Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪಡಗದಹಳ್ಳಿ; ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ
  • ಶಹಾಪುರ

ಪಡಗದಹಳ್ಳಿ; ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ

Praja Vahini March 3, 2026
WhatsApp Image 2026-03-03 at 16.30.25
Spread the love

ಸಾಥಖೇಡ ಗ್ರಾ.ಪಂ ಎದುರು ಕೂಲಿ ಕಾರ್ಮಿಕರು ಮಹಿಳೆಯರಿಂದ ಪ್ರತಿಭಟನೆ

ಶಹಾಪುರ (ಯಡ್ರಾಮಿ): ನರೇಗಾ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಅಡಿಯಲ್ಲಿ ಮಾನವ ದಿನಗಳ ಆಧಾರದ ಮೇಲೆ ಕೂಲಿ ಕೆಲಸ ಕೊಡದಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಂಘದ ತಾಲೂಕ ಅಧ್ಯಕ್ಷ ಶಶಿಕುಮಾರ ಗೇಜ್ಜೆ ಮಾತನಾಡಿ, ತಾಲೂಕಿನ ಸಾಥಖೇಡ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಪಡಗದಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ. ಅನುದಾನದ ಲೆಕ್ಕ ತೋರಿಸಿ ಯಾವುದೇ ಕೆಲಸ ಮಾಡದೇ ಸರ್ಕಾರದ ಹಣ ಲೂಟಿ ಹೊಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕೂಲಿ ಕೆಲಸ ಇಲ್ಲದೇ ಅನ್ನದಾತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದು, ಇದುವರೆಗೂ ಕೆಲಸ ಕೊಡದೆ ಕೂಲಿ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಹಾರಿಕೆ ಉತ್ತರ ನೀಡುವ ಅಧಿಕಾರಿಗಳ ನಡೆ ಬೇಸರ ತಂದಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

ಸರ್ಕಾರ ಬಡವರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ನರೇಗಾ, ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿ ಮಾಡಿ ಕೂಲಿ ಕೆಲಸ ನೀಡಿ ಆಸರೆಯಾಗುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆಗಳು ಸರಿಯಾಗಿ ಬಡಿವರಿಗೆ ತಲುಪುತ್ತಿಲ್ಲ.

ಬಡತನದಲ್ಲಿರುವ ಕುಟುಂಬಗಳು ಕೆಲಸ ಇಲ್ಲದೇ ದೂರದ ಬೆಂಗಳೂರು, ಪುಣೆ, ಬಾಂಬೆಗಳಿಗೆ ಹೋಗಿ ದುಡಿಯುವ ಸ್ಥೀತಿ ಇದ್ದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಬೇಕು. ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ನಿಮ್ಮ ಜಮೀನಿಗೆ ಹಕ್ಕು ಪತ್ರ ಇಲ್ವಾ? ಹಾಗಾದ್ರೆ ಚಿಂತೆ ಬಿಡಿ ಇನ್ಮುಂದೆ ಸರ್ಕಾರನೇ ನಿಮ್ಮನೆ ಬಾಗಿಲಿಗೆ ಬರುತ್ತೆ!

ಈ ಸಂದರ್ಭದಲ್ಲಿ ಪರಶುರಾಮ ಹೊಸ್ಮನಿ, ಮಲ್ಲನಗೌಡ ಮಾಲಿ ಪಾಟೀಲ್, ಭೀಮರಾಯ ಗೋಗಿ, ಶಿವು ಗೋಗಿ, ಬಸಪ್ಪ ಹೊಸ್ಮನಿ, ಶರಣು, ಗುರಪ್ಪ ಬಡಿಗೇರ, ಅಂಬ್ರೇಶ, ದೇವಪ್ಪ, ಈಶನಗೌಡ ಪೊ.ಪಾಟೀಲ್, ಕಾಶಯ್ಯ ಸ್ವಾಮಿ, ಮಹಾಂತೇಶ ಬಡಿಗೇರ, ಭಗವಾನ್, ನಿಂಗು ಸೇರಿದಂತೆ ಕೂಲಿ ಕಾರ್ಮಿಕರು, ಮಹಿಳೆಯರು, ರೈತರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ವೀಳ್ಯದೆಲೆ ತಿಂದರೆ ಏನೆಲ್ಲಾ ಪ್ರಯೋಜನೆಗಳಿವೆ ಗೊತ್ತಾ?
Next: ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್

Views:

53

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.