ಚಡಚಣ: ಜಾನಪದ ಜಾತ್ರೆಗಳು ಗ್ರಾಮೀಣ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಬಾಂಧವ್ಯದ ಅನಾವರಣದ ವೇದಿಕೆಗಳಾಗಿವೆ ಎಂದು ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಶಂಕರ ಬಗಲಿ ಹೇಳಿದರು.
ಗುಂದವಾನ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಮಹೋತ್ಸವ ಅಂಗವಾಗಿ ಗದಗ ಜಿಲ್ಲೆಯ ಕಣ್ಣೂರು ಗ್ರಾಮದ ಜಾನಪದ ಕಲಾ ತಂಡ ದಿಂದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಾಂಪ್ರದಾಯಿಕ ನೃತ್ಯ, ಜನಪದ ಗೀತೆಗಳು, ತಿನಿಸುಗಳು ಮತ್ತು ಗ್ರಾಮೀಣ ಕ್ರೀಡೆಗಳ ಮೂಲಕ ಜನಪದ ಸೊಗಡು ಎದ್ದು ಕಾಣುತ್ತದೆ.
ಒಟ್ಟಾರೆಯಾಗಿ, ಜಾನಪದ ಜಾತಸಂಪ್ರದಾಯದ ಉಳಿವಿನ ಜೊತೆಗೆ ಮನರಂಜನೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಎಂದರು.
ಜಾನಪದ ಜಾತ್ರೆಯ ಮುಖ್ಯ ವಿಶೇಷತೆಗಳು:
ಕಲಾ ಪ್ರದರ್ಶನ: ಸಮಾಳ, ನಂದಿಕೋಲು ವಾದ್ಯ ವೈಭವ, ಕೋಲಾಟ, ಲಾವಣಿ ಪದ, ಗೀಗಿ ಪದ, ಮತ್ತು ಜಗ್ಗಲಿ ನೃತ್ಯದಂತಹ ಸಾಂಪ್ರದಾಯಿಕ ಕಲೆಗಳು ಇಲ್ಲಿ ಪ್ರಮುಖವಾಗಿರುತ್ತವೆ.
ಗ್ರಾಮೀಣ ಸೊಗಡು: ಜನಪದ ಗೀತೆಗಳ ಮೂಲಕ ಹೆಣ್ಣು ಮಕ್ಕಳ ಸಬಲೀಕರಣ, ಸಾಮಾಜಿಕ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಆಚಾರ-ವಿಚಾರ: ದೇವತೆಗಳ ಪೂಜೆ, ಮೆರವಣಿಗೆ ಮತ್ತು ಸಾಂಪ್ರದಾಯಿಕ ಆಚರಣೆಗಳು ಜಾತ್ರೆಯ ಜೀವನಾಡಿಯಾಗಿರುತ್ತವೆ.
ಮನರಂಜನೆ ಮತ್ತು ಮಳಿಗೆಗಳು: ದೈತ್ಯ ತೊಟ್ಟಿಲು, ಜೋಕಾಲಿ, ಆಟಿಕೆಗಳ ಮಳಿಗೆಗಳು ಮತ್ತು ಗ್ರಾಮೀಣ ತಿನಿಸುಗಳು ಜಾತ್ರೆಯ ಆಕರ್ಷಣೆಯಾಗಿವೆ.
ಸಾಮಾಜಿಕ ಬಂಧ: ವಿವಿಧ ಸಮುದಾಯಗಳ ಜನರು ಒಂದಾಗಿ ಸೇರುವ, ಸಾಮಾಜಿಕ ಬಾಂಧವ್ಯವನ್ನು ಹೆಚ್ಚಿಸುವ ತಾಣ ಇದಾಗಿದೆ.
ಈ ಸಂದರ್ಭದಲ್ಲಿ ವೇದ ಮೂರ್ತಿ ಕಲ್ಲಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಅಕ್ಬರ್ ಖಾನಾಪುರ, ಮಾಜಿ ಗ್ರಾ ಪಂ ಅಧ್ಯಕ್ಷ ಹಣಮಂತ ಖಡೆಖಡೆ, ಮರುತಿ ಟಕ್ಕಳಕಿ, ಗುರುಶಾಂತ ಖಾನಾಪುರ, ರಾಜಶೇಖರ ತಳವಾರ, ಆನಂದ ಕೋಳಿ, ಗಂಗಾಧರ ಖಾನಾಪುರ, ಕಾಮಣ್ಣಾ ಬಗಲಿ, ಅಡಿವೆಪ್ಪ ಬಗಲಿ, ಯಮನಪ್ಪ ಇಳಿಗೇರ, ರಮೇಶ ವಾಲಿಕಾರ, ಸೋಮಶೇಖರ್ ಕುರಗೋಡ, ಉಮೇಶ ಕೋಳಿ, ಮಲ್ಲು ದಳವಾಯಿ ಗಿರೀಶ್ ನಾವಿ, ಶಮೀರ ಅರ್ಜನಾಳ, ಶ್ರೀಶೈಲ ಕರಜಗಿ, ಇತರರು.
