Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಾಳೆ ರಶ್ಮಿಕಾ- ವಿಜಯ್ ರಿಸೆಪ್ಷನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಈ ನವಜೋಡಿಗಳು
  • Uncategorized

ನಾಳೆ ರಶ್ಮಿಕಾ- ವಿಜಯ್ ರಿಸೆಪ್ಷನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಈ ನವಜೋಡಿಗಳು

Praja Vahini March 3, 2026 1 minute read
WhatsApp Image 2026-03-03 at 13.37.53
Spread the love

ಬೆಂಗಳೂರು: ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅವರು ಫೆಬ್ರುವರಿ 26ರಂದು ಉದಯಪುರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಇದೀಗ ಈ ಎರಡು ಜೋಡಿಗಳು ನ್ಯಾಷನಲ್ ಲೆವೆಲ್ ಗೆ ಸುದ್ದಿ ಆಗುತ್ತಿದ್ದಾರೆ.

ಹೌದು, ಅಧಿಕೃತವಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಸತಿಪತಿಗಳಾಗಿದ್ದು ಮಾರ್ಚ್ 4ರಂದು ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮವನ್ನು ರಾಜಕಾರಣಿಗಳು, ಸಿನಿಮಾ ತಾರೆಗಳು ಸೇರಿದಂತೆ ತಮ್ಮ ಬಂಧು ಮಿತ್ರರಿಗೆ ಅದ್ದೂರಿ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.

ಇನ್ನು ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ನಾಳೆ ಸಂಜೆ ರಶ್ಮಿಕಾ-ವಿಜಯ್ ಆರತಕ್ಷತೆ ಬಲು ಅದ್ಧೂರಿಯಾಗಿ ನಡೆಯಲಿದೆ. ಆರತಕ್ಷತೆಗೆ ತೆಲುಗು ಚಿತ್ರರಂಗದ ಹಲವಾರು ಗಣ್ಯರು, ಬಾಲಿವುಡ್ ನ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಆಂಧ್ರ-ತೆಲಂಗಾಣದ ಪ್ರಮುಖ ರಾಜಕಾರಣಿಗಳು, ಕೇಂದ್ರದ ಕೆಲವು ಪ್ರಮುಖ ರಾಜಕಾರಣಿಗಳು ಸಹ ಇವರ ವಿವಾಹ ಆರತಕ್ಷತೆಗೆ ಹಾಜರಿ ಹಾಕಲಿದ್ದು, ಭಾರಿ ಭದ್ರತೆಯ ಅವಶ್ಯಕತೆ ಇದೆ. ಇದನ್ನೂ ಓದಿ: ಗಂಡನ ಮನೆ ಸೇರಿದ ರಶ್ಮಿಕಾ ಮಂದಣ್ಣ

ಅಲ್ಲದೆ, ಇದೀಗ ಆರತಕ್ಷತೆಯ ಸ್ಥಳದ ಮಾಹಿತಿ ಬಹಿರಂಗ ಆಗಿರುವ ಕಾರಣ ಸಾವಿರಾರು ಮಂದಿ ಅಭಿಮಾನಿಗಳು ಸಹ ಆಗಮಿಸುವ ಸಾಧ್ಯತೆ ಇದೆ. ಇದರಿಂದ ಭದ್ರತೆ ಕಠಿಣವಾಗಲಿದೆ. ಇದೀಗ ರಶ್ಮಿಕಾ ಮತ್ತು ವಿಜಯ್ ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ‘ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ ಮುಖ್ಯ. ನಿಮ್ಮ ಆಶೀರ್ವಾದ ಮತ್ತು ಬೆಂಬಲಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಮತ್ತು ಈ ಆಚರಣೆಯನ್ನು ಎಲ್ಲರಿಗೂ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಇರಿಸಲು ನಮಗೆ ಸಹಾಯ ಮಾಡುವಲ್ಲಿ ನಿಮ್ಮ ಸಹಕಾರವನ್ನು ನಾವು ಕೋರುತ್ತೇವೆ’ ಎಂದಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: Iran Israel War; ದುಬೈ ನಿಂದ ಸೇಫ್ ಆಗಿ ತಾಯ್ನಾಡು ಸೇರಿದ 500 ಕ್ಕೂ ಹೆಚ್ಚು ಮಂದಿ
Next: ಬಿಜೆಪಿ, ಜೆಡಿಎಸ್ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ: ಸಿಎಂ

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.