ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ. ಸತೀಶ್ ರೆಡ್ಡಿ ಅವರ ನಾಯಕತ್ವ, ಅನುದಾನ ಹಾಗೂ ಮಾರ್ಗದರ್ಶನದಲ್ಲಿ, ಹಾಗೆಯೇ ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಮತಿ ಭಾಗ್ಯಲಕ್ಷ್ಮಿ ಮುರಳಿ, ನಗರ ಸಭೆಯ ಮಾಜಿ ಸದಸ್ಯರಾದ ಶ್ರೀ ಎ.ಎನ್. ಮುರಳಿ ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ ಪುರುಷೋತ್ತಮ್ ರವಿ ಅವರ ಪರಿಶ್ರಮದಿಂದ ಅರೆಕೆರೆ ವಾರ್ಡ್‌ನ ಮಿಕೋ ಲೇಔಟ್‌ನಲ್ಲಿ ನೂತನ ಮಕ್ಕಳ ಉದ್ಯಾನವನ ಇಂದು ಯಶಸ್ವಿಯಾಗಿ ಉದ್ಘಾಟನೆಗೊಂಡಿತು.
ಶಾಸಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಉದ್ಯಾನವನವನ್ನು ಸಾರ್ವಜನಿಕ ಅರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೊರೆಸಾನಿಪಾಳ್ಯ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಸೆಂಥಿಲ್ ಕುಮಾರ್, ಅರೆಕೆರೆ ಮಿಕೋ ಲೇಔಟ್ ಅಸೋಸಿಯೇಷನ್ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
