ಚಡಚಣ: ನಾರಾಯಣಪೂರ ಎಡದಂಡೆ ಕಾಲುವೆಗೆ ಹೊಂದಿಕೊಂಡ ಇಂಡಿ ಶಾಖಾ ಕಾಲುವೆಯ ಕಿ.ಮೀ 130.00 ರಿಂದ 172.00 ರ ವರೆಗೆ ಹಳ್ಳಿಗಳಾದ ಹಲಸಂಗಿ, ಗೋಟ್ಯಾಳ, ಮಣಂಕಲಗಿ, ಏಳಗಿ ಪಿ.ಎಚ್. ಲೋಣಿ ಬಿ.ಕೆ. ಕೆರೂರ, ಕಂಚನಾಳ ಗೋಡಿಹಾಳ, ಹಾವಿನಾಳ, ಹತ್ತಳ್ಳಿ, ನೀವರಗಿ, ರೇವತಗಾಂವ, ದಸೂರ, ಉಮರಜ ಹಾಗೂ ಚಡಚಣ ತಾಲೂಕಿನ ಹಳ್ಳಿಗಳಿಗೆ ಜನ ಜಾನುವಾರು ಹಾಗೂ ರೈತರಿಗೆ ತುಂಬಾ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ದನಕರುಗಳಿಗೆ ಸಹಿತ ಕುಡಿಯುವ ನೀರಿಲ್ಲ ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಝಳಕಿ ಇವರಿಗೆ ಎಷ್ಟೇ ಬಾರಿ ಮನವಿ ಅರ್ಜಿ ಕೊಟ್ಟಿದ್ದರು ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ತಿಳಿಸಿದರು.
ಫೆಬ್ರುವರಿ ಮತ್ತು ಮಾರ್ಚ ತಿಂಗಳಲ್ಲಿ ಸಹ ಕಾಲುವೆಗೆ ನೀರನ್ನು ಬಿಟ್ಟಿರುವುದಿಲ್ಲ. ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಡಚಣ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದನಕರುಗಳಿಗೆ ಕುಡಿಯಲು ನಾರಾಯಣ ಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆಗೆ 4-5 ದಿನ ನೀರನ್ನು ಹರಿಸಿದರೆ ಮಾತ್ರ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯುತ್ತದೆ.
ಈಲ್ಲವಾದಲ್ಲಿ ದಿನಾಂಕ: 18.03.2026 ರಿಂದ ಕೃಭಾಜನಿನಿ, ವಿಭಾಗ ಸಂ:8 ಝಳಕಿ ಕಛೇರಿ ಮುಂದೆ ಅನಿರ್ದಿಷ್ಠಾವದಿ ಧರಣಿ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಇದಕ್ಕೂ ಕೂಡಾ ನೀವು ಸ್ಪಂದಿಸದೇ ಇದ್ದಲ್ಲಿ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗುತ್ತೀರಿ.
ಆದ್ದರಿಂದ ರೈತರ ಸಮಸ್ಯೆಯನ್ನು ಮನಗಂಡು ಇದಕ್ಕೂ ಕೂಡಾ ನೀವು ಸ್ಪಂದಿಸದೇ ಇದ್ದಲ್ಲಿ ರೈತರಿಂದ ಮುಂದಾಗುವ ಅನಾಹುತಗಳಿಗೆ ತಾವುಗಳೇ ಹೊಣೆಗಾರರಾಗುತ್ತೀರೆಂದು ಕೋರಲಾಗಿದೆ. ಕೂಡಲೆ ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ತಮ್ಮಲ್ಲಿ ಆದರಪೂರ್ವಕ ವಿನಂತಿಸುತ್ತೆವೆ ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್ ಅವರ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
ಈ ಸಂದರ್ಭದಲ್ಲಿ ವಿಶ್ವನಾಥ ಬಿರಾದಾರ, ಸತೀಷ ತೋಳನೂರ, ಶಿವಾನಂದ ಬಿರಾದಾರ, ಸುನೀಲ ಜಿತ್ತಿ, ರವಿ ತೋಳನೂರ, ಎಮ್ ಆರ್ ಜಿತ್ತಿ, ಆಕಾಶ ನಾವಿ, ಸಿದ್ದಣ್ಣಾ ಮಾಳಾಬಾಗಿ, ಸಂತೋಷ ಅಂಜುಟಗಿ, ವಿಶ್ವನಾಥ ಮೇತ್ರಿ, ಈಶ್ವರ ಮಾಳಾಬಾಗಿ, ರತ್ನಪ್ಪ ಮಾಶ್ಯಾಳ, ಶಂಕರ ಬಿರಾದಾರ ಇತರರು ಇದ್ದರು.
