ಬೆಂಗಳೂರು: ಜೂನಿಯರ್ NTR ನಿನ್ನೆ (ಭಾನುವಾರ ಮಾರ್ಚ್ 08) ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಆಗಮಿಸಿ ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆ ಮಾಡಿ ಕನ್ನಡದಲ್ಲಿ ಮಾತನಾಡಿ ಕನ್ನಡ ಅಭಿಮಾನಿಗಳ ಮನದಲ್ಲಿ ಮತ್ತಷ್ಟು ಬೇರೂರು ಇದ್ದಾರೆ.
ಎಲ್ಲರಿಗೂ ನಮಸ್ಕಾರ ಎಂದು ಮಾತು ಪ್ರಾರಂಭಿಸಿದ ಜೂನಿಯರ್ NTR, ಕರ್ನಾಟಕಕ್ಕೆ ಬರೋದು ಎಂದರೆ ನನಗೆ ಬಹಳ ಖುಷಿಯಾಗುತ್ತದೆ. ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ನನ್ನ ತಾಯಿ, ಕರ್ನಾಟಕದ ಕುಂದಾಪುರದವರು. ನನಗೆ ಕನ್ನಡ ಅಂದರೆ ಅಚ್ಚುಮೆಚ್ಚು ಮತ್ತು ಎಲ್ಲಿಲ್ಲದ ಪ್ರೀತಿ ಎಂದು ಹೇಳಿದ್ದಾರೆ. ಕರ್ನಾಟಕಕ್ಕೆ ಬಂದರೆ ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಹಾಗೆ ಅನಿಸುತ್ತದೆ ಎಂದು ಹೇಳಿದರು.
ಕರ್ನಾಟಕಕ್ಕೆ ಬರುವುದೆಂದರೆ ನನಗೆ ಬಹಳ ಇಷ್ಟ ಎಂದು ಕನ್ನಡತಲ್ಲಿಯೇ ಮಾತನಾಡಿ ಮತ್ತಷ್ಟು ಕನ್ನಡ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಟಿ20 ಕಿರೀಟವನ್ನ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ
ಇದೇ ವೇಳೆ 2009ರಲ್ಲಿ ಸಂಭವಿಸಿದ್ದ ಭಾರಿ ರಸ್ತೆ ಅಪಘಾತದ ಬಳಿಕ ಜೂ ಎನ್ಟಿಆರ್ ಅವರಿಗೆ ಇದೇ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯ ಹೊಸ ಘಟಕ ಉದ್ಘಾಟನೆಗೆ ಅವರು ವಿಶೇಷವಾಗಿ ಹಾಜರಾಗಿದ್ದರು.
