿಕವಾಗಿ ನಡೆಸಿರುವುದರಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ.ಶಿಕ್ಷಕರು ಮಕ್ಕಳಿಗೆ ಶಿಸ್ತಿನಿಂದ ಪಾಠ ಹೇಳಿಕೊಡುವುದರ ಜೊತೆಗೆ ಅವರ ಪಾಲಕರು ಕೂಡ ಮಕ್ಕಳಿಗೆ ಶಿಸ್ತಿನಿಂದ ಅಭ್ಯಾಸ ಕಲಿಸಿರುವುದರಿಂದ ಇಂದು ನಮ್ಮ ಕಾಲೇಜಿಗೆ ಉತ್ತಮ ರ್‍ಯಾಂಕ್ ಬರುವುದರ ಜೊತೆಗೆ ಉತ್ತಮ ಹೆಸರು ಕೂಡ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

ಇನ್ನು ಇದೇ ಸಂದರ್ಭದಲ್ಲಿ ಕೃಪಾನಿಧಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಪ್ರೊಫೆಸರ್ asfiya ಮಾತನಾಡಿ, ಕೃಪಾನಿಧಿ ಕಾಲೇಜಿನ ಆಡಳಿತ ಮಂಡಳಿಯ ಸಹಕಾರದಿಂದ ಅಧ್ಯಾಪಕರ ಪರಿಶ್ರಮದಿಂದ ಇನ್ನು ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಬಳಿಕ ಕಾಲೇಜಿಗೇ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ದೀಪಿಕಾ ಎಂ ಮಾತನಾಡಿ, ಶಿಕ್ಷಕರ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಸಹಕಾರ ನೀಡಿರುವುದರಿಂದಲೇ ನಾನು ಇಂದು ಈ ಸ್ಥಾನ ಪಡೆದಿದ್ದೇನೆ ಎಂದರು. ಇನ್ನು ದ್ವಿತೀಯ ಸ್ಥಾನ ಪಡೆದ ಸೈಯದ್ ಬಟೂಲ್ ಮಾತನಾಡಿ,ಶಿಕ್ಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ನಮಗೆ ಪ್ರತಿನಿತ್ಯ ಟೆಸ್ಟ್ ಕಿರುಪರೀಕ್ಷೆ ಜೊತೆಗೆ ಹೆಚ್ಚಿನ ವರ್ಕ್ ನೀಡಿ ನಮಗೆ ಪಠ್ಯದ ಕಡೆ ನಮ್ಮ ಗಮನ ಹೆಚ್ಚಸಿದ್ದರಿಂದಲೇ ನಾವು ಇಂದು ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು. ಒಟ್ಟಾರೆ ಕಾಲೇಜಿನ ಕಾಲೇಜಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೋಷಕರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಅಲ್ಲದೇ ಈ ಫಲಿತಾಂಶಕ್ಕೆ ಕಾರಣವಾ ಕಾಲೇಜು ಆಡಳಿತ ಮಂಡಳಿ ಹಾಗೂ ಅಧ್ಯಪಕರು ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

About the Author

Praja Vahini

Editor

View All Posts

Spread the love

Post navigation

Previous: ಸಮಯದಾಯದವರು ನಾವೆಲ್ಲಾರು ಒಗ್ಗಟ್ಟಾಗಿರಬೇಕು: ಕೆಹೆಚ್. ಮುನಿಯಪ್ಪ‌
Next: ಅನೇಕ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ: ಸಿಎಂ

Views:

196

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.