ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಬಿಎ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಈಗಾಗಲೇ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಕಾಂಗ್ರೆಸ್ ಪಕ್ಷದಿಂದ ಸುಮಾರು 900 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 30 ಒಳಗಡೆ ಜಿಬಿಎ ಚುನಾವಣೆ ಮಾಡಬೇಕೆಂದು ಆದೇಶ ಹೊರಡಿಸಿರುವ ಬೆನ್ನಲ್ಲೇ ಇದೀಗ ತರಾ ತುರಿಯಾಗಿ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಮತದಾರರ ಪಟ್ಟಿ ಲೋಪದೋಷ ಪರಿಷ್ಕರಣೆಗೆ ಒತ್ತಾಯ ಮಾಡುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದಿಂದಲೇ ಈಗ ಜಿಬಿಎ ಚುನಾವಣೆಗೆ 900 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು 369 ವಾರ್ಡ್ಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಪಟ್ಟಿ ಏರಿಕೆ ಆಗುತ್ತಿದೆ. 1,600 ಮಂದಿ ಅರ್ಜಿಯನ್ನ ಸ್ವೀಕಾರ ಮಾಡಿದ್ದಾರೆ. 1,600 ಮಂದಿಯಲ್ಲಿ 369 ವಾರ್ಡ್ಗೆ 900 ಆಕಾಂಕ್ಷಿಗಳು ಚುನಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಟಿಕೆಟ್ ಹಂಚಿಕೆ ವೇಳೆ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಒಂದೇ ಕುಟುಂಬದವರು ಬೇರೆ ಬೇರೆ ವಾರ್ಡ್ಗಳಲ್ಲಿ ಮತದಾನ ಮಾಡುವ ರೀತಿ ಮತದಾರರ ಪಟ್ಟಿ ಇದೆ, ಇದು ಮತಗಳು ವಿಭಜನೆ ಆಗುತ್ತದೆ. ಒಂದೇ ಕುಟುಂಬದ ಮತದಾನ ಚದುರುವಿಕೆ ಮಾಡಿದ ಬಿಎಲ್ಓಗಳನ್ನ ಅಮಾನತು ಮಾಡೋದಕ್ಕೂ ಮನವಿ ಮಾಡಿದೆ. ಈ ರೀತಿ ಲೋಪದೋಷಗಳು ಇದ್ದರೆ ಸರಿಪಡಿಸುವುದಕ್ಕೆ ಮನವಿ ಮಾಡಿದ್ದಾರೆ.
