Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೋದಿಯವರು ಸಾಲ ಮಾಡದೇ ದೇಶ ನಡೆಸ್ತಿದರಾ ಅದಕ್ಕೆ ಇವರೇ ಬೇಕಾ?: ಪ್ರಿಯಾಂಕ್ ಖರ್ಗೆ
  • Politics
  • State
  • ಬೀದರ್

ಮೋದಿಯವರು ಸಾಲ ಮಾಡದೇ ದೇಶ ನಡೆಸ್ತಿದರಾ ಅದಕ್ಕೆ ಇವರೇ ಬೇಕಾ?: ಪ್ರಿಯಾಂಕ್ ಖರ್ಗೆ

Praja Vahini March 7, 2026 1 minute read
WhatsApp Image 2026-03-07 at 11.55.04 (1)
Spread the love

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಶುಕ್ರವಾರ ಮಾರ್ಚ್ 06) ರಂದು 17ನೇ ಬಾರಿ ಬಜೆಟ್ ಮಂಡಿಸಿ ಕರ್ನಾಟಕ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ನಾಯಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮಹತ್ವದ ಬಜೆಟ್ ಮಂಡಿಸಿದ್ದು ಈ ಬಜೆಟ್ ವಿರುದ್ಧ ಇದೀಗ ರಾಜ್ಯ ಬಿಜೆಪಿಯು ಹೋರಾಟ ನಡೆಸುವುದರ ಜೊತೆಗೆ ಸಾಲರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಈ ಕುರಿತು ಇದೀಗ ಸಚಿವ ಪ್ರಿಯಾಂಕ ಖರ್ಗೆ ಅವರು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬಿಹಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದರಿಂದ ರಾಜ್ಯದಲ್ಲಿ ಇಷ್ಟೊಂದು ಸಾಲ ಆಗಿದೆ. ಈ ಸಾಲಕ್ಕೆ ಪ್ರಮುಖ ಕಾರಣವೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಅವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಅಪಪ್ರಚಾರ

ಕೇಂದ್ರ ಸರ್ಕಾರ ನಮ್ಮ 80 ಸಾವಿರ ಕೋಟಿ ರೂ. ಪಾಲನ್ನ ನೀಡಿಲ್ಲ. ಅದರಿಂದಾಗಿ ಸಾಲವಾಗಿದೆ. ಎಎಒ ಯೋಜನೆಯ ಕೇಂದ್ರದ ಪಾಲಾದ 15 ಸಾವಿರ ಕೋಟಿ ರೂ. ನಾವು ಕೊಟ್ಟಿದ್ದೇವೆ. ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೂಡಾ ಕೇಂದ್ರ ನೀಡಿಲ್ಲ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಿಗೆ ನಾವು ಅನುದಾನ ಕೊಡ್ತಿದ್ದೇವೆ. ನಾವು ಸಾಲ ಮಾಡಿದ್ದನ್ನ ಮಾತ್ರ ಹೇಳ್ತಾರೆ. ಮೋದಿಯವರು 200 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅವರು ಕೂಡಾ ಸಾಲ ಮಾಡೇ ದೇಶ ನಡೆಸುತ್ತಿದ್ದಾರೆ. ಅದನ್ನು ನಡೆಸಲಿಕ್ಕೆ ಅವರೊಬ್ಬರೇ ಬೇಕಾ? ಬಿಜೆಪಿಯವರ ರೀತಿ ಚಿಕ್ಕಮಕ್ಕಳು ಕೂಡಾ ಮಾತನಾಡಲ್ಲ, ಅವರನ್ನ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಅಪಪ್ರಚಾರ
Next: ಯಶ್ ಹೊಸ ಲುಕ್ಕಿಗೆ ಫಿದಾ ಆದ ಫ್ಯಾನ್ಸ್

Views:

40

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.