Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪರಿಶಿಷ್ಟ ಸಮುದಾಯಗಳ ಒಗ್ಗಟ್ಟು ಸಂವಿಧಾನದ ಆಶಯ: ಡಾ.ಹೆಚ್ ಸಿ ಮಹದೇವಪ್ಪ
  • Bangalore
  • Front news
  • Politics
  • State

ಪರಿಶಿಷ್ಟ ಸಮುದಾಯಗಳ ಒಗ್ಗಟ್ಟು ಸಂವಿಧಾನದ ಆಶಯ: ಡಾ.ಹೆಚ್ ಸಿ ಮಹದೇವಪ್ಪ

Praja Vahini April 5, 2026
e9b20df2-dfe2-431e-a93a-05c2f45ec46e
Spread the love

ಬೆಂಗಳೂರು: ಪರಿಶಿಷ್ಟ ಸಮುದಾಯಗಳು ಎಡ ಬಲ ಎನ್ನದೇ ಒಗ್ಗಟ್ಟಿನಿಂದ ಸಾಗಬೇಕು. ಇದು ಬಾಬಾ ಸಾಹೇಬರು, ಬಾಬೂಜಿ ಅವರು ಮತ್ತು ದೇಶದ ಸಂವಿಧಾನದ ಮೂಲ ಆಶಯವಾಗಿದೆ ಎಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ಹೇಳಿದರು.‌

ಇಂದು ವಿಧಾನಸೌಧದ ಮುಂಭಾಗ ಜರುಗಿದ ಡಾ.ಬಾಬು ಜಗಜೀವನ್ ರಾಂ ಅವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಸಂವಿಧಾನ ಪೂರ್ವದಲ್ಲಿ ದೇಶದ ಜನರಿಗೆ, ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯು ಹೀನಾಯವಾಗಿತ್ತು. ಬಾಬಾ ಸಾಹೇಬರ ಸಂವಿಧಾನ ಜಾರಿಯ ತರುವಾಯ ಬಾಬು ಜಗಜೀವನ್ ರಾಂ ಅಂತಹ ಹಲವು ನಾಯಕರು ರಾಜಕೀಯ ಅಧಿಕಾರ ಪಡೆದು ಜನರ ಏಳಿಗೆಗಾಗಿ ಶ್ರಮಿಸಿದರು.

ದೇಶದ ಯಾವುದೇ ಸಂವಿಧಾನಿಕ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಬಾಬು ಜಗಜೀವನ್ ರಾಂ ಅವರದ್ದು.

ಬಾಬಾ ಸಾಹೇಬರು ನೀಡಿದ ಸಂವಿಧಾನದ ಆಶಯದ ಅಡಿಯಲ್ಲಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಇದ್ದ ಬಾಬೂಜಿ ಅವರು ಸ್ವತಃ ಅವಮಾನ ಮತ್ತು ಅಸ್ಪೃಶ್ಯತೆಯನ್ನು ಅನುಭವಿಸಿದಂತಹ ವ್ಯಕ್ತಿ.

ಅಧಿಕಾರ ಇದ್ದ ಎಲ್ಲ ಸಂದರ್ಭದಲ್ಲಿಯೂ ಜನರಿಗಾಗಿ ದುಡಿದ ಅವರು ದೇಶದ ಆಹಾರ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದಂತವರು.

ಇಂತಹ ವ್ಯಕ್ತಿಗಳನ್ನು ಈ ದಿನ ಜಾತೀಯ ಸಂಕೋಲೆಗಳಲ್ಲಿ ಬಂಧಿಸಿ, ಎಡ ಬಲ ಎಂಬ ವರ್ಗೀಕರಣದಲ್ಲಿ ಸಿಲುಕಿಸುವುದು ಕೇವಲ ಬಾಬೂಜಿ ಅವರಿಗೆ ಮಾಡುವ ಅವಮಾನ ಅಲ್ಲ, ಅದು ಶೋಷಿತ ವರ್ಗಗಳ ಸಂಜೀವಿನಿ ಆದಂತಹ ಬಾಬಾ ಸಾಹೇಬರ ಸಂವಿಧಾನಕ್ಕೆ ಮಾಡುವ ಅವಮಾನ ಎಂದು ಹೇಳಿದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಬಾಬೂ ಜಗಜೀವನ್ ರಾಂ ಪ್ರಶಸ್ತಿಯನ್ನು ನೀಡಿ ಮಾನ್ಯ ಸಚಿವರು ಗೌರವಿಸಿದರು.

ಈ ವೇಳೆ ಸಚಿವ ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: Previous Post
Next: ಒಳಮೀಸಲಾತಿ ಅನುಷ್ಠಾನದ ಬಗ್ಗೆ ಗೊಂದಲಕ್ಕೆ ಒಳಗಾಗದಿರಿ: ಸಚಿವ ಮುನಿಯಪ್ಪ

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.