ಬೆಂಗಳೂರರು: ಕಾಳಸಂತೆಯಲ್ಲಿ ಹೆಚ್ಚನ ಧರದಲ್ಲಿ ಮಾರಾಟ ಮಾಡುವ ಮಾಲಿಕರ ವಿರುದ್ದ ಕಾನೂನು ಕ್ರಮವಹಿಸಲಾಗುತ್ತದೆ ಮತ್ತು ಗ್ಯಾಸ್ ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಬಗೆಹರಿಸಲಾಗುವುದು ಎಂದು ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ಹೇಳಿದರು.
ವಸಂತ ನಗರದ ಆಹಾರ ಭವನದಲ್ಲಿ ಇಂದು (ಶುಕ್ರವಾರ ಏ. 10) IOC, BPC, HPC, GAIL ನ ತೈಲ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಎಲ್ ಪಿಜಿ ಸರಬರಾಜಿನಲ್ಲಿ ವಿಫಲವಾಗಿದೆ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯಕ್ಕೆ ಬೇಕಾಗುವಷ್ಟು ಅನಿಲ ಸರಬರಾಜು ಮಾಡಬೇಕು ಅತ್ಯವಶ್ಯಕವಾಗಿ ಆಟೋ ಚಾಲಕರು ಎಲ್ ಪಿ ಜಿ ಗ್ಯಾಸ್ ಅವಲಂಬಿಸಿ ಜೀವನ ಮಾಡುತ್ತಿರುವುದರಿಂದ ಅವರಿಗೆ ಸಮರ್ಪಕವಾಗಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದ್ದು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪ್ತರ ಬರೆದಿದ್ದು ಇಂದು ಮತ್ತೊಮ್ಮೆ ಕೇಂದ್ರ ಪೆಟ್ರೋಲಿಯಂ ಕಾರ್ಯದರ್ಶಿ ಯವರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಸರ್ಕಾರದ ಧರದಂತೆ ಖಾಸಗಿ ಕಂಪನಿಗಳು ವಿತರಿಸಬೇಕು ಹೆಚ್ವಿನ ಧರ ವಿದಿಸಿ ಗ್ರಾಹಕರಿಗೆ ತೊಂದರೆ ನೀಡಿದ್ದಲ್ಲಿ ಅಂತಹ ಕಂಪನಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಆಯಾ ಕಂಪನಿಗಳನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಜಾನಪದ ಜಾತ್ರೆ ಯಿಂದ ಗ್ರಾಮೀಣ ಸೊಗಡು ಹೆಚ್ಚಿಸುತ್ತದೆ
ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಈತರದ ಆಹಾಕಾರ ಉಂಟಾಗಿರುವ ಹಿನ್ನಲೆಯಲ್ಲಿ ನಾವು ಸಹರಿಸಬೇಕು ಕೇಂದ್ರ ಸರ್ಕಾರವು ಸರಿಯಾದ ಸಮಯಕ್ಕೆ ವಿತರಿಸಿರುವ ಗ್ಯಾಸ್ ಸಿಲಿಂಡರ್ ಗಳನ್ನು ನಾವು ಸರಬರಾಜು ಮಾಡುತ್ತಿದ್ದು ಇದರಲ್ಲಿ ಅವರ ಮೇಲೆ ಗೂಭೆ ಕೂರಿಸುತ್ತಿಲ್ಲಾ ಅವರು ಏನು ಕೊಡುತ್ತಿದ್ದಾರೆ ಅದನ್ನು ನಾವು ಸರಬರಾಜು ಮಾಡುತ್ತಿದ್ದು ಇದರಲ್ಲಿರಾಜ್ಯ ಸರ್ಕಾರದ ನಮ್ಮ ಪಾತ್ರವಿಲ್ಲಾ ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಇಂಧನವನ್ನು ನಾವು ರಾಜ್ಯದ ಗ್ರಾಹಕರಿಗೆ ವಿತರಣೆ ಮಾಡುವುದು ಮತ್ತು ಹೆಚ್ಚಿನ ಬೇಡಿಕೆಗೆ ಒತ್ತಡ ತಂದು ವಿತರಿಸಲು ನಾವು ಬದ್ದರಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
