ಬೊಮ್ಮನಹಳ್ಳಿ: ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಶಾಸಕ ಸತೀಶ್ ರೆಡ್ಡಿ ಕ್ರಿಕೆಟ್ ಆಡುವುದರ ಮೂಲಕ ಚಾಲನೆ ನೀಡಿದ್ರು. ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಷ್ಟೇ ಅಲ್ಲದೆ ಆಟಗಾರರಗಿಗೆ ಕ್ರಿಕೆಟ್ ಆಟದ ಕುರಿತು ಹಲವು ಸಲಹೆಗಳನ್ನ ನೀಡಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಶುಭಕೋರಿದ್ರು. ಒಟ್ಟಾರೆ ಈ ಕ್ರಿಕೆಟ್ ತಂಡದಲ್ಲಿ 16 ತಂಡಗಳು ಭಾಗವಹಿಸಿದ್ದವು.
ಇನ್ನು ಟೂರ್ನಿ ಮುಗಿದ ಬಳಿಕ ಬಹುಮಾನ ವಿತರಣೆಯನ್ನೂ ಸಹ ಶಾಸಕರೇ ನಡೆಸಿಕೊಟ್ಟರು. ಪ್ರಥಮ ಬಹುಮಾನವಾಗಿ 50 ಸಾವಿರ ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನವಾಗಿ 25 ಸಾವಿರ ನಗದು ಮತ್ತು ಪಾರಿತೋಷಕ ವಿತರಿಸಿದ್ರು.
ಈ ಸಂದರ್ಭದಲ್ಲಿ ಸತೀಶ್ ರೆಡ್ಡಿ ಅವರೊಟ್ಟಿಗೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷರು ಹಾಗೂ ಗೋಕುಲ್ ಗ್ರೂಪ್ಸ್ ಮಾಲೀಕರಾದ ಎಂ.ಮಂಜುನಾಥ್, ಗೋಕುಲ್ ಗ್ರೂಪ್ಸ್ನ ಎಂ.ನವನೀತ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
