ದೆಹಲಿ: ನಾಳೆ (ಗುರುವಾರ ಏಪ್ರಿಲ್ 9) ರಂದು ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸಲಾಗುತ್ತಿದ್ದು, ಮತದಾನಕ್ಕೆ ಎಲ್ಲ ರೀತಿ ತಯಾರಿಗಳನ್ನು ನಡೆಸಲಾಗಿದೆ.
ಹೌದು, ನಾಳೆ ಪುದುಚೇರಿ, ಅಸ್ಸಾಂ ಹಾಗೂ ಕೇರಳದಲ್ಲಿ ವಿಧಾನಸಭಾ ಚುನಾವಣೆನಡೆಯಲಿದೆ. ಚುನಾವಣೆಯ ಪ್ರಚಾರ ನಿನ್ನೆ (ಮಂಗಳವಾರ ಏ.07) ಸಂಜೆ ಕೊನೆಗೊಂಡಿದೆ. ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಇನ್ನು ಅಸ್ಸಾಂನ 126 ಸ್ಥಾನಗಳು, ಕೇರಳದ 140 ಸ್ಥಾನಗಳು ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಪ್ರಚಾರ ಸ್ಥಗಿತ ಏಪ್ರಿಲ್ 7 ರಂದು ಸಂಜೆ 6 ಗಂಟೆಗೆ ಎಲ್ಲಾ ಸಾರ್ವಜನಿಕ ಪ್ರಚಾರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. 1951 ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ರ ಅಡಿಯಲ್ಲಿ ವಿಧಿಸಲಾದ ಈ ನಿರ್ಬಂಧಗಳು, ಮತದಾನ ಮುಗಿಯುವ ಕೊನೆಯ 48 ಗಂಟೆಗಳ ಮೊದಲು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಬೆಂಬಲಿಗರು ಸಾರ್ವಜನಿಕ ಸಭೆಗಳು, ರ್ಯಾಲಿಗಳು ಅಥವಾ ಮೆರವಣಿಗೆಗಳನ್ನು ಆಯೋಜಿಸುವುದನ್ನು ಅಥವಾ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.
