ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ವಸ್ತುಗಳ ಜೊತೆ ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಾಗುತ್ತಿರುವ ಬೆನ್ನೆಲೆ ಇದೀಗ KSRTC ಪ್ರಯಾಣಿಕರಿಗೆ ಮತ್ತೊಂದು ಶಾಕ್ ನೀಡಿದೆ.
ಹೌದು, KSRTC ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಇಂದಿನಿಂದ (ಸೋಮವಾರ ಫೆಬ್ರುವರಿ 16) ರಿಂದ ಲಗೇಜ್ ಶುಲ್ಕವನ್ನು ಹೆಚ್ಚಿಸಿದೆ. ಸಂಸ್ಥೆಯ ಪ್ರಕಟಣೆಯಂತೆ ಪ್ರತಿಯೊಂದು ದರ ಪರಿಷ್ಕರಣೆಯ ನಂತರ ಲಗೇಜ್ ಶುಲ್ಕವನ್ನು ಮರುಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಕೆಜಿ ₹6 ರಿಂದ ₹145 ವರೆಗೆ ಹೆಚ್ಚಿಸಲಾಗಿದೆ. ದರ ಪ್ರಯಾಣದ ದೂರ ಮತ್ತು ಸ್ಟೇಜ್ಗಳ ಆಧಾರದ ಮೇಲೆ ಬದಲಾಗುತ್ತದೆ, ಇಲ್ಲಿ ಒಂದು ಸ್ಟೇಜ್ ಸುಮಾರು 6 ಕಿಲೋಮೀಟರ್ ಎಂದು ಪರಿಗಣಿಸಲಾಗಿದೆ.
ಹಿಂದಿನ ದರಗಳಿಗೆ ಹೋಲಿಸಿದರೆ ಈ ಬಾರಿ ಶೇ. 15 ರಷ್ಟು ದರ ಏರಿಕೆ ಮಾಡಲಾಗಿದೆ. ಪ್ರಯಾಣಿಕರಿಗೆ 30 ಕೆಜಿ ವರೆಗೆ ಉಚಿತ ಲಗೇಜ್ ಸಾಗಿಸಲು ಅವಕಾಶ ಮುಂದುವರಿಯಲಿದೆ. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಭ್ಯವಿರುವ ಸ್ಥಳದ ಅನುಸಾರ ವಾಶಿಂಗ್ ಮಷೀನ್, ಫ್ರಿಜ್, ಟ್ರಕ್ ಟೈರ್, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪೈಪ್ಗಳು, ಗೃಹೋಪಯೋಗಿ ಪಾತ್ರೆಗಳು, ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳನ್ನು ಸಹ ಸಾಗಿಸಲು ಅವಕಾಶ ಇದೆ. ಈ ಹೊಸ ಕ್ರಮವು ಪ್ರಯಾಣಿಕರಿಗೆ ಸ್ಪಷ್ಟತೆಯನ್ನು ನೀಡುತ್ತಿದ್ದು, ಲಾಜಿಸ್ಟಿಕ್ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಾಯ ಮಾಡಲಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ
