ದುಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಜೂನ್ 4ಕ್ಕೆ ಇಡೀ ವಿಶ್ವದಾದ್ಯಂತ ತೆರೆ ಕಾಣುತ್ತಿದ್ದು, ಯಶ್ ಅಭಿಮಾನಿಗಳು ‘ಟಾಕ್ಸಿಕ್’ ಸಿನಿಮಾ ವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ನಟ ಯಶ್ ಅವರು ಕೆಜಿಎಫ್ 2 ಸಿನಿಮಾದಿಂದ ಹಿಡಿದು ಟಾಕ್ಸಿಕ್ ಸಿನಿಮಾದಲ್ಲೂ ಕೂಡ ಅವರ ಸ್ಟೈಲ್ ಒಂದೇ ರೀತಿಯಾಗಿದ್ದು ಅಂದರೆ ಉದ್ದನೆ ಕಡ್ಡ ಹಾಗೂ ಉದ್ದನೆಯ ಕೂದಲನ್ನು ಹೊಂದಿದ್ದು ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರು ತಮ್ಮ ಕೂದಲು ಮತ್ತು ಗಡ್ಡವನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಟಾಕ್ಸಿಕ್ ಟೀಸರ್ ನಲ್ಲಿ ನಟ ಯಶ್ ಅವರು ಸಣ್ಣನೆ ಗಡ್ಡ ಹಾಗೂ ಸಣ್ಣನೆ ಕೂದಲನ್ನು ಹೊಂದಿರುವ ತುಣುಕು ಒಂದಿದ್ದು ಅಭಿಮಾನಿಗಳು ನೋಡಿ ಫುಲ್ ಖುಷಿಯಾಗಿದ್ದಾರೆ. ಇನ್ನು ಯೆಸ್ ಹಾಗೂ ರಾಧಿಕಾ ಪಂಡಿತ್ ಅವರು ದುಬೈನಲ್ಲಿ ಸುತ್ತಾಡುತಿದ್ದು ಇದೀಗ ಇವರಿಬ್ಬರ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲಾಗುತ್ತಿದೆ. ಇದನ್ನೂ ಓದಿ: ಇಂಟರ್ನೆಟ್ನಲ್ಲಿ ಧೂಳ್ ಎಬ್ಬಿಸುತ್ತಿದೆ ಟಾಕ್ಸಿಕ್ ಸಿನಿಮಾದ ಮೊದಲ ಸಾಂಗ್
ಯಶ್ ರೆಸ್ಟೋರೆಂಟ್ ಹೊರ ಭಾಗದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶಾರ್ಟ್ ಹೇರ್ ಹಾಗೂ ಸಣ್ಣದಾದ ಗಡ್ಡದಲ್ಲಿ ಕಾಣಿಸಿಕೊಂಡರು. ಈ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಅವರನ್ನು ಹೊಸ ಅವತಾರದಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಯಶ್ ಜೊತೆ ರಾಧಿಕಾ ಕೂಡ ಇದ್ದರು.
