ಹಬ್ಬದ ವಾತಾವರಣ ಸೃಷ್ಠಿಸಿದ ಜನ್ಮದಾತರಿಗೆ ಪಾದಪೂಜೆ
ಶಹಾಪುರ: ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ತಂದೆ-ತಾಯಿಗೆ ಪಾದಪೂಜೆಯಂತಹ ಸಂಸ್ಕೃತಿ ಬೆಳೆಸಿದರೆ, ಹಿರಿಯರ ಮೇಲಿನ ಗೌರವ ಪ್ರತೀತಿ ಹೆಚ್ಚಾಗಲಿದ್ದು ಇಂತಹ ಕಾರ್ಯಕ್ರಮದ ಮೂಲಕ ಸಂಸ್ಕಾರ ಬೆಳೆಸುತ್ತಿರುವ ಎಸ್.ಕೆ ಪಬ್ಲೀಕ್ ಶಾಲೆಯ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಗುಂಬಳಾಪುರ ಹಿರೇಮಠದ ಷ.ಬ್ರ ಸಿದ್ದೇಶ್ವರ ಶಿಚಾರ್ಯರು ನುಡಿದರು.
ನಗರದ ಎಸ್.ಕೆ ಪಬ್ಲಿಕ್ ಶಾಲೆಯ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಉಟ್ಟ ಬಟ್ಟೆಯಲ್ಲಿ ಸಾಧನೆಯ ಹಾದಿ ಹಿಡಿದು ಹುಟ್ಟೂರು ಬಿಟ್ಟು ಗೊತ್ತಿಲ್ಲದ ಊರಿಗೆ ಬಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳಿಗೆ ಒಳ್ಳೆಯ ಗುರುವಾಗಿ , ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ನಡೆಸಿಕೊಂಡು ಹೋಗುತ್ತಿರುವ ಸಂಸ್ಥೆಯ ಸಂಸ್ಥಾಪಕ ಭೀಮನಗೌಡ ಬಿರಾದಾರ ಅವರು ಇತರರಿಗೂ ಮಾದರಿಯಾಗಿದ್ದಾರೆ ಎಂದರು. ಶಾಲೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ವಿಶೇಷವಾಗಿ ಪೋಷಕರಿಗೆ ಪಾದಪೂಜೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಹೈಟೆಕ್ ಕಾಲದಲ್ಲಿ ಸಂಭಂಧಗಳು ಕಡಿದು ಹೊಗುತ್ತಿವೆ. ಪ್ರಸ್ತುತ ತಂದೆ ತಾಯಿ ಬಗ್ಗೆ ಇರುವ ಗೌರವ ಪ್ರೀತಿ ವಿಶ್ವಾಸಗಳು ಮಕ್ಕಳಿಂದ ದೂರವಾಗುತ್ತಿದ್ದು, ಪಾದಪೂಜೆಗಳಂತಹ ಸಂಸ್ಕಾರಯುತ ಕಾರ್ಯಕ್ರಮಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿವೆ. ಶಾಲಾ ದಿನಗಳಲ್ಲೇ ಮಕ್ಕಳಿಗೆ ತಂದೆ ತಾಯಿ ಮಹತ್ವ ಮತ್ತು ಅವರಿಂದಲೇ ಮಕ್ಕಳ ಜಗತ್ತು ಎನ್ನುವ ಅರಿವು ಮೂಡಿಸುತ್ತಿದೆ. ಈ ಹಿನ್ನಲೇ ನೂರಾರು ಮಕ್ಕಳು ಏಕಕಾಲಕ್ಕೆ ಜನ್ಮದಾತರಿಗೆ ಪಾದಪೂಜೆ ಸಲ್ಲಿಸುತ್ತಿರುವುದು ವಿಶೇಷ. ಮತ್ತು ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ದೇ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು ಎಂದರು.
ಉ.ಕ ಕರವೇ ಅಧ್ಯಕ್ಷ ಡಾ.ಶರಣು ಗದ್ದುಗೆ ಮಾತನಾಡಿ, ಮಕ್ಕಳು ವಿದ್ಯಾಬ್ಯಾಸವನ್ನು ಗಂಭಿರವಾಗಿ ತೆಗೆದುಕೊಂಡಾಗ ಮಾತ್ರ ಜೀವನದಲ್ಲಿ ಗೆಲುವನ್ನು ಸಾಧಿಸಬಹುದಾಗಿದೆ. ಆದ್ದರಿಂದ ಓದಿನ ಕಡೆಗೆ ಹೆಚ್ಚು ಗಮನ ಕೊಡಿ ಎಂದರು.
ಸಂಸ್ಥೆಯ ಸಂಸ್ಫಾಪಕ ಕಾರ್ಯದರ್ಶಿ ಭೀಮನಗೌಡ ಬಿರಾದಾರ ಮಾತನಾಡಿ ಮುಂದಿನ ಮಾರ್ಚ್ನಲ್ಲಿ ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಕಲಿತ ಶಾಲೆಗೆ ಮತ್ತು ಪೋಷಕರ ಕೀರ್ತಿ ಹೆಚ್ಚಿಸಿ ಎಂದರು.
ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು, ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪಾದಪೂಜೆ ಮಾಡಿದ ಮಕ್ಕಳು
ವಿದ್ಯಾರ್ಥಿಗಳು ಹೆತ್ತವರ ಪಾದಗಳ ತೊಳೆದು ಬಳಿಕ ವಿಭೂತಿ, ಕುಂಕಮ, ಅರಿಶಿನ ಹೂವು ಇಟ್ಟು ಶ್ರದ್ಧಾಭಕ್ತಿಯಿಂದ ತಂದೆ ತಾಯಿಗಳ ಪಾದಪೂಜೆ ನೇರವೆರಿಸಿ ಗಮನ ಸೆಳೆದರು. ಪಾದಪೂಜೆ ಮಾಡಿದ ಮಕ್ಕಳಿಗೆ ಅಕ್ಷತೆ ಹಾಕಿ ಪೋಷಕರು ಆಶೀರ್ವಾದ ಮಾಡಿದರು. ಎಲ್ಲ ಮಕ್ಕಳು ಹೆತ್ತವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಅವರ ತಂದೆತಾಯಿಯಂದಿರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪೋಷಕರು ಮಕ್ಕಳು ಭಾವನಾತ್ಮಕವಾಗಿ ಬೆರೆತು ಸಂಭ್ರಮಿಸಿದ ಕ್ಷಣವಾಗಿತ್ತು.
ಈ ಸಂದರ್ಭದಲ್ಲಿ ಮಾ.ಜಿ ತಾ.ಪಂ ಅಧ್ಯಕ್ಷ ಬಸವಂತರೆಡ್ಡಿ ಸಾಹು, ನಗರ ಯೋಜನ ಪ್ರಾಧೀಕಾರ ಅಧ್ಯಕ್ಷ ಸಿದ್ದು ಆರಭೋಳ, ಬಿಆರ್‌ಸಿ ಅಂಬ್ರೇಶ ಕುಂಬಾರ, ಶಹಾಪುರ ವಾಣಿ ದಿನಪತ್ರಿಕೆ ಸಂಪಾದಕ ಈರಣ್ಣ ಹಾದಿಮನಿ, ಕಾ.ನಿ.ಪ.ಸಂಘ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮೌರ್ಯ, ಹಯ್ಯಾಳಪ್ಪ ಟಣಕೆದಾರ, ಶರಣು ಮಂಡಗಳ್ಳಿ, ತಿಪ್ಪಣ್ಣ ,ಪ್ರಾಂಶುಪಾಲ ಶಿವರಾಜ, ಸುರೇಶ, ಆಡಳಿತ ಅಧಿಕಾರಿ ಹಣಮಂತ್ರಾಯ ಹವಾಲ್ದಾರ, ಮಂಜು ಪಿ, ಶಿಕ್ಷಕ ವರ್ಗದವರಾದ ಅಮರ, ಚಿತ್ರರಂಜನಾ, ಸಂಗ್ರಾಂ ಸಿಂಗ್, ಸಂಗಯ್ಯ, ಉಮೇಶ, ಸುಪ್ರಭಾ, ಸುಭದ್ರ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಇದ್ದರು.
