Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ
  • Politics
  • State
  • ಹಾವೇರಿ

ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ

Praja Vahini February 28, 2026 1 minute read
WhatsApp Image 2026-02-28 at 14.16.40 (1)
Spread the love

ಹಾವೇರಿ: ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ. ಯುವಕರು ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ, ನೈತಿಕತೆಯಿಂದ ವ್ಯಾಪಾರ ಮಾಡಿದರೆ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತೆರೆದಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ಇದರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು, ಇವತ್ತು ಅತ್ಯಂತ ಸಂತಷದ ದಿನ ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ ಆಗುತ್ತಿದೆ. ಒಟ್ಟು ನಲವತ್ರು ಕೋಲ್ಡ್ ಸ್ಟೋರೆಜ್ ಈ ವರ್ಷದಲ್ಲಿ ಬ್ಯಾಡಗಿ ಸುತ್ತ ಮುತ್ತ ತಲೆ ಎತ್ತುತ್ತಿವೆ. ಬ್ಯಾಡಗಿಯ ಮಾರುಕಟ್ಟೆಯನ್ನು ನಿರ್ಮಿಸಿರುವ ವ್ಯಾಪಾರಸ್ಥರು ಮತ್ತು ರೈತರ ಸಂಪೂರ್ಣ ಸಹಕಾರದಿಂದ ಬ್ಯಾಡಗಿ ಜಗತ್ ಪ್ರಸಿದ್ದ ವಾಗಿದೆ‌.

ಇದಕ್ಕೆ ಸುಮಾರು 50 ವರ್ಷದ ಪರಿಶ್ರಮ ಇದೆ. ಇಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ಆರಂಭವಯಿತು. ಆಗ ನಮ್ಮೂರು ಕಮಡೊಳ್ಳಿಯಲ್ಲಿ ಪಕ್ಕ ಜಾಗನೂರು ಅಂತ ಇದೆ. ಅಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಜಾಗನೂರು ಸ್ಪೆಷಲ್ ಅಂತ ಮೆಣಸಿನಕಾಯಿ ಇದೆ. ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹೋದರೆ ಎಲ್ಲ ಕೆಂಪು ಬಣ್ಣ ಕಾಣಿಸುತ್ತಿತ್ರು. ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿತ್ತು. ಅದೆಲ್ಲವೂ ಬ್ಯಾಡಗಿಗೆ ಬರುತ್ತಿತ್ತು. ಅಣ್ಣಿಗೇರಿ ಮೆಣಸಿನಕಾಯಿ ಕೂಡ ಬಹಳ ಪ್ರಸಿದ್ದವಾಗಿದೆ. ಆ ಭಾಗದ ರೈತರ ಶ್ರಮ ಬ್ಯಾಡಗಿ ವ್ಯಾಪಾರಸ್ಥರ ಬುದ್ದಿವಂತಿಕೆಯಿಂದ ಬ್ಯಾಡಗಿ ಮೆಣಸಿನಕಾಯಿ ಜಗತ್ ಪ್ರಸಿದ್ದ ವಾಗಿದೆ. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಡಿ.ಕೆ. ಸುರೇಶ್

ಬ್ಯಾಡಗಿ ಎಪಿಎಂಸಿ ಅಂದರೆ ಬಹಳ ಶ್ರೀಮಂತ ಎಪಿಎಂಸಿ ಆಗಿದೆ. ಅಷ್ಟು  ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಆಗುತ್ತಿದೆ ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರದ ಬೇಡಿಕೆ ಇದೆ‌. ನಾವಿದ್ದಾಗ ಬಜೆಟ್ ನಲ್ಲಿ ಅನುಮೊದನೆ ಮಾಡಿದ್ದೇವು, ಈಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ. ಬ್ಯಾಡಗಿ ಮೆಣಸಿನಕಾಯಿ ಸಂಶೋಧನೆ ಮಾಡಿ ಔಷಧಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ನೈಸರ್ಗಿಕವಾಗಿ ಬೆಳೆದ ಮೆಣಸಿನಕಾಯಿ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಅದನ್ನು ಬಂಗಾರ ತೂಕ ಮಾಡಿದಂತೆ ಮಾಡುತ್ತಾರೆ.  ಮೆಣಸಿನಕಾಯಿ ಹಲವಾರು ರೀತಿ ಉಪಯೋಗ ಆಗುತ್ತಿದೆ ಎಂದು ಹೇಳಿದರು.

 

 

About the Author

Praja Vahini

Editor

View All Posts

Spread the love

Post navigation

Previous: ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಡಿ.ಕೆ. ಸುರೇಶ್
Next: ಹುಳಿಮಾವು ಬ್ರಹ್ಮ ರಥೋತ್ಸವಕ್ಕೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಚಾಲನೆ

Views:

35

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.